Advertisement

ಶಿಥಿಲಗೊಂಡ ಶಾಲಾ ಕಟ್ಟಡದಲ್ಲೇ ಮಕ್ಕಳ ವಿದ್ಯಾಭ್ಯಾಸ!

06:47 PM Sep 25, 2019 | Naveen |

ಸಿರುಗುಪ್ಪ: ತಾಲೂಕಿನ ಕರೂರು ಗ್ರಾಮದ ಗಾಂಧಿ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಮಕ್ಕಳು ಭಯದಲ್ಲೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಒಂದನೇ ತರಗತಿಯಲ್ಲಿ 5, 2ನೇ ತರಗತಿಯಲ್ಲಿ 9, ಮೂರನೇ ತರಗತಿಯಲ್ಲಿ 4, ನಾಲ್ಕನೇ ತರಗತಿಯಲ್ಲಿ 13, ಐದನೇ ತರಗತಿಯಲ್ಲಿ 8 ಒಟ್ಟು 39ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಯಾವಾಗ ಕಟ್ಟಡ ತಮ್ಮ ಮೇಲೆ ಬೀಳುತ್ತದೆಯೋ ಎನ್ನುವ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಈ ಕೊಠಡಿಯನ್ನು ಕೆಡವಲು ಕ್ರಮ ಕೈಗೊಳ್ಳಬೇಕು, ಯಾವ ಸಂದರ್ಭದಲ್ಲಿ ಯಾರ ಮೇಲಾದರೂ ಬಿದ್ದು ಅನಾಹುತಗಳಾದರೆ ಯಾರು ಹೊಣೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅ ಧಿಕಾರಿಗಳ ಮುಂದೆ ಎಸ್‌ಡಿಎಂಸಿ ಸದಸ್ಯರು ಮನವಿ ಮಾಡಿದ್ದರೂ ಶಿಕ್ಷಣ ಇಲಾಖೆ ಅ ಧಿಕಾರಿಗಳು ಈ ಶಾಲಾ ಕೊಠಡಿಯನ್ನು ಕೆಡವಲು ಯಾವುದೇ ಕ್ರಮ ಕೈಗೊಂಡಿಲ್ಲ. ಬೇರೆಕಡೆ ಮಕ್ಕಳಿಗೆ ಪಾಠ ಪ್ರವಚನ ಮಾಡಲು ಕ್ಷೇತ್ರ ಶಿಕ್ಷಣಾಧಿ ಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಎಸ್‌ ಡಿಎಂಸಿ ಅಧ್ಯಕ್ಷ ರಾಮಾಂಜನಿರೆಡ್ಡಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next