Advertisement

ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸದೆ ಭೂಮಿ ಹಕ್ಕು ನೀಡಿ, ಇಲ್ಲದಿದ್ದರೆ ರಾಜ್ಯಾದ್ಯಂತ ಧರಣಿ

08:53 PM Apr 04, 2022 | Team Udayavani |

ಶಿರಸಿ: ಮುಂದಿನ ಆರವತ್ತು ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವು ಸುಪ್ರೀಂ ಕೋರ್ಟ್ ನಲ್ಲಿ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸದೇ ಭೂಮಿ ಹಕ್ಕು ನೀಡುವ ವಾಗ್ದಾನದ ಪ್ರಮಾಣ
ಪತ್ರ ಸಲ್ಲಿಸಬೇಕು, ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ಮನೆಯ ಮುಂದೆ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಎಚ್ಚರಿಸಿದ್ದಾರೆ.

Advertisement

ಅವರು ಶಿರಸಿ ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜರುಗಿದ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು.

ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ಒಂದುವರೆ ದಶಕಗಳಾದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಕಾನೂನು ಅಜ್ಞಾನದಿಂದ ಅರಣ್ಯ ಹಕ್ಕು ಕಾಯಿದೆ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ಅರಣ್ಯ ಪ್ರದೇಶ ಮತ್ತು ಅರಣ್ಯ ಅವಲಂಭಿತರ ಕುಟುಂಬವನ್ನ ಇನ್ನೀತರ ರಾಜ್ಯಕ್ಕೆ ಹೋಲಿಸಿದಾಗ ಐದನೇ ಸ್ಥಾನದಲ್ಲಿದ್ದರೇ, ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಕರ್ನಾಟಕ ಹದಿನಾರನೇ ಸ್ಥಾನದಲ್ಲಿದೇ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ : ನಾಗರಹೊಳೆ ಉದ್ಯಾನವನದಲ್ಲಿ ಕಾಡುಪ್ರಾಣಿ ಬೇಟೆ : ಐವರ ಬಂಧನ, ಏಳುಮಂದಿ ಪರಾರಿ

ಕಾರ್ಯಕ್ರಮದಲ್ಲಿ ವೆಂಕಟೇಶ್ ಬೈಂದೂರ್ ಸ್ವಾಗತಿಸಿದರು, ದಾಕಪ್ಪ ಮಡಿವಾಳ ನಿರೂಪಣೆ ಮಾಡಿದರು, ಎಸ್ ಜಿ ಭಟ್ಟ ಉಲ್ಲಾಳ, ನೆಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ
ಕಂಡ್ರಾಜಿ, ಸರೋಜಿನಿ ಭಟ್ಟ ಬಿಸಲಕೊಪ್ಪ, ಬಿಳ್ಯಪ್ಪ ಗೌಡ ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಾರ್ಮೆಲ್ ಫರ್ನಾಂಡಿಸ್ ಎಕ್ಕಂಬಿ, ಮೂಡುರು ಸಿದ್ದನ ಗೌಡ, ನಾಗಪ್ಪ ಯಾಲಕ್ಕಿ ಗ್ರಾಮ
ಪಂಚಾಯಿತಿ ಸದಸ್ಯ, ಎಸ್ ಹೆಚ್ ಗೌಡ ಕೋಟೆಕೊಪ್ಪ, ಎಮ್ ಕೆ ನಾಯ್ಕ ಕಂಡ್ರಾಜಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅರಣ್ಯವಾಸಿಗಳ ಹಕ್ಕಿಗೆ ಸರಕಾರ ದಿಟ್ಟ ನಿರ್ಧಾರ
ತೆಗೆದುಕೊಳ್ಳಬೇಕೆಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next