Advertisement

ಅಸಮರ್ಪಕ ಉತ್ತರ; ಸಭೆ ಮೊಟಕು

04:05 PM Jun 01, 2019 | Team Udayavani |

ಸಿರುಗುಪ್ಪ: ನಗರದ ತಾಪಂ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ನೀಡಿದ ಉತ್ತರದಿಂದ ಅಸಮಾಧಾನಗೊಂಡ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಭೆಯಿಂದ ಹೊರನಡೆದ ಘಟನೆ ನಡೆಯಿತು.

Advertisement

ನರೇಗಾ ಯೋಜನೆಯಡಿ ಮಾಳಾಪುರ ಮತ್ತು ಗುಂಡಿಗನೂರು ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿರುವುದರಿಂದ ತಾಲೂಕಿನ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಿರುವುದು ಸರಿ. ಆದರೆ ಈ ಎರಡೂ ಕೆರೆಗಳಲ್ಲಿ ಹೂಳೆತ್ತಿದ ಮಣ್ಣನ್ನು ತೆಗೆಯಲು ಯಾವ ಕ್ರಮ ಕೈಗೊಂಡಿಲ್ಲ. ಆದರೆ ಸಭೆಯಲ್ಲಿ ಹಾರಿಕೆ ಉತ್ತರ ನೀಡಿ ನನ್ನನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ನರೇಗಾ ಯೋಜನೆಯ ತಾ.ನಿರ್ದೇಶಕಿ ನಿರ್ಮಲ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಒಂದು ವಾರದಿಂದ ಹೂಳೆತ್ತಲು ಟ್ರ್ಯಾಕ್ಟರ್‌ಗಳು ಸಿಗುತ್ತಿಲ್ಲ, ಆದ್ದರಿಂದ ಕೆರೆಯಲ್ಲಿ ಎತ್ತಿದ ಹೂಳನ್ನು ಹೊರ ಸಾಗಿಸಲು ಸಾಧ್ಯವಾಗಿಲ್ಲವೆಂದು ನರೇಗಾ ತಾ.ನಿರ್ದೇಶಕಿ ತಿಳಿಸಿದರು. ಈ ಉತ್ತರದಿಂದ ಅಸಮಾಧಾನಗೊಂಡ ಶಾಸಕರು ರೈತರು ಮತ್ತು ಟ್ರ್ಯಾಕ್ಟರ್‌ ಹೊಂದಿದವರು ತಮಗೆ ಕೆಲಸ ಕಾರ್ಯಗಳು ಸಿಗುತ್ತಿಲ್ಲವೆಂದು ಕೆಲವರು ರಾತ್ರಿ ವೇಳೆ ಕಳ್ಳತನದಲ್ಲಿ ಮರಳು ಸಾಗಾಟವನ್ನು ಟ್ರ್ಯಾಕ್ಟರ್‌ಗಳಲ್ಲಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕೆಲಸ ಸಿಗದೆ ತಮ್ಮ ಟ್ರ್ಯಾಕ್ಟರ್‌ಗಳನ್ನು ಮೂಲೆಗೆ ಇಟ್ಟಿದ್ದಾರೆ ಎಂದರು. ಆದರೆ ಕೆಲವು ಅಧಿಕಾರಿಗಳು ನೀಡಿದ ವರದಿಯಿಂದ ಅಸಮಾಧಾನಗೊಂಡ ಶಾಸಕರು ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊರನಡೆದರು. ಇದಕ್ಕೂ ಮುನ್ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಯಿಂದ ಕುಡಿಯುವ ನೀರಿನ ಬಗ್ಗೆ ಮಾಹಿತಿಯನ್ನು ಶಾಸಕರು ಪಡೆದುಕೊಂಡರು. ತಾಪಂ ಅಧ್ಯಕ್ಷೆ ದೇವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಶಂಕ್ರಪ್ಪ, ತಹಶೀಲ್ದಾರ್‌ ದಯಾನಂದ ಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next