Advertisement
ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅತಿಕ್ರಮಣದಾರರ ಪರವಾಗಿಯೇ ಇದ್ದಾರೆ. ವಿನಾಕಾರಣ ಕಾಂಗ್ರೆಸ್ ಪ್ರೇರಿತ ಸಮಾವೇಶ ನಡೆಸುತ್ತಿದ್ದಾರೆ ಎಂದರು.
Related Articles
Advertisement
32 ವರ್ಷಗಳಿಂದ ಅತಿಕ್ರಮಣ ಹೋರಾಟ ಮಾಡುತ್ತೇನೆಂದು ಹೇಳಿಕೊಳ್ಳುವ ನಾಯ್ಕ ಅವರಿಂದ ಜನರಿಗೆ ಆದ ಲಾಭ ಏನು?. ಗೊಂದಲ ಸೃಷ್ಟಿಸುವುದನ್ನು ಬಿಟ್ಟು ಬೇರೆ ಯಾವ ರೀತಿಯಿಂದ ಸಹಾಯ ಮಾಡಿದ್ದೀರಿ? ಸುಮ್ಮನೆ ಬೇರೆಯವರ ಮೇಲೆ ಇಲ್ಲ-ಸಲ್ಲದ ಆಪಾದನೆ ಮಾಡುವುದು ಬಿಟ್ಟು ಜನರು ನೆಮ್ಮದಿಯಿಂದ ಜೀವನವನ್ನು ನಡೆಸಲು ನೀವು ಸಹಕಾರ ನೀಡಿ ಎಂದು ಹೇಳಿದರು.
ಪ್ರತಿ ಸಲ ಚುನಾವಣೆ ಬಂದಾಗ ಮಾತ್ರ ಹೋರಾಟದ ನೆಪ ಮಾಡಿಕೊಂಡು ಬರುವನನ ಉದ್ದೇಶವೇನು? ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಪ್ರಚಾರ ನಡೆಸುತ್ತಿರುವಂತೆ ಕಾಣುತ್ತದೆ. ನೀವು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕನಾಗಿ ಕನಸು ಕಂಡಿದ್ದರೆ ನೇರವಾಗಿ ಜನರ ಬಳಿ ಹೋಗಿ. ಅದನ್ನು ಬಿಟ್ಟು ಗೊಂದಲದ ವಾತಾವರಣ ಸೃಷ್ಟಿಸುವ ಅವಶ್ಯಕತೆಯಿಲ್ಲ ಎಂದಿದ್ದಾರೆ.
ಸಭಾಧ್ಯಕ್ಷರು ಅತಿಕ್ರಮಣದಾರರ ಪರವಾಗಿ ಹಿಂದಿನ ಯಾವುದೂ ಸರಕಾರಗಳು ಮಾಡದೇ ಇರುವಂತಹ ಅತಿಕ್ರಮಣದಾರರಿಗೆ ಸರಕಾರದ ವಸತಿ ಮನೆ ನೀಡುವಂತೆ ಮಾಡಿದ್ದು ಕಾಗೇರಿಯವರು. ಈಗಾಗಲೇ ಸಭಾಧ್ಯಕ್ಷರು ವಿಧಾನಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಿದ್ದು, ಗಮನಕ್ಕಿದೆ. ಇತ್ತೀಚೆಗೆ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆದು ಚರ್ಚಿಸಿದ್ದು, ಅತಿಕ್ರಮಣದಾರರಿಗೆ ಯಾವ ರೀತಿಯ ನ್ಯಾಯ ಕೊಡಿಸಬೇಕೆಂಬುದನ್ನು ಮೇಲ್ಮನವಿ ಸಲ್ಲಿಸಲು ತಿಳಿಸಿದ್ದಾರೆ. ಪಕ್ಷಾತೀತ ಹೋರಾಟ ಎಂಬ ಹೆಸರಿನಲ್ಲಿ ರಾಜಕೀಯ ಹಿತಾಸಕ್ತಿ ಸಾಧಿಸುವುದು ಸರಿಯಲ್ಲ ಎಂದರು.
2013 ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ಅತಿಕ್ರಮಣದಾರರು ಸಾಗುವಳಿ ಮಾಡಿಕೊಂಡಿರುವ ಜಮೀನು ಮತ್ತು ಮನೆಗಳನ್ನು ಜಿ.ಪಿ.ಎಸ್. ಮಾಡಿಸಿಕೊಟ್ಟಿದ್ದಾರೆ. ಅಂತಹ ಜಮೀನುಗಳಿಗೆ ಯಾವುದೇ ಕಾರಣಕ್ಕೂ ಅರಣ್ಯ ಅಧಿಕಾರಿಗಳು ತೊಂದರೆ ನೀಡಲು ಸಾಧ್ಯವಿಲ್ಲ ಎಂದೂ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ನಾಗರಾಜ ಶೆಟ್ಟಿ ಹಾಗೂ ಇತರರು ಮಾತನಾಡಿದರು. ಮಂಜುನಾಥ ಭಂಡಾರಿ, ರತ್ನ ಶೆಟ್ಟಿ, ಪ್ರಭಾವತಿ ಗೌಡ ಹಾಗೂ ಇತರರಿದ್ದರು.
ಅರಣ್ಯ ಅತಿಕ್ರಮಣದಾರರ ಪರವಾಗಿ ಕಾಗೇರಿಯವರು ಮತ್ತು ಬಿ.ಜೆ.ಪಿ. ಸರಕಾರ ಬೆಂಬಲವಾಗಿ ನಿಂತಿದೆ. – ನಾಗರಾಜ್ ಶೆಟ್ಟಿ, ಬಿಜೆಪಿ ಪ್ರಮುಖ