ಸಿರುಗುಪ್ಪ: ಆಂಧ್ರಪ್ರದೇಶದ ಕಡೆಯಿಂದ ಕರ್ನಾಟಕದ ಸಿರುಗುಪ್ಪ ಪೊಲೀಸ್ ಠಾಣಾ ಸರಹದ್ದಿನ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆ ನಗರದ ಆದೋನಿ ರಸ್ತೆಯ ಎಆರ್‌ಎಸ್ ಫಾರ್ಮ್ ಬಳಿ ಗಾಂಜಾ ಸಾಗಿಸುತ್ತಿದ್ದ ಎರಡು ದ್ವಿ ಚಕ್ರ ವಾಹನಗಳ ಸಮೇತ ಐದು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳಿಂದ 2,65,000/-(ಎರಡು ಲಕ್ಷ ಅರವತ್ತೈದು ಸಾವಿರ)ಗಳಷ್ಟು ಮೌಲ್ಯದ 5 ಕೆ.ಜಿ 350 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಬಳ್ಳಾರಿಯ ಶರ್ಮಾಸ್ ವಲಿ, ಶೈಲೇಂದ್ರ, ಶೇಖ್ ಹಬೀದ್, ಬಲರಾಮ, ಕಾರ್ತಿಕ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಗಾಂಜಾ ಸಾಗಾಣಿಕೆದಾರರ ಮೇಲೆ ದಾಳಿ ಮಾಡಿ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾ ರಾಣಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಡಿವೈಎಸ್ ಪಿ ವೆಂಕಟೇಶ್, ಸಿಪಿಐ ಹನುಮಂತಪ್ಪ, ಪಿಎಸ್ಐಗಳಾದ ಪರಶುರಾಮ, ಹೊನ್ನಪ್ಪ, ಎ ಎಸ್ ಐ ಈಶ್ವರಪ್ಪ, ಸಿಬ್ಬಂದಿಗಳಾದ ಶಂಕ್ರಪ್ಪ,ಚಿನ್ನಪ್ಪ, ಬಸವರಾಜ ವಿಷ್ಣು ಮೋಹನ, ಬಾಲಚಂದ್ರ ರಾಥೋಡ್, ಈರಣ್ಣ ಇದ್ದರು.