Advertisement

Bengaluru: 13 ವರ್ಷದ ಅಪ್ರಾಪ್ತ ಸಹೋದರನಿಂದಲೇ 3 ತಿಂಗಳ ಗರ್ಭಿಣಿಯಾದ ತಂಗಿ!

11:16 AM May 22, 2024 | Team Udayavani |

ಬೆಂಗಳೂರು: ಇತ್ತೀಚೆಗೆ ಮುಂಬೈನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ತಮ್ಮನಿಂದಲೇ ಸಹೋದರಿ ಗರ್ಭಿಣಿಯಾಗಿದ್ದ ಆಘಾತಕಾರಿ ಘಟನೆಯೊಂದು ನಡೆದಿತ್ತು. ಅಂತಹದ್ದೇ ಘಟನೆ ಯೊಂದು ಬೆಂಗಳೂರಿ ನಲ್ಲಿ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ಅಪ್ರಾಪ್ತ ಅಣ್ಣನಿಂದ ಸಹೋ ದರಿ ಮೂರು ತಿಂಗಳ ಗರ್ಭಿಣಿಯಾಗಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಅಪ್ರಾಪ್ತನನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.

ಅಪ್ರಾಪ್ತ ಹಾಗೂ ಸಂತ್ರಸ್ತೆ ಅವಳಿ ಸಹೋದರ- ಸಹೋದರಿ ಯಾಗಿದ್ದಾರೆ. ಬಾಗಲ ಗುಂಟೆಯಲ್ಲಿ ಪೋಷಕರೊಂದಿಗೆ ವಾಸವಿದ್ದರು. ಮನೆಯಲ್ಲಿ ಪೋಷಕರು ಇಲ್ಲದಿರುವಾಗ ಇಬ್ಬರು ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದರು ಎಂದು ಹೇಳಲಾಗಿದೆ.

ಅದರಿಂದ ಪ್ರಚೋದನೆಗೊಂಡು ಇಬ್ಬರೂ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ಅದರಿಂದಾಗಿ ಬಾಲಕಿ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ. ಬಾಲಕಿ ಯಲ್ಲಿ ದೈಹಿಕ ಬದ ಲಾವಣೆ ಕಂಡು ಬಂದಾಗ ಪೋಷ ಕರು ಆಕೆ ಯನ್ನು ಖಾಸಗಿ ಅಸ್ಪತ್ರೆಗೆ ಕರೆ ದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಬಾಲಕಿ ಮೂರು ತಿಂಗಳು ಗರ್ಭಿಣಿಯಾಗಿ ರುವುದು ತಿಳಿದು ಬಂದಿದೆ. ತಕ್ಷಣ ವೈದ್ಯರು, ಬಾಗಲಗುಂಟೆ ಪೊಲೀಸ್‌ ಠಾಣೆಗೆ ಮಾಹಿತಿ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಂತ್ರಸ್ತೆ ವಿಚಾರಣೆ ನಡೆಸಿ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಸಂತ್ರಸ್ತೆಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next