Advertisement

ಸಿರುಗುಪ್ಪ ಜೋಳ ಕಳವು ಪ್ರಕರಣ: ನಾಲ್ವರ ಬಂಧನ, 10 ಲಕ್ಷ ರೂ.ವಶ

08:42 PM Jul 18, 2022 | Team Udayavani |

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಈಚೆಗೆ ನಡೆದಿದ್ದ ಜೋಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಸವರಾಜ್ ರಿಂದ 10 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಎಸ್ ಸಿಎಸ್ ಸಿ ಗೋಡೌನ್ ನಲ್ಲಿ 7282 ಕ್ವಿಂಟಲ್ ಜೋಳ ದುರುಪಯೋಗವಾಗಿರುವ ಕುರಿತು ಕಳೆದ ಜುಲೈ 6 ರಂದು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಕೆಎಸ್ ಸಿಎಸ್ ಸಿ ಗೋಡೌನ್ ಮ್ಯಾನೇಜರ್ ಬಸವರಾಜ್ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಸಿರುಗುಪ್ಪ ಠಾಣೆಯ ಸಿಪಿಐ ಪ್ರಕರಣ ಪ್ರಮುಖ ಆರೋಪಿ ಗೋಡೌನ್ ಮ್ಯಾನೇಜರ್ ಬಸವರಾಜ್ ಅವರಿಂದ 10 ಲಕ್ಷ ರೂ.ಗಳನ್ನು ಸೋಮವಾರ ವಶಪಡಿಸಿಕೊಂಡಿದ್ದಾರೆ ಎಂದು ಎಸ್ ಪಿ ಸೈದುಲು ಅಡಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಇವರೊಂದಿಗೆ ಅಕ್ರಮದಲ್ಲಿ ಭಾಗಿಯಾಗಿದ್ದ ಇನ್ನು ನಾಲ್ವರನ್ನು ಬಂಧಿಸಲಾಗಿದೆ. ಜೋಳವನ್ನು ಸಾರ್ವಜನಿಕರಿಗೆ ವಿತರಣೆ ಮಾಡದೆ ಎ1 ಆರೋಪಿ ಬಸವರಾಜ್ ಅವರೊಂದಿಗೆ ಸೇರಿ ಅವ್ಯವಹಾರಕ್ಕೆ ಸಹಕರಿಸಿ ಸರ್ಕಾರಕ್ಕೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಎಪಿಎಂಸಿ ಗೋಡೌನ್ ಮ್ಯಾನೇಜರ್ ಅನುಪಮ, ಮಲ್ಲಿಕಾರ್ಜುನ, ರೈತರ ಹೆಸರಲ್ಲಿ ನಕಲಿ ದಾಖಲೆ, ಬಿಲ್ ಸೃಷ್ಟಿಸಿ 1680 ಕ್ವಿಂಟಲ್ ಜೋಳ ಖರೀದಿಸಿರುವ ವ್ಯಾಪಾರಿ ವಿರೂಪಾಕ್ಷಿ, ಆರೋಪಿಗಳೊಂದಿಗೆ ಶಾಮೀಲಾಗಿ ಅವ್ಯವಹಾರಕ್ಕೆ ಸಹಕಾರ ನೀಡಿರುವ ಗೋಡೌನ್ ಡಾಟಾ ಎಂಟ್ರಿ ಆಪರೇಟರ್ ಬಾಲಾಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ ಪಿ ಸೈದುಲು ಅಡಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next