Advertisement

Prajwal Revanna: ಹೊಳೆನರಸೀಪುರಕ್ಕೆ ಪ್ರಜ್ವಲ್‌; ಲೈಂಗಿಕ ದೌರ್ಜನ್ಯ ಕೇಸಲ್ಲಿ ಸ್ಥಳ ಮಹಜರು

08:46 PM Jun 08, 2024 | Team Udayavani |

ಹೊಳೆನರಸೀಪುರ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಡಿ ಎಸ್‌ಐಟಿ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಶನಿವಾರ ಹೊಳೆನರಸೀಪುರದ ನಿವಾಸಕ್ಕೆ ಕರೆತಂದು ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದರು.

Advertisement

ಪ್ರಜ್ವಲ್‌ ರೇವಣ್ಣ ಅವರನ್ನು ಹೊಳೆನರಸೀಪುರದ ನಿವಾಸಕ್ಕೆ ಕರೆತರುವ ಮಾಹಿತಿ ಪಡೆದಿದ್ದ ಸ್ಥಳೀಯ ಪೊಲೀಸರು, ನಿವಾಸದ ಬಳಿ ಭದ್ರತೆ ಕೈಗೊಂಡಿದ್ದರು. ರೇವಣ್ಣ ನಿವಾಸದ ಬಳಿ ಹೆಚ್ಚು ಜನರು ಸೇರಬಹುದೆಂಬ ನಿರೀಕ್ಷೆಯಲ್ಲಿ ಹಾಸನ ಎಎಸ್‌ಪಿ ಸೇರಿ ಹಿರಿಯ ಪೊಲೀಸ್‌ ಅಧಿಕಾರಿಗಳೇ ಭದ್ರತೆ ಮೇಲುಸ್ತುವಾರಿ ವಹಿಸಿದ್ದರು. ಮಧ್ಯಾಹ್ನ 2 ಗಂಟೆಗೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಗಾವಲು ವಾಹನಗಳೊಂದಿಗೆ ಭದ್ರತೆಯಲ್ಲಿ ರೇವಣ್ಣ ಅವರ ನಿವಾಸಕ್ಕೆ ಕರೆತಂದರು.

ಅಷ್ಟರೊಳಗೆ ಎಫ್ಎಸ್‌ಎಲ್‌ ತಂಡವೂ ರೇವಣ್ಣ ನಿವಾಸಕ್ಕೆ ಬಂದಿತ್ತು. 43 ದಿನಗಳ ನಂತರ ಹೊಳೆನರಸೀಪುರ ನಿವಾಸಕ್ಕೆ ಪ್ರಜ್ವಲ್‌ ಅವರನ್ನು ಕರೆತಂದು ಎಸ್‌ಐಟಿ ಮನೆಯ ಬೆಡ್‌ ರೂಂ, ಸ್ನಾನಗೃಹ ಮತ್ತಿತರ ಸ್ಥಳಗಳಲ್ಲಿ ಮಹಜರು ನಡೆಸಿದ ನಂತರ ಸಂಜೆ 5 ಗಂಟೆ ವೇಳೆಗೆ ಬೆಂಗಳೂರಿಗೆ ವಾಪಸ್‌ ಕರೆದೊಯ್ದರು. ಮಹಜರು ನಡೆಸುತ್ತಿದ್ದ ಸಂದರ್ಭದಲ್ಲಿ ರೇವಣ್ಣ ಅವರ ನಿವಾಸದ ಹೊರಗೆ ಸೇರಿದ್ದ ಹತ್ತಾರು ಜೆಡಿಎಸ್‌ ಕಾರ್ಯಕರ್ತರು ಪ್ರಜ್ವಲ್‌ ಅವರನ್ನು ಕರೆದೊಯ್ಯುವಾಗ ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ , ಪ್ರಜ್ವಲ್‌ ಅವರ ಪರ ಘೋಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next