Advertisement

ಧರ್ಮದ ತಳಹದಿಯಲ್ಲಿ ನಡೆದರೆ ಬದುಕು ಸುಂದರ

03:01 PM Apr 13, 2019 | Team Udayavani |

ಸಿರುಗುಪ್ಪ: ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆ, ಭಾಗವತ
ವೇದಗಳಲ್ಲಿ ತಿಳಿಸಿದ ನೀತಿ ಪಾಠಗಳನ್ನು ಹಾಗೂ ಸಜ್ಜನರ ಸಂಗದಿಂದ
ನಮ್ಮಲ್ಲಿ ಹೇಗೆ ಉತ್ತಮ ಗುಣಗಳು ಬೆಳೆಯುತ್ತವೆ ಎನ್ನುವುದನ್ನು ಮಕ್ಕಳಿಗೆ ತಿಳಿಸಿಕೊಡುವುದು ಧಾರ್ಮಿಕ ವಸಂತ ಶಿಬಿರದ ಉದ್ದೇಶವಾಗಿದೆ
ಎಂದು ಪೂರ್ಣಪ್ರಜ್ಞಾ ವಿದ್ಯಾಪೀಠದ ಉಪನ್ಯಾಸಕ ಭೀಮಸೇನ ಆಚಾರ್ಯ
ತಿಳಿಸಿದರು.

Advertisement

ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ
ಗುರುರಾಜ ಅಷ್ಟೋತ್ತರ ಮಂಡಳಿ ಹಾಗೂ ಪೂರ್ಣಪ್ರಜ್ಞಾ ವಿದ್ಯಾಪೀಠ
ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ವಸಂತ
ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕಾದರೆ
ಧರ್ಮದ ತಳಹದಿ ಹೊಂದಿರುವುದು ಅವಶ್ಯಕವಾಗಿದೆ. ಶ್ರೀಪೇಜಾವರ
ವಿಶ್ವೇಶ್ವರ ತೀರ್ಥರು ಸಾಮಾನ್ಯ ಜನರು ಕೂಡ ಆಧ್ಯಾತ್ಮವನ್ನು ತಮ್ಮ ಜೀವನದಲ್ಲಿ ಒಳಪಡಿಸಿಕೊಳ್ಳುವುದನ್ನು ಕಲಿಸುವ ಉದ್ದೇಶದಿಂದ ಬೇಸಿಗೆ
ಕಾಲದಲ್ಲಿ ಧಾರ್ಮಿಕ ವಸಂತ ಶಿಬಿರ ಆಯೋಜಿಸಲಾಗುತ್ತಿದೆ. ಮಹಾಭಾರತ,
ರಾಮಾಯಣ ಗ್ರಂಥಗಳನ್ನು ಶಾಸ್ತ್ರಿಯವಾಗಿ ಅಧ್ಯಾಯನ ಮಾಡುವುದರಿಂದ ಈ ಗ್ರಂಥಗಳಲ್ಲಿನ ಮಹನೀಯರ ಜೀವನ ಆದರ್ಶ ತತ್ವಗಳನ್ನು, ನೀತಿ ಧರ್ಮಗುಣಗಳು ನಮಗೆ ತಿಳಿಯುತ್ತವೆ. ಮಹಿಳೆಯರಿಗೆ, ಬಾಲಕಿಯರಿಗೆ ಸ್ತ್ರೀ ಧರ್ಮ ಕುರಿತು ಬೋಧನೆ, ಉಪನ್ಯಾಸ ಕಾರ್ಯಕ್ರಮ 100 ದಿನಗಳ ಕಾಲ ನಡೆಸಲಾಗುವುದು ಎಂದು ತಿಳಿಸಿದರು.

ಉಪನ್ಯಾಸಕ ಸಂಜೀವ್‌ ಆಚಾರ್ಯ ಮಾತನಾಡಿ, ಇಂದು ನಮ್ಮ ಮಕ್ಕಳು
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಪಟ್ಟು ನಮ್ಮ ಸಂಸ್ಕೃತಿಯಿಂದ
ಬದಲಾಗುತ್ತಿರುವ ಈ ಸಮಯದಲ್ಲಿ ದಾಸವರಣ್ಯರು, ಮಹನೀಯರು,
ಸಂತರು, ಮಹಾತ್ಮರು ನೀಡಿದ ನಮ್ಮ ಸನಾತನ ಸಂಸ್ಕೃತಿಯನ್ನು
ಮುಂದಿನ ಪೀಳಿಗೆಗೆ ಉಳಿಸುವ ಉದ್ದೇಶದಿಂದ ಶಿಬಿರದಲ್ಲಿ ಮಕ್ಕಳಿಗೆ ಅನೇಕ ವಿಷಯಗಳನ್ನು ತಿಳಿಸಲಾಗುತ್ತದೆ. ಹರಿಸರ್ವೋತ್ತಮ, ವಾಯುಜೀವೋತ್ತಮ ಎನ್ನುವ ಸತ್ಯವನ್ನು ನಾವೆಲ್ಲರೂ ನಂಬಿ ಪಾಲಿಸಿ ಈ ಭಗವಂತನ ನಾಮಸ್ಮರಣೆ
ಮಾಡಿದರೆ ಪಿತೃದೇವತೆಗಳು ಸಂತೃಪ್ತಿ ಹೊಂದುತ್ತಾರೆ ಎಂದು ತಿಳಿಸಿದರು.

ಪೂರ್ಣಪ್ರಜ್ಞಾ ವಿದ್ಯಾಪೀಠದ ಉಪನ್ಯಾಸಕ ವೆಂಕಟೇಶ ಆಚಾರ್ಯ, ಗುರು ಅಷ್ಟೋತ್ತರ ಮಂಡಳಿಯ ಗೌರವಾಧ್ಯಕ್ಷ ಎಚ್‌.ಜಿ.ವೆಂಕಟೇಶ
ಆಚಾರ್ಯ, ಉಪಾಧ್ಯಕ್ಷ ರಮೇಶ್‌ ಕುಲಕರ್ಣಿ, ಶಿಬಿರಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next