ಸಿರುಗುಪ್ಪ: ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದು ಗ್ರಾಮಸ್ಥರಲ್ಲಿ ನೆಮ್ಮದಿ ತಂದಿದೆ.
ನಿಟ್ಟೂರು ಗ್ರಾಮದ ತುಂಗಭದ್ರ ನದಿಯ ಸಿಂಗಾಪುರ ಘಾಟ್ ರಸ್ತೆಯಲ್ಲಿರುವ ಸಾಮ್ರಾಟ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿರುವ ಹಳ್ಳದಲ್ಲಿ ಕಳೆದ 4-5 ದಿನಗಳಿಂದ ಕಾಣಿಸಿಕೊಂಡಿದ್ದ ಮೊಸಳೆ ಜನರು ಓಡಾಡುವ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.
ಮೊಸಳೆ ಕಾಣಿಸಿಕೊಂಡ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು.
ಅರಣ್ಯ ಇಲಾಖೆಯ ಅಧಿಕಾರಿ ಅಂಬಣ್ಣ ನಾಯಕ ನೇತೃತ್ವದಲ್ಲಿ ಮೊಸಳೆ ಹಿಡಿಯುವ ಕಾರ್ಯಾಚರಣೆ ನಡೆಯಿತು. ವೇಷಗಾರ ಮಲ್ಲಯ್ಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನ. 22 ರಂದು ಬೆಳಗಿನ ಜಾವ ಮೊಸಳೆ ಹಿಡಿದಿದ್ದು, ತುಂಗಭದ್ರಾಕ್ಕೆ ಬಿಡಲಾಗಿದೆ.
ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ನವೆಂಬರ್ 22 ರಂದು ಸೆರೆ ಹಿಡಿದು ತುಂಗಭದ್ರಾ ನದಿಗೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಅಂಬಣ್ಣ ನಾಯ್ಕ ತಿಳಿಸಿದ್ದಾರೆ.