Advertisement
ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಜನಸಂಪರ್ಕವಿಲ್ಲದ ಸ್ಥಳದಲ್ಲಿ ನಿರ್ಮಾಣಗೊಂಡಿದೆ. ಸುಮಾರು 15 ವರ್ಷಗಳ ಹಿಂದೆ ತಾಲೂಕು ಕಚೇರಿ ಎದುರಿಗಿರುವ ಜಲಶುದ್ಧೀಕರಣ ಘಟಕದ ಆವರಣದಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿತ್ತು. ಆಗ ಸಾಕಷ್ಟು ಸಂಖ್ಯೆಯಲ್ಲಿ ಓದುಗರು ಗ್ರಂಥಾಲಯಕ್ಕೆ ಬಂದು ಓದುತ್ತಿದ್ದರು. ಗ್ರಂಥಾಲಯಕ್ಕೆ ತನ್ನದೇ ಆದ ಸ್ವಂತಕಟ್ಟಡವಿಲ್ಲದ ಕಾರಣ ಅನೇಕ ವರ್ಷ ಜಲಶುದ್ಧೀಕರಣ ಘಟಕದ ಆವರಣದಲ್ಲಿಯೇ ಕಾರ್ಯನಿರ್ವಹಿಸಿತ್ತು.
Related Articles
ಹಾಳಾಗಿವೆ. ಆದರೆ ಓದುಗರ ಸಂಖ್ಯೆಯೂ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪುಸ್ತಕಗಳು ಇದೀಗ ಧೂಳು ಹಿಡಿಯುತ್ತಿವೆ.
Advertisement
ಈ ಗ್ರಂಥಾಲಯದಲ್ಲಿ ಒಟ್ಟು 1027 ಮಂದಿ ಓದುಗರು ಸದಸ್ಯತ್ವವನ್ನು ಪಡೆದಿದ್ದಾರೆ. ಆದರೆ ಪ್ರತಿನಿತ್ಯ ಇಲ್ಲಿಗೆ ಓದಲು ಬರುವವರ ಸಂಖ್ಯೆ 50ರಿಂದ 60 ಜನ ಮಾತ್ರ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಈ ಗ್ರಂಥಾಲಯದಲ್ಲಿ ಅಧ್ಯಯನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. 20ರಿಂದ 30 ಜನ ಸದಸ್ಯರು ಪ್ರತಿನಿತ್ಯ ಪುಸ್ತಕಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಗ್ರಂಥಾಲಯ ಕಟ್ಟಡದ ಜಾಗ ಚಿಕ್ಕದಾಗಿರುವುದರಿಂದ ಅವಶ್ಯವಿರುವ ಕುರ್ಚಿ ಬೆಂಚ್ ಇದ್ದರೂ ಸಹ ಸ್ಥಳವಿಲ್ಲದೇ ಪರದಾಡುವಂತಾಗಿದೆ. ಸಾಕಷ್ಟು ಸಮಯ ದಿನಪತ್ರಿಕೆ ಓದುವವರ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ಕುರ್ಚಿ, ಬೆಂಚ್ ಹಾಗೂ ಪುಸ್ತಕಗಳನ್ನು ಶೇಖರಿಸಿಡಲು ಕಪಾಟುಗಳ ಅವಶ್ಯಕತೆ ಇದೆ. ಆದರೆ ಇಲ್ಲಿ ಒಬ್ಬ ಗ್ರಂಥಪಾಲಕರು, ಒಬ್ಬ ಗ್ರಂಥಾಲಯ ಸಹಾಯಕ ಮತ್ತು ಇನ್ನಿಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸಬೇಕು, ಆದರೆ ಒಬ್ಬ ಗ್ರಂಥಾಲಯ ಸಹಾಯಕ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಾರೆ.
ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಶೇಖರಿಸಿಡಲು ಕಪಾಟುಗಳ ಕೊರತೆ ಇರುವುದರಿಂದ ಸಾಕಷ್ಟು ಸಂಖ್ಯೆಯ ಪುಸ್ತಕಗಳನ್ನು ಚೀಲಗಳಲ್ಲಿ, ರಟ್ಟಿನ ಬಾಕ್ಸ್ ಗಳಲ್ಲಿ ತುಂಬಿಡಲಾಗಿದೆ. ಶೌಚಾಲಯ ವ್ಯವಸ್ಥೆ ಇಲ್ಲ, ಮೂಲ ಸೌಲಭ್ಯಗಳು ಇಲ್ಲ, ಕುಡಿಯುವ ನೀರನ್ನು ಕ್ಯಾನ್‌ನಲ್ಲಿಟ್ಟು ಪೂರೈಕೆ ಮಾಡಲಾಗುತ್ತಿದೆ.
ಹಳೇ ಕಟ್ಟಡದೊಂದಿಗೆ ಹೊಸ ಕಟ್ಟಡವನ್ನು ಜೋಡಿಸಿ ಕಟ್ಟಿರುವುದರಿಂದ ಹೊಸ ಕಟ್ಟಡದಲ್ಲಿ ಓದುಗರಿಗೆ ವಿಶಾಲವಾದ ಹಾಲ್ ಕಟ್ಟಲಾಗಿದೆ. ಈ ಕಟ್ಟಡ ಉದ್ಘಾಟನೆಯಾದರೆ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಕುಳಿತುಕೊಂಡು ಓದಲು ಅನುಕೂಲವಾಗುತ್ತದೆ.