ಶಿರಸಿ: ಬೆಂಗಳೂರಿನ ಸಪ್ತಕ ಸಂಸ್ಥೆಯು ಶಿರಸಿಯ ಟಿ ಆರ್ ಸಿ ಸಭಾಭವನದಲ್ಲಿ ನ.19ರ ರವಿವಾರ ಸಂಜೆ 5 ಗಂಟೆಗೆ ನೃತ್ಯ – ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ.
ಅಂತರರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಮುಕ್ತಿಶ್ರೀ ಹೈದರಾಬಾದ್ ಅವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದೆ.
ಇವರ ನೃತ್ಯಕ್ಕೆ ನುರಿತ ಯುವ ಕಲಾವಿದರ ಹಿಮ್ಮೇಳ ಜೊತೆಗೂಡಿ ದೃಶ್ಯ ಶ್ರಾವ್ಯದ ಸವಿಯೂಟ ನೀಡಲಿದೆ. ಮಜಗಾಂವ್ಕರ್ ಕುಲಕರ್ಣಿ ತಬಲಾದಲ್ಲಿ, ಶ್ರೀ ಕೃಷ್ಣ ಸಾಳುಂಕೆ – ಪಖಾವಾಜ್ ನಾಗೇಶ ಅಡಗಾಂವ್ಕರ್ ಗಾಯನದಲ್ಲಿ ಅಭಿಷೇಕ್ ಶಿಂಕರ್ ಅವರ ಹಾರ್ಮೋನಿಯಂದಲ್ಲಿ ಆಯುಷಿ ದೀಕ್ಷಿತ್ ಪದಹಂತದಲ್ಲಿ ಸಹಕಾರ ನೀಡಲಿದ್ದಾರೆ.
ನಂತರ ವಿಶ್ವ ವಿಖ್ಯಾತ, ಬಹುಶ್ರುತ ಸಂಗೀತ ವಿದುಷಿ ಹಾಗೂ ಖ್ಯಾತ ಗಾಯಕಿ ಅಶ್ವಿನಿ ಭಿಡೆ ದೇಶಪಾಂಡೆ, ಮುಂಬಯಿ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಇವರಿಗೆ ಪಂ. ರವೀಂದ್ರ ಯಾವಗಲ್ ಅವರು ತಬಲಾ ವಾದಕರಾಗಿ ಹಾಗೂ ಪಂ. ವ್ಯಾಸಮೂರ್ತಿ ಕಟ್ಟಿ ಅವರು ಹಾರ್ಮೋನಿಯಂ ವಾದಕರಾಗಿ ಕಾರ್ಯಕ್ರಮಕ್ಕೆ ಕಳೆ ಕಟ್ಟಲಿದ್ದಾರೆ.
ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕ, ದೇಣಿಗೆ ಸಂಗ್ರಹ ಇರುವುದಿಲ್ಲ ಎಂದು ಸಂಸ್ಥೆಯ ಜಿ ಎಸ್ ಹೆಗಡೆ ಸಪ್ತಕ, ಬೆಂಗಳೂರು 7019434992, 9535511888 ಇವರು ತಿಳಿಸಿದ್ದಾರೆ.