ಶಿರಸಿ: ಕಳೆದ ರಾತ್ರಿ ನಗರದ ವಿವಿಧಡೆ ಪೊಲೀಸರು ದಾಳಿ ನಡೆಸಿ, ಮದ್ಯ ಸೇವಿಸಿದ, ಅತಿಯಾದ ವೇಗ ಸೇರಿದಂತೆ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ನಗರದ ಸಾಮ್ರಾಟ್ ಹೋಟೆಲ್ ಮುಂಬಾಗ, ವಶಿವಾಜಿ ಚೌಕ್, ಜ್ಯೂಸರ್ಕಲ್, ಐದು ರಸ್ತೆ ಸರ್ಕಲ್, ಅಶ್ವಿನಿ ಸರ್ಕಲ್ ರಾಘವೇಂದ್ರ ಸರ್ಕಲ್, ನಿಲೆಕಣಿ, ಯಲ್ಲಾಪುರ ನಾಕ ಮತ್ತಿತರ ಸ್ಥಳಗಳಲ್ಲಿ ತಪಾಸಣೆ ನಡೆಸಿದರು.
ಖಾಸಗಿ ಬಸ್ ಗಳ ಅತಿ ವೇಗದ ಚಾಲನೆ, ಕುಡಿದು ವಾಹನ ಚಲಾಯಿಸುವವರ ವಿರುದ್ಧ ಹಾಗೂ ಹೈ ಬೀಂ ಲೈಟ್ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಿ ವಾಹನ ಚಲಾಯಿಸುವವರಿಗೆ ಎಚ್ಚರಿಕೆ ನೀಡಿದರು.
ಗೋಕರ್ಣದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ಸಿನ ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದವನನ್ನು ಸಾಮ್ರಾಟ್ ಹೋಟೆಲ್ ಬಳಿ ವಶಕ್ಕೆ ಪಡೆದು ಆಲ್ಕೋ ಮೀಟರ್ ಮೂಲಕ ಚೆಕ್ ಮಾಡಿ ಮದ್ಯಪಾನ ಮಾಡಿದ್ದು ಕಂಡುಬಂದಿದ್ದರಿಂದ ಪ್ರಕರಣ ದಾಖಲಿಸಿದ್ದಾರೆ.
ಬೇರೆ ಚಾಲಕನನ್ನು ಕರೆಸಿ, ಕುಡಿದ ಚಾಲಕನನ್ನು ಬದಲಾಯಿಸಿ ಬಸ್ ಬೆಂಗಳೂರಿಗೆ ಹೋಗಲು ಅನುವು ಮಾಡಿಕೊಟ್ಟಿದ್ದು, ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ.
ಡಿವೈಎಸ್ ಪಿ ಗಣೇಶ್ ಕೆ.ಎಲ್. ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ, ಪಿಎಸ್ಐಗಳಾದ ಭೀಮಶಂಕರ್, ರಾಜ್ ಕುಮಾರ್, ಎಎಸ್ಐ ಕಟ್ಟಿ ಹೊಸಕಟ್ಟ, ಸಿಬ್ಬಂದಿಗಳಾದ ಮಹಾಂತೇಶ, ಲಕ್ಷ್ಮಣ ಸಂದೀಪ ಮೋಹನ , ಪ್ರವೀಣ, ರಾಮಯ್ಯ, ಪಾಂಡು , ರಾಮದೇವ , ನಾಗಪ್ಪ, ಹನುಮಂತ, ಸುರೇಶ್, ಅನಿಲ್ , ನಾಗಪ್ಪ, ಶಿವಲಿಂಗ, ಸದ್ದಾಂ, ಜಗದೀಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.