Advertisement

Sisodia; ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ

06:31 PM Sep 22, 2024 | Team Udayavani |

ಹೊಸದಿಲ್ಲಿ: ”ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ” ಎಂದು ಹಿರಿಯ ಎಎಪಿ ನಾಯಕ ಮನೀಶ್ ಸಿಸೋಡಿಯಾ ಭಾನುವಾರ(ಸೆ22) ಹೇಳಿದ್ದಾರೆ.

Advertisement

ಎಎಪಿ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಂತರ್ ಮಂತರ್ ನಲ್ಲಿ ನಡೆಸಿದ ‘ಜನತಾ ಕಿ ಅದಾಲತ್’ ನಲ್ಲಿ ಮಾತನಾಡಿದ ಮಾಜಿ ಡಿಸಿಎಂ ಸಿಸೋಡಿಯಾ ”ದೆಹಲಿಯ ಮದ್ಯ ನೀತಿಯ ಹಗರಣದಲ್ಲಿ ತನ್ನನ್ನು ಬಂಧನಕ್ಕೊಳಪಡಿಸಿದ ಸಮಯದಲ್ಲಿ ಇಡಿ ತನ್ನ ಬ್ಯಾಂಕ್ ಖಾತೆಯನ್ನೇ ಸ್ಥಗಿತಗೊಳಿಸಿತು. ತನ್ನ ಮಗನ ಕಾಲೇಜು ಶುಲ್ಕಕ್ಕಾಗಿ ಭಿಕ್ಷೆ ಬೇಡುವಂತೆ ಮಾಡಿತು” ಎಂದು ಆಕ್ರೋಶ ಹೊರ ಹಾಕಿದರು.

”ಬಿಜೆಪಿಯವರು ಅರವಿಂದ್ ಕೇಜ್ರಿವಾಲ್ ರನ್ನು ಸಿಲುಕಿಸಿದ್ದಾರೆ. ನಾವು ಯಾವುದೇ ತಪ್ಪು ಮಾಡದಿರುವಾಗ ಅವರು ನನ್ನ ಹೆಸರನ್ನು ಏಕೆ ತೆಗೆದುಕೊಳ್ಳುತ್ತಾರೆ? ರಾಮನಿಂದ ಲಕ್ಷ್ಮಣನನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ನಾನು ಹೇಳುತ್ತಿದ್ದೆ. ಆದರೆ ಯಾವ ರಾವಣನೂ ರಾಮನಿಂದ ಲಕ್ಷ್ಮಣನನ್ನು ಬೇರ್ಪಡಿಸಲು ಸಾಧ್ಯವಿಲ್ಲ” ಎಂದರು.

2002ರಲ್ಲಿ ನಾನು ಪತ್ರಕರ್ತನಾಗಿದ್ದಾಗ 5 ಲಕ್ಷ ರೂ. ಮೌಲ್ಯದ ಫ್ಲಾಟ್ ಖರೀದಿಸಿದ್ದೆ, ಅದನ್ನು ಜಪ್ತಿ ಮಾಡಲಾಯಿತು. ನನ್ನ ಖಾತೆಯಲ್ಲಿ 10 ಲಕ್ಷ ರೂ.ಇತ್ತು, ಅದನ್ನೂ ಕಿತ್ತುಕೊಳ್ಳಲಾಗಿದೆ. ನನ್ನ ಮಗನ ಶುಲ್ಕವನ್ನು ಪಾವತಿಸಲು ನಾನು ಸಹಾಯಕ್ಕಾಗಿ ಬೇಡಿಕೊಳ್ಳಬೇಕಾಯಿತು. ಇಡಿ ನನ್ನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದೆ ಎಂದು ನಾನು ಜನರಿಗೆ ಹೇಳಬೇಕಾಯಿತು ”ಎಂದರು.

Advertisement

ಶಿಕ್ಷಣ ಕ್ರಾಂತಿಯ ಜನಕ ಮನೀಶ್ ಸಿಸೋಡಿಯಾ ಅವರ ಜೀವನದ ಪ್ರತಿ ಕ್ಷಣವೂ ದೇಶಕ್ಕೆ ಒಂದು ಕ್ಷಣವಾಗಿದೆ ಎಂದು ಮಾಜಿ ಸಿಎಂ ಕೇಜ್ರಿವಾಲ್ ಹೇಳಿದರು. ಸಮಾರಂಭದಲ್ಲಿ ದೆಹಲಿ ನೂತನ ಸಿಎಂ ಆತಿಷಿ ಸೇರಿ ಪ್ರಮುಖ ನಾಯಕರು ಭಾಗಿಯಾಗಿದ್ದರು.

ಫೆಬ್ರವರಿ 2023 ರಲ್ಲಿ ಇಡಿ ಯಿಂದ ಬಂಧನಕ್ಕೊಳಗಾಗಿದ್ದ ಸಿಸೋಡಿಯಾ ಅವರಿಗೆ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next