ಸಿರುಗುಪ್ಪ: ಕಳೆದ ಒಂದು ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೇ ಚುನಾವಣೆ ನಡೆಯದೇ ಅಧಿಕಾರಿಗಳ ಹಿಡಿತದಲ್ಲಿದ್ದ ಸಿರಗುಪ್ಪ ನಗರಸಭೆಗೆ ಕೊನೆಗೂ ಚುನಾವಣೆ ಘೋಷಣೆಯಾಗಿದ್ದು ನೂತನ ಜನಪ್ರತಿನಿಧಿಗಳ ಆಯ್ಕೆಗೆ ಮೂಹೂìತ ನಿಗದಿಯಾಗಿದೆ.
ಸಿರುಗುಪ್ಪ ನಗರಸಭೆ ಅವ ಧಿ 2019ರ ಮಾರ್ಚ್‌ಗೆ ಮುಕ್ತಾಯವಾಗಿದ್ದು, ಇದೇ ವೇಳೆಗೆ ನೂತನ ಜನಪ್ರತಿನಿಧಿಗಳ ಆಯ್ಕೆ ನಡೆಯಬೇಕಿತ್ತು. ಆದರೆ ಸರ್ಕಾರ ಘೋಷಣೆ ಮಾಡಿದ ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆಹೋದ ಪರಿಣಾಮ ಚುನಾವಣೆಗೆ ತಡೆಬಿದ್ದಿತ್ತು.
ಪ್ರಸ್ತುತ ನಗರಸಭೆಗೆ ಚುನಾವಣಾ ದಿನಾಂಕ ನಿಗಪಡಿಸಿ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಜ. 21ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಜ. 28ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜ. 29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜ.31ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಫೆ.9ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆವರೆಗೆ ಚುನಾವಣೆ ನಡೆಯಲಿದೆ.
ಮರು ಮತದಾನ ಅಗತ್ಯವಿದ್ದಲ್ಲಿ ಫೆ. 10ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ. ಫೆ. 11ರಂದು ಬೆಳಗ್ಗೆ 8ಗಂಟೆಯಿಂದ ತಾಲೂಕು ಕೇಂದ್ರಸ್ಥಾನದಲ್ಲಿ ಮತಗಳ ಎಣಿಕೆ ನಡೆಯಲಿದೆ. ಫೆ. 9ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಜ. 14ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.
ಮೀಸಲಾತಿ ವಿವರಗಳು: ಸಾಮಾನ್ಯ ಕ್ಷೇತ್ರಗಳು 8, ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರಗಳು 8, ಹಿಂದುಳಿದ ವರ್ಗಗಳ ಎ ಮಹಿಳಾ ಮೀಸಲು ಕ್ಷೇತ್ರ 3, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರ 3,ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರ 1, ಪ.ಜಾತಿ ಮಹಿಳಾ ಮೀಸಲು ಕ್ಷೇತ್ರ 3, ಪ.ಜಾತಿ ಮೀಸಲು ಕ್ಷೇತ್ರ 3, ಪ. ಪಂಗಡ ಮಹಿಳಾ ಮೀಸಲು ಕ್ಷೇತ್ರ 1, ಪ.ಪಂಗಡ ಮೀಸಲು ಕ್ಷೇತ್ರ 1, ಒಟ್ಟು 31 ಕ್ಷೇತ್ರಗಳು.
31 ವಾರ್ಡ್‌ಗಳ ಮೀಸಲಾತಿ ವಿವರ: ಸಾಮಾನ್ಯ ವಾರ್ಡ್ 2, 7, 10, 11, 18, 21, 28, 31 ಸಾಮಾನ್ಯ ಮಹಿಳೆ, ವಾರ್ಡ್ ನಂ 1, 3, 13, 22, 23, 24, 29, 30 ಹಿಂದಳಿದ ವರ್ಗ ಎ ಮಹಿಳೆ, ವಾರ್ಡ್ 4, 9, 15 ಹಿಂದುಳಿದ ವರ್ಗ ಎ, ವಾರ್ಡ್ ನಂ 5, 16, 20 ಹಿಂದುಳಿದ ವರ್ಗ ಬಿ, ವಾರ್ಡ್ ನಂ. 6,ಪ. ಜಾತಿ ಮಹಿಳೆ, ವಾರ್ಡ್ ನಂ. 17, 25, 27 ಪ.ಜಾತಿ, ವಾರ್ಡ್ ನಂ 8,12,14 ಪ.ಪಂಗಡ ಮಹಿಳೆ, ವಾರ್ಡ್ ನಂ. 19 ,26 ಪ.ಪಂಗಡ.