Advertisement

Sirsi ಮನೆಗಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

04:55 PM Apr 19, 2023 | Team Udayavani |

ಶಿರಸಿ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕಣ್ಣು ತಪ್ಪಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಶಿರಸಿ ನೆಹರು ನಗರದ ಯಾಸಿನ್ ಬಾಬಾಸಾಬ್ ಶೇಖ್ ಎನ್ನಲಾಗಿದೆ.

Advertisement

ಯಾಸಿನ್ ಕಳೆದ ಮಾರ್ಚ್ 28 ರಂದು ನಗರದ ಕಸ್ತೂರ್ಬಾ ನಗರದಲ್ಲಿರುವ ಅಟೊ ಚಾಲಕನೋರ್ವರ ಮನೆಯ ನುಗ್ಗಿ ಕಪಾಟಿನಲ್ಲಿದ್ದ 30 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು 7.35 ಲಕ್ಷ ರೂ ಚಿನ್ನಾಭರಣ ಕಳ್ಳತನಮಾಡಿ ತಲೆಮರೆಸಿಕೊಂಡಿದ್ದ. ಘಟನೆಗೆ ಸಂಬಂಧಿಸಿ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಆರೋಪಿಯಿಂದ 30 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟೂ 7.35 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಉಪಾಧೀಕ್ಷಕ ಗಣೇಶ ಕೆ ಎಲ್ ಮಾರ್ಗದರ್ಶನ, ವೃತ್ರ ನಿರೀಕ್ಷಕ ಮಂಜುನಾಥ ನಾಯಕ್ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಮಾರ್ಕೆಟ್ ಪಿಎಸ್ ಐ ಭೀಮಾಶಂಕರ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Haveri: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಕನ್ನಡ ಮಾತೆಯ ಸೇವೆ ಮಾಡಲಿದೆ: ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next