Advertisement

ಬಿಡಾಡಿ ದನಗಳಿಗೆ ನೀರಿನ ಬರ

04:09 PM May 25, 2019 | Naveen |

ಸಿರುಗುಪ್ಪ: ನಗರದ ವಿವಿಧ ರಸ್ತೆಗಳಲ್ಲಿ ನೆಟ್ಟಿರುವ ಸಸಿಗಳನ್ನು ಉಳಸಿಕೊಳ್ಳಲು ನಗರಸಭೆಯು ತೋರಿಸುತ್ತಿರುವ ಕಾಳಜಿಯನ್ನು ಬಿಡಾಡಿ ದನಗಳ ದಾಹ ತೀರಿಸುವತ್ತ ಗಮನ ಹರಿಸುತ್ತಿಲ್ಲ. ಇದರಿಂದಾಗಿ ನಗರದಲ್ಲಿ ಬಿಡಾಡಿ ದನಗಳು ಬಿಸಿಲಿನ ಬೇಗೆಯಿಂದ ದೇಹ ತಣಿಸಿಕೊಳ್ಳಲು ರಸ್ತೆಗಳಲ್ಲಿ ನಿಂತ ನೀರು ಮತ್ತು ನಲ್ಲಿಗಳಲ್ಲಿ ಪೋಲಾಗುವ ನೀರಿಗೆ ಬಾಯಿ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮಳೆ ಕೊರತೆಯಿಂದಾಗಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 20ದಿನಗಳಿಂದ ಉಷ್ಣಾಂಶ ಗರಿಷ್ಠ 40ರಿಂದ 43ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದ್ದು, ಬಿಸಿಲಿನ ತಾಪದಿಂದ ಬಚಾವಾಗಲು ಜನರು ಎಳನೀರು, ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ ಬಿರು ಬಿಸಿಲಿನಿಂದ ಬಿಡಾಡಿ ದನಗಳಿಗೆ ಕುಡಿಯುವ ನೀರು ಸಿಗದೆ ಅವು ಅನುಭವಿಸುತ್ತಿರುವ ಸಂಕಷ್ಟ ಅವುಗಳಿಗೆ ಗೊತ್ತು.

ನಗರಸಭೆಯು ನಗರದಲ್ಲಿ ಬಿಡಾಡಿ ದನಗಳ ನಿಯಂತ್ರಿಸಲು ಯಾವುದೇ ಕಾರ್ಯಾಚರಣೆ ಮಾಡದೆ ಇರುವುದರಿಂದ ನೂರಾರು ಸಂಖ್ಯೆಯಲ್ಲಿ ಬಿಡಾಡಿ ದನಗಳು ಸಂಚರಿಸುತ್ತಿವೆ. ಈ ದನಗಳಲ್ಲಿ ಕೆಲವು ಮಾಲೀಕರಿಗೆ ಸೇರಿವೆ. ಆದರೆ ಮಾಲೀಕರ ಮನೆಗಳಲ್ಲಿ ಜಾಗ, ಮೇವಿನ ಕೊರತೆಯಿಂದಾಗಿ ಸೂರ್ಯೋದಯವಾಗತ್ತಿದ್ದಂತೆ ದನಗಳು ಬೀದಿಗೆ ಬರುತ್ತಿವೆ. ಹೀಗಾಗಿ ನೂರಾರು ಸಂಖ್ಯೆಯ ಬಿಡಾಡಿ ದನಗಳು ಹಸಿವು, ದಾಹ ತೀರಿಸಿಕೊಳ್ಳಲು ಪರದಾಡುವಂತಾಗಿದೆ. ನಗರಸಭೆಯ ಅಧಿಕಾರಿಗಳು ಬಿಡಾಡಿ ದನಗಳಿಗೆ ನೀರು ಕುಡಿಯಲು ನಗರದಲ್ಲಿ ಎಲ್ಲಿಯೂ ಕುಡಿಯುವ ನೀರಿನ ತೊಟ್ಟಿ ನಿರ್ಮಿಸದಿರುವುದರಿಂದ ಬಿಡಾಡಿ ದನಗಳು ಕುಡಿಯುವ ನೀರಿಗಾಗಿ ನಗರದಲ್ಲಿ ಮನೆ ಮನೆ ತಿರುಗುತ್ತಿವೆ. ನಗರದ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ದನಗಳಿಗೆ ಖಾಸಗಿ ವ್ಯಕ್ತಿಯೊಬ್ಬರು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next