Advertisement

ಇರಾನ್ ಹಿಜಾಬ್ ಪ್ರತಿಭಟನೆ: ಅಣ್ಣನ ಮೃತ ದೇಹದ ಮುಂದೆ ಕೂದಲು ಕತ್ತರಿಸಿ ತಂಗಿಯ ಆಕ್ರೋಶ..

02:11 PM Sep 26, 2022 | Team Udayavani |

ಟೆಹ್ರಾನ್‌ : ಇರಾನಿನಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮಹ್ಸಾ ಅಮಿನಿಯ ಸಾವಿನ ನಂತರ ದಿನಕಳೆದಂತೆ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ. ಇರಾನ್‌ ಮಾಧ್ಯಮವೊಂದರ ಪ್ರಕಾರ ಇದುವರೆಗೆ ಪೊಲೀಸರ ಘರ್ಷಣೆಯಿಂದ ಇದುವರೆಗೆ 41 ಮಂದಿ ಸಾವನ್ನಪ್ಪಿದ್ದು, ಸುಮಾರು 700 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಸೆ.16 ರಿಂದ ಇರಾನ್‌ ನಲ್ಲಿ ಮಹ್ಸಾ ಅಮಿನಿಯ ಸಾವನ್ನು ಖಂಡಿಸಿ, ಅನೇಕ ಸಂಸ್ಥೆಗಳು, ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಿಂದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ್ದು, ಹಲವು ಮಂದಿಗೆ ಗಾಯಗಳಾಗಿವೆ.

ಇರಾನ್‌ ಪ್ರತಿಭಟನೆ ಕೂಗು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜನರ ಖಂಡನೆ, ಆಕ್ರೋಶ ಫೋಟೋ, ವಿಡಿಯೋ ರೂಪದಲ್ಲಿ ಸೋಶಿಯಲ್‌ ಮೀಡಿಯಾಲ್ಲಿ ಪೋಸ್ಟ್‌ ಆಗುತ್ತಿದೆ.

ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದು, ಜಾವೇದ್‌ ಹೈದರಿ ಎನ್ನುವ ಯುವಕ ಕೂಡ ಪ್ರತಿಭಟಿಸುತ್ತಲೇ ಸಾವಿಗೀಡಾದ್ದಾನೆ. ತನ್ನ ಅಣ್ಣನ ಮೃತದೇಹದ ಮುಂದೆ ತಂಗಿ ಕೂದಲು ಕತ್ತರಿಸಿ ರೋಧಿಸುತ್ತಿರುವ, ಸರ್ಕಾರದ ವಿರೋಧ ಪ್ರತಿಭಟಿಸುತ್ತಿರುವ ವಿಡಿಯೋವನ್ನು 1500tasvir_en ಎನ್ನುವ ಟ್ವಿಟರ್‌ ಖಾತೆ ಹಂಚಿಕೊಂಡು, ಇರಾನ್‌ ನಲ್ಲಿ ನಡೆಯುತ್ತಿರುವ ಹಿಜಾಬ್‌ ಕ್ರಾಂತಿಯ ದೃಶ್ಯವೆಂದು ಬರೆದುಕೊಂಡಿದ್ದಾರೆ.

ಇರಾನ್‌ ಸರ್ಕಾರ ಭಾನುವಾರ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಿ ಎಂದು ಹೇಳಿದೆ.

Advertisement

ಘಟನೆ ಹಿನ್ನೆಲೆ: ಮಹ್ಸಾ ಅಮಿನಿ(22ವರ್ಷ) ಕಳೆದ ವಾರ ಇರಾನ್ ನ ಕುರ್ದಿಸ್ತಾನ್ ಪ್ರಾಂತ್ಯದಿಂದ ತನ್ನ ಸಂಬಂಧಿಕರನ್ನು ಭೇಟಿಯಾಗಲು ರಾಜಧಾನಿ ಟೆಹ್ರಾನ್ ಗೆ ತೆರಳಿದ್ದಳು. ಈ ಸಂದರ್ಭದಲ್ಲಿ ಮಹ್ಸಾ ಹಿಜಾಬ್ ಅನ್ನು ಸಮರ್ಪಕವಾಗಿ ಧರಿಸಿಲ್ಲ ಎಂದು ಆರೋಪಿಸಿ ಇರಾನ್ ನೈತಿಕ ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಕೋಮಾ ಸ್ಥಿತಿ ತಲುಪಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಕೆ ಶುಕ್ರವಾರ ಸಾವನ್ನಪ್ಪಿದ್ದಳು. ಆದರೆ ಇರಾನ್ ಪೊಲೀಸರ ಹೇಳಿಕೆ ಪ್ರಕಾರ, ಆಕೆಯನ್ನು ಬಂಧಿಸಿದ ವೇಳೆ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಹೇಳಿಕೆ, ಅಮಿನಿಯನ್ನು ಪೊಲೀಸರು ಹೊಡೆದು ಹತ್ಯೆಗೈದಿರುವುದಾಗಿ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next