Advertisement
ಉತ್ತಮ ಹಣ್ಣು ಒಂದು ಕೆಜಿಗೆ ರೂ.10, ಕಡಿಮೆ ಗುಣಮಟ್ಟದ ಹಣ್ಣಿಗೆ ರೂ.9ರಂತೆ ದೆಹಲಿ, ಬೆಂಗಳೂರು, ಹರಿಯಾಣದ ವ್ಯಾಪಾರಿಗಳು ರೈತರ ಹೊಲಗಳಿಗೆ ತೆರಳಿ ಹಣ್ಣನ್ನು ಖರೀದಿಸಿ ಲಾರಿಗಳ ಮೂಲಕ ತೆಗೆದುಕೊಂಡು ಹೋದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಪ್ಪಾಯಿ ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿತ್ತು. ಮಾರುಕಟ್ಟೆಗೆ ಸಾಗಿಸಲು ಹಣವಿಲ್ಲದೆ ರೈತ ಕುಟುಂಬಗಳು ಕಂಗಾಲಾಗಿದ್ದವು. ನಿರೀಕ್ಷಿತ ಬೆಲೆ ಸಿಗದೆ ಇದ್ದರೂ ನ್ಯಾಯಯುತ ದರಕ್ಕೆ ಮಾರಾಟವಾಗುತ್ತಿದೆ. ಬೆಳೆಗೆ ತಗುಲಿದ ವೆಚ್ಚವಾದರೂ ಸಿಕ್ಕರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ರೈತರು ರೂ.10ಕ್ಕೆ ಒಂದು ಕೆಜಿ ಹಣ್ಣನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಆದರೆ 10 ರೂ.ಗೆ ಒಂದು ಕೆಜಿ ಹಣ್ಣು ಮಾರಾಟವಾಗುತ್ತಿರುವುದು ಯಾವುದೇ ಲಾಭವಿಲ್ಲದಂತಾಗಿದೆ ಎಂದು ಉಪ್ಪಾರಹೊಸಳ್ಳಿ ಗ್ರಾಮದ ರೈತ ರುದ್ರಗೌಡ ತಿಳಿಸಿದ್ದಾರೆ. ತಾಲೂಕಿನಲ್ಲಿ ಬೆಳೆದ ಪಪ್ಪಾಯಿ ಬೆಳೆಗೆ ಅಂತಾರಾಜ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಲಾಕ್‌ಡೌನ್ ಸಡಲಿಕೆಯಾಗಿರುವುದರಿಂದ ಪಪ್ಪಾಯಿ ಹಣ್ಣುಗಳನ್ನು ಕೊಳ್ಳಲು ವ್ಯಾಪಾರಸ್ಥರು ಬರುತ್ತಿದ್ದಾರೆ. ಕಳೆದ ವರ್ಷ ಒಂದು ಕೆಜಿಗೆ ರೂ.20ಕ್ಕೆ ಮಾರಾಟವಾಗಿತ್ತು. ಆದರೆ ಈ ವರ್ಷ ರೂ.10ಕ್ಕೆ ಒಂದು ಕೆಜಿ ಹಣ್ಣು ಮಾರಾಟವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ ತಿಳಿಸಿದ್ದಾರೆ.