ಸಿರುಗುಪ್ಪ: ನಗರದ ನಗರಸಭೆಯ ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಮೀಸಲಾತಿಯಲ್ಲಿ ಗೊಂದಲವಿದ್ದು, ಮೀಸಲಾತಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿ ಜನಾಂಗದ ಮುಖಂಡ ವೈ.ಶ್ರೀನಿವಾಸ ಎನ್ನುವವರು ಧಾರವಾಡದ ಹೈಕೋರ್ಟ್ ಪೀಠದಲ್ಲಿ ದಾವೆ ಹೂಡಿದ್ದಾರೆ.
ನಗರಸಭೆಯ 31 ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆಯು 25-05-2018 ರಂದು ಪ್ರಕಟಿಸಿದ್ದು, 1ನೇ ವಾರ್ಡ್ ಸಾಮಾನ್ಯ, 2.ಸಾಮಾನ್ಯ, 3.ಸಾಮಾನ್ಯ, 4.ಹಿಂದುಳಿದ ವರ್ಗ-ಎ ಮಹಿಳೆ, 5. ಹಿಂದುಳಿದ ವರ್ಗ-ಎ, 6. ಹಿಂದುಳಿದ ವರ್ಗ-ಬಿ, 7. ಹಿಂದುಳಿದ ವರ್ಗ-ಎ ಮಹಿಳೆ, 8.ಪರಿಶಿಷ್ಟ ಜಾತಿ ಮಹಿಳೆ, 9.ಸಾಮಾನ್ಯ, 10. ಸಾಮಾನ್ಯ, 11.ಸಾಮಾನ್ಯ ಮಹಿಳೆ, 12.ಸಾಮಾನ್ಯ, 13. ಹಿಂದುಳಿದ ವರ್ಗ-ಎ, 14. ಸಾಮಾನ್ಯ, 15.ಹಿಂದುಳಿದ ವರ್ಗ-ಎ ಮಹಿಳೆ, 16. ಹಿಂದುಳಿದ ವರ್ಗ-ಎ, 17.ಎಸ್ಸಿ, 18. ಸಾಮಾನ್ಯ, 19. ಎಸ್‌ಟಿ, 20. ಸಾಮಾನ್ಯ ಮಹಿಳೆ, 21. ಸಾಮಾನ್ಯ, 22.ಸಾಮಾನ್ಯ ಮಹಿಳೆ, 23. ಸಾಮಾನ್ಯ ಮಹಿಳೆ, 24. ಸಾಮಾನ್ಯ ಮಹಿಳೆ, 25. ಸಾಮಾನ್ಯ ಮಹಿಳೆ, 26. ಎಸ್‌ಟಿ ಮಹಿಳೆ, 27. ಸಾಮಾನ್ಯ ಮಹಿಳೆ, 28. ಎಸ್ಸಿ ಮಹಿಳೆ, 29.ಎಸ್‌ಸಿ, 30.ಎಸ್‌ಸಿ, 31.ಎಸ್ಸಿ ಮಹಿಳೆ ಮೀಸಲಾತಿಯನ್ನು ಜಾರಿಗೊಳಿಸಿ ಆದೇಶಿಸಿತ್ತು.
ಆದರೆ ನಗಾರಾಭಿವೃದ್ಧಿ ಇಲಾಖೆಯು ನಗರಸಭೆಯ 31ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸಿ 30-07-2018 ರಂದು ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದ್ದು, ಮೀಸಲಾತಿ ಪಟ್ಟಿ ಪ್ರಕಾರ 1ನೇ ವಾರ್ಡ್ ಸಾಮಾನ್ಯ ಮಹಿಳೆ, 2. ಸಾಮಾನ್ಯ, 3.ಸಾಮಾನ್ಯ ಮಹಿಳೆ, 4.ಹಿಂದುಳಿದ ವರ್ಗ-ಎ ಮಹಿಳೆ, 5.ಹಿಂದುಳಿದ ವರ್ಗ-ಎ, 6.ಹಿಂದುಳಿದ ವರ್ಗ-ಬಿ, 7. ಸಾಮಾನ್ಯ, 8.ಎಸ್ಸಿ, 9.ಹಿಂದುಳಿದ ವರ್ಗ-ಎ ಮಹಿಳೆ, 10. ಸಾಮಾನ್ಯ, 11.ಸಾಮಾನ್ಯ, 12.ಎಸ್ಸಿ, 13.ಸಾಮಾನ್ಯ ಮಹಿಳೆ, 14.ಎಸ್ಸಿ, 15.ಹಿಂದುಳಿದ ವರ್ಗ-ಎ ಮಹಿಳೆ, 16.ಹಿಂದುಳಿದ ವರ್ಗ-ಎ, 17. ಎಸ್ಸಿ ಮಹಿಳೆ, 18. ಸಾಮಾನ್ಯ, 19.