Advertisement
ನಗರದ 11, 16, 18, 21, 23, 26 ಹಾಗೂ 27ನೇ ವಾರ್ಡ್‌ಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, 16 ಮತ್ತು 18ನೇ ವಾರ್ಡ್ ನಲ್ಲಿ ಮಾತ್ರ ಶುದ್ಧ ಕುಡಿವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
Related Articles
Advertisement
ನಗರದಲ್ಲಿ ಒಟ್ಟು 6 ಶುದ್ಧ ಕುಡಿಯುವ ನೀರನ ಘಟಕಗಳಿದ್ದು, ಇದರಲ್ಲಿ ಬೋರ್ ನೀರಿನ ಕೊರತೆಯಿಂದ ನಾಲ್ಕು ಘಟಕಗಳು ಸ್ಥಗಿತಗೊಂಡಿದ್ದು, 2 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಬೋರ್ ನೀರಿನ ಕೊರತೆ ಇರುವ ಘಟಕಗಳಿಗೆ ನಗರಸಭೆಯಿಂದ ನೀರು ಪೂರೈಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.•ಮಹಮ್ಮದ್,
ಪ್ರಭಾರಿ ಪೌರಾಯುಕ್ತ, ನಗರಸಭೆ ನಮ್ಮ ವಾರ್ಡ್‌ನಲ್ಲಿ ಶುದ್ಧ ಕುಡಿವ ನೀರಿನ ಘಟಕವಿದ್ದರೂ ಯಾವುದೇ ಪ್ರಯೋಜನವಿಲ್ಲ. ಸದ್ಯ ಘಟಕ ಸ್ಥಗಿತಗೊಂಡಿದ್ದು, ಕುಡಿವ ನೀರು ಬೇರೆಡೆಯಿಂದ ತರಬೇಕಾಗಿದೆ. ಬೇಸಿಗೆಯಲ್ಲಿ ಕುಡಿವ ನೀರು ಹೆಚ್ಚಿನ ಅವಶ್ಯವಿದ್ದು, ಶುದ್ಧ ನೀರು ಸಿಕ್ಕರೆ ಅನುಕೂಲ. ನಮ್ಮಲ್ಲಿರುವ ಘಟಕದಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
•ಯಂಕಮ್ಮ, ಮಂಗಮ್ಮ, ದುರುಗಪ್ಪ,
23ನೇ ವಾರ್ಡ್ ನಿವಾಸಿಗಳು ನಗರದಲ್ಲಿ ಶುದ್ಧ ಕುಡಿಯುವ ಎರಡು ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ ನಾಲ್ಕು ಘಟಕಗಳು ಬೋರ್ ನೀರಿನ ಕೊರತೆಯಿಂದ ಸ್ಥಗಿತಗೊಂಡಿದ್ದು, ಈ ನಾಲ್ಕು ಘಟಕಗಳಿಗೆ ನಗರಸಭೆಯಿಂದ ನೀರು ಪೂರೈಸುವಂತೆ ಕೇಳಿದ್ದೇವೆ.
•ಫಕ್ಕೀರಸ್ವಾಮಿ, ಎಇಇ,
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