Advertisement

ಸಕಲ ಜೀವರಾಶಿ ಬದುಕಬೇಕಾದರೆ ಪರಿಸರ ರಕ್ಷಣೆ ಅತ್ಯಗತ್ಯ

05:39 PM Jun 08, 2019 | Team Udayavani |

ಸಿರುಗುಪ್ಪ: ಪ್ರತಿಯೊಬ್ಬರೂ ಗಿಡಮರಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಮಕ್ಕಳಲ್ಲಿಯೂ ಪರಿಸರವನ್ನು ಉಳಿಸುವ ಬಗ್ಗೆ ತಿಳಿಸಿ ಹೇಳಬೇಕು ಎಂದು ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧಿಧೀಶ ಸಿ.ಎನ್‌.ಲೋಕೇಶ್‌ ತಿಳಿಸಿದರು.

Advertisement

ತಾಲೂಕಿನ ಕೆಂಚನಗುಡ್ಡ ಗ್ರಾಮದ ಮಲ್ಲಯ್ಯನಗುಡ್ಡದಲ್ಲಿರುವ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ವಿಶ್ವವೇ ತಾಪಮಾನದಿಂದ ಕಂಗೆಟ್ಟು ಹೋಗಿದ್ದು, ಸಕಲ ಜೀವಿಗಳು ಬದುಕಬೇಕಾದರೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಬೇಕು. ಆಧುನೀಕರಣ ನೆಪದಲ್ಲಿ ಗಿಡಗಳನ್ನು ನಾಶಮಾಡುತ್ತಾರೆಯೇ ಹೊರತು ಅದರ ಬದಲಿಗೆ ಗಿಡಗಳನ್ನು ಬೆಳಸಲು ಮುಂದಾಗುತ್ತಿಲ್ಲ.

ಅನಿವಾರ್ಯವಾಗಿ ಒಂದು ಗಿಡ ನಾಶಮಾಡಿದರೆ ಹತ್ತು ಗಿಡ ನೆಡಬೇಕು. ಆಗಿದ್ದಾಗ ಮಾತ್ರ ಪರಿಸರ ಸಮತೋಲನದಲ್ಲಿದ್ದು, ಸಕಲ ಜೀವಿಗಳೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಿಪಿಐ ಮೌನೇಶ ಮಾಲಿಪಾಟೀಲ, ವಕೀಲರ ಸಂಘದ ತಾ.ಅಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ಎಸ್‌.ಮಂಜುನಾಥಗೌಡ, ಹಿರಿಯ ವಕೀಲರಾದ ಎ.ಶಿವರುದ್ರಗೌಡ, ಕೆ.ವೀರೇಶಗೌಡ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next