Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನಲ್ಲಿ ತೋಟಗಾರಿಕೆ ನರೇಗಾ ಯೋಜನೆಯಡಿ ಒಟ್ಟು 23 ಗ್ರಾಮಗಳಲ್ಲಿ 42 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸರಾಸರಿ 500 ಜನರಿಗೆ ಉದ್ಯೋಗ ನೀಡಲಾಗುತ್ತಿದೆ, 20 ದಿನಗಳ ಅವಧಿಯಲ್ಲಿ 2400 ಮಾನವ ದಿನಗಳ ಸೃಜಿಸಲಾಗಿದೆ. ಕೃಷಿಹೊಂಡಗಳಿಗೆ ವಿವಿಧ ಅಳತೆಗಳಿಗೆ ಅನುಗುಣವಾಗಿ ಕನಿಷ್ಠ ರೂ. 67000 ಗಳಿಂದ ರೂ.1.53ಲಕ್ಷಗಳವರೆಗೆ ಅನುದಾನ ಲಭ್ಯವಿರುತ್ತದೆ. ಕಂದಕ ಬದು ನಿರ್ಮಾಣಗಳಿಗೆ ಬದು ಗಾತ್ರಗಳಿಗೆ ಅನುಗುಣವಾಗಿ 1 ಹೆಕ್ಟೇರ್‌ಗೆ ಒಟ್ಟು 45 ಕಂದಕಗಳಿಗೆ ಕನಿಷ್ಟ ರೂ. 36,500ರೂಗಳಿಂದ ರೂ. 1.05 ಲಕ್ಷಗಳವರೆಗೆ ಯೋಜನೆಯ ಲಾಭ ಪಡೆಯಬಹುದಾಗಿದೆ. ಕೊಳವೆ ಬಾವಿ ಮರುಪೂರಣಕ್ಕಾಗಿ ರೂ. 20,000ಗಳವರೆಗೆ ಅನುದಾನವನ್ನು ಬಳಸಿಕೊಳ್ಳಬಹುದು. ಕೂಲಿಕಾರ್ಡ್, ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ಸಣ್ಣ ಹಿಡುವಳಿದಾರರ ಪತ್ರ, ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿ ರೈತರು ಕಡ್ಡಾಯವಾಗಿ ನೀಡಬೇಕೆಂದು ಹೇಳಿದ್ದಾರೆ. Advertisement
ನರೇಗಾದಡಿ ರೈತರಿಗೆ ವಿವಿಧ ಯೋಜನೆಗಳು ಜಾರಿ
07:12 PM May 28, 2020 | Naveen |
Advertisement
Udayavani is now on Telegram. Click here to join our channel and stay updated with the latest news.