Advertisement

Sirsi: ಹಣತೆ ಬೆಳಕಿನಲ್ಲಿ ಬೆಳಗಿದ ‘ಸ್ವರ್ಣವಲ್ಲೀ!’

03:49 PM Nov 27, 2023 | Team Udayavani |

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ತ್ರಿಪುರಾಖ್ಯ ದೀಪೋತ್ಸವ ಸಂಭ್ರಮದಲ್ಲಿ ನಡೆಯಿತು.

Advertisement

ಹತ್ತು ಸಹಸ್ರಕ್ಕೂ ಅಧಿಕ ದೀಪಗಳನ್ನು ಬೆಳಗಲಾಯಿತು. ಮಠಾದೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿಶೇಷವಾಗಿ ಶ್ರೀ ಲಕ್ಷ್ಮೀನರಸಿಂಹ ದೇವರ ಪುಷ್ಪ ರಥೋತ್ಸವ ನಡೆಯಿತು. ನಂತರ ಪಲ್ಲಕ್ಕಿ ಉತ್ಸವ, ರಾಜೋಪಚಾರ ಪೂಜೆ, ಅಷ್ಟಾವಧಾನ ಸೇವೆ, ಶ್ರೀ ಕ್ಷೇತ್ರಪಾಲ ದೇವರ ದೀಪೋತ್ಸವ ನಡೆಯಿತು. ಹಣತೆಯ ಬೆಳಕಿನಲ್ಲಿ ಮಠ ಬೆಳಗಿತು‌.

ಸುತ್ತಮುತ್ತ ಊರಿನ ಭಕ್ತರು, ಶ್ರೀ ಮಠದ  ವಿದ್ಯಾರ್ಥಿಗಳು ಹಾಗೂ ಎಲ್ಲರೊಂದಿಗೆ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.  ಬೆಳಿಗ್ಗೆ ಶ್ರೀ ನೃಸಿಂಹಂಮತ್ರ ಹವನ ಕೂಡ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next