Advertisement

ಶಿರಸಿ ನಗರದಲ್ಲಿ ಪ್ರಥಮ ಬಾರಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ರಾತ್ರಿ ಗಸ್ತು!

11:25 AM Sep 26, 2022 | Team Udayavani |

ಶಿರಸಿ: ನಗರದಲ್ಲಿ ಪ್ರಥಮ ಬಾರಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ರಾತ್ರಿ ಗಸ್ತು ಪಡೆ ಕರ್ತವ್ಯ ಆರಂಭಿಸಿದೆ.

Advertisement

ಕಳೆದ ರಾತ್ರಿಯಿಂದ ನಗರದಲ್ಲಿ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿಗಳಿಂದ ರಾತ್ರಿ ಗಸ್ತು ಕರ್ತವ್ಯ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಡಿಎಸ್ಪಿ ರವಿ ನಾಯ್ಕ, ವೃತ್ತನಿರೀಕ್ಷಕ ರಾಮು ನಾಯಕ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಕುಮಾರಿ ರತ್ನ ಕುರಿ ಇವರ ನೇತೃತ್ವದಲ್ಲಿ ನಗರ ಠಾಣೆಯ ಮಹಿಳಾ ಸಿಬ್ಬಂದಿಗಳು ಕರ್ತವ್ಯ ಆರಂಭಿಸಿದ್ದಾರೆ.

ರಾತ್ರಿ 1೦ ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿ ಅನುಮಾನಸ್ಪದ ವಾಹನಗಳ ತಪಾಸಣೆ ನಡೆಸಿದ್ದಾರೆ.

ಈ ಸಮಯದಲ್ಲಿ ಒಂದು ಗಂಟೆಯ ಕಾಲ ಸಿರ್ಸಿ ನಗರ ವ್ಯಾಪ್ತಿಯ ನೀಲೆಕಣಿ ಚೆಕ್ ಪೋಸ್ಟ್ ನಲ್ಲಿ  ವಾಹನಗಳ ವಿಶೇಷ ತಪಾಸಣೆಯನ್ನು ಕೂಡ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಸಿಬ್ಬಂದಿಗಳಲ್ಲಿ ನಾವು ಕೂಡ ಯಾರಿಗೂ ಕಮ್ಮಿ ಇಲ್ಲ ಎನ್ನುವ ಒಂದು ಸಂದೇಶವನ್ನು ಸಮಾಜ ಘಾತುಕರಿಗೆ ಹಾಗೂ ಅಪರಾಧಿಗಳಿಗೆ ಸಂದೇಶವನ್ನು  ಮುಟ್ಟಿಸುವ ನಿಟ್ಟಿನಲ್ಲಿ ಧೈರ್ಯವಾಗಿ ರಾತ್ರಿಯ ಸಮಯದಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿದ್ದು ಸಾರ್ವಜನಿಕ ಶ್ಲಾಘನೆಗೆ ಕಾರಣವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next