Advertisement
ಇದನ್ನೂ ಓದಿ:ಆಗುಂಬೆ: ಪ್ರಪಾತದತ್ತ ನುಗ್ಗಿದ ಟ್ರಕ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ದುರಂತ
ವಿರಾರ್ ಪಶ್ಚಿಮದ ಅಗರವಾಲ್‌ನ ಗೋಕುಲ್ ಟೌನ್‌ಶಿಪ್‌ನಲ್ಲಿರುವ ಬ್ರೂಕ್ಲಿನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಮೃತ ಹರಿದಾಸ್ ಸಹಾರ್ಕರ್(72) ಅವರಿಗೆ
ವಿದ್ಯಾ (40) ಮತ್ತು ಸ್ವಪ್ನಾಲಿ (36) ಎಂಬ ಇಬ್ಬರು ಅವಿವಾಹಿತ ಹೆಣ್ಣು ಮಕ್ಕಳಿದ್ದು, ಸಹೋದರಿಯರು ತಮ್ಮ ತಂದೆಯ ಸಾವಿಗೆ ಕೊರೊನಾ ಕಾರಣ ಎಂದು ಅಪಾರ್ಥ ಮಾಡಿಕೊಂಡು, ಹೊರ ಪ್ರಪಂಚಕ್ಕೆ ತಿಳಿದರೆ ಅಧಿಕಾರಿಗಳು ಎಲ್ಲರನ್ನೂ ನಿರ್ಬಂಧಿಸುತ್ತಾರೆ ಎಂದು ಹೆದರಿ ತಮ್ಮ ತಂದೆಯ ಶವವನ್ನು ಮನೆಯಲ್ಲಿ ಅಡಗಿಸಿಟ್ಟಿದ್ದರು. ಸಮುದ್ರಕ್ಕೆ ಹಾರಿ ಆತ್ಮಹತ್ಯೆ
ಇದರಿಂದ ಭಯ ಹಾಗೂ ಖಿನ್ನತೆಗೊಳಗಾದ ವಿದ್ಯಾ ಮಂಗಳವಾರ ಸಂಜೆ ನವಪುರ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬುಧವಾರ ಬೆಳಗ್ಗೆ ತಂಗಿ ಸ್ವಪ್ನಾಲಿ ಕೂಡ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ದೋಣಿ ವಿಹಾರ ನಡೆಸುತ್ತಿದ್ದ ನಾಗರಿಕರು ಮತ್ತು ಸ್ಥಳೀಯ ಪೊಲೀಸರು ಅವಳನ್ನು ರಕ್ಷಿಸಿದರು. ಸ್ಥಳೀಯ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.