ಎಸ್ಟಿ ಮಹಿಳೆ, 20.ಹಿಂದುಳಿದ ವರ್ಗ-ಎ, 21. ಸಾಮಾನ್ಯ, 22. ಸಾಮಾನ್ಯ ಮಹಿಳೆ, 23.ಸಾಮಾನ್ಯ ಮಹಿಳೆ, 24. ಸಾಮಾನ್ಯ ಮಹಿಳೆ, 25. ಎಸ್ಸಿ ಮಹಿಳೆ, 26.ಎಸ್‌ಟಿ, 27. ಎಸ್ಸಿ ಮಹಿಳೆ, 28. ಸಾಮಾನ್ಯ, 29. ಸಾಮಾನ್ಯ ಮಹಿಳೆ, 30.ಸಾಮಾನ್ಯ ಮಹಿಳೆ, 31.ಸಾಮಾನ್ಯ ಎಂದು ಮೀಸಲಾತಿಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಮೇ 25-2018ರಂದು ಹೊರಡಿಸಿದ ಮೀಸಲಾತಿ ಪಟ್ಟಿಯಲ್ಲಿ 30ನೇವಾರ್ಡ್ ಎಸ್ಸಿ, 31.ಎಸ್ಸಿ ಮಹಿಳೆ ಎಂದು ಪ್ರಕಟಿಸಲಾಗಿತ್ತು. ಆದರೆ ಜು.30-2018 ರಂದು ಮರು ಪರಿಷ್ಕರಣೆ ಮಾಡಿದ ಮೀಸಲಾತಿ ಪಟ್ಟಿಯಲ್ಲಿ ನಗರಾಭಿವೃದ್ಧಿ ಇಲಾಖೆಯು 30ನೇವಾರ್ಡ್ ಸಾಮಾನ್ಯ ಮಹಿಳೆ, 31ನೇ ವಾರ್ಡ್ ಸಾಮಾನ್ಯ ಎಂದು ಪ್ರಕಟಿಸಿದೆ. ಇದರಿಂದ ಈ ನಾಲ್ಕು ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನಾಂಗದವರೇ ಹೆಚ್ಚಾಗಿರುವುದರಿಂದ ಈ ವಾರ್ಡ್‌ಗಳಿಗೆ ಸಾಮಾನ್ಯ ಕ್ಷೇತ್ರ, ಸಾಮಾನ್ಯ ಮಹಿಳಾ ಮೀಸಲಾತಿ ಕ್ಷೇತ್ರವಾಗಿದ್ದರಿಂದ ಇಲ್ಲಿನ ಪರಿಶಿಷ್ಟ ಜಾತಿ ಜನಾಂಗಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ನಗರಸಭೆಯ ಮಾಜಿ ಸದಸ್ಯ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಸಿರುಗುಪ್ಪ ನಗರಸಭೆಯ ಚುನಾಯಿತ ಸದಸ್ಯರ ಆಡಳಿತಾವಧಿಯು ಮೇ 29-2019ಕ್ಕೆ ಮುಕ್ತಾಯಗೊಂಡಿದ್ದು, ಚುನಾವಣೆಯು ನಡೆಯಬೇಕಾಗಿತ್ತು. ಆದರೆ ಮೀಸಲಾತಿಯ ಗೊಂದಲದಿಂದಾಗಿ ಇಲ್ಲಿ ನಡೆಯಬೇಕಿದ್ದ ಚುನಾವಣೆಯು ಮುಂದೂಡಲಾಗಿದೆ.
30 ಮತ್ತು 31ನೇ ವಾರ್ಡ್‌ನಲ್ಲಿ ಹೆಚ್ಚಾಗಿ ಎಸ್ಸಿ ಜನಾಂಗದವರು ವಾಸಿಸುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಎಸ್ಸಿ, ಎಸ್ಸಿ ಮಹಿಳೆ ಮೀಸಲಾತಿ ನೀಡಬೇಕಾಗಿತ್ತು. ಆದರೆ ಇಲ್ಲಿ ಸಾಮಾನ್ಯ ಕ್ಷೇತ್ರ ಮತ್ತು ಸಾಮಾನ್ಯ ಮಹಿಳಾ ಮೀಸಲಾತಿ ಕ್ಷೇತ್ರವೆಂದು ಪ್ರಕಟಿಸಿರುವುದರಿಂದ ಜನಾಂಗಕ್ಕೆ ಅನ್ಯಾಯವಾಗಿದೆ. ಎರಡೂ ವಾರ್ಡ್‌ಗಳ ಮೀಸಲಾತಿಯನ್ನು ಎಸ್ಸಿಗೆ ನೀಡುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇನೆ.
•
ವೈ.ಶ್ರೀನಿವಾಸ, ವಾರ್ಡಿನ ನಿವಾಸಿ.