Advertisement

Sirsi: ವಾಲಿಬಾಲ್ ಆಡಿದ ಶಾಸಕ ಭೀಮಣ್ಣ‌ ನಾಯ್ಕ!

11:28 AM Sep 13, 2024 | Team Udayavani |

ಶಿರಸಿ: ಮಾರಿಕಾಂಬಾ ಜಿಲ್ಲಾ‌ ಕ್ರೀಡಾಂಗಣದಲ್ಲಿ ನಡೆಸಲಾದ 14 ವರ್ಷ ವಯೋಮಿತಿ ಒಳಗಿನ ಮಕ್ಕಳ ಕ್ರೀಡಾಂಗಣದಲ್ಲಿ ಮಕ್ಕಳಿಗೆ ಉತ್ತೇಜಿಸಲು ಶಿರಸಿ ಶಾಸಕ ಭೀಮಣ್ಣ‌ ನಾಯ್ಕ ಅವರು ವಾಲಿಬಾಲ್ ಆಟದಲ್ಲಿ ಭಾಗವಹಿಸಿ ಗಮನ ಸೆಳೆದರು.

Advertisement

ಶಿರಸಿ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ ವೇಳೆಯಲ್ಲಿ ಭಾಗವಹಿಸಿದ ಶಾಸಕ, ಸ್ವತಃ ವಾಲಿಬಾಲ್ ಪಟು ಕೂಡ ಆಗಿದ್ದು, ವಾಲಿಬಾಲ್ ಆಟ ಆಡುವ ಮೂಲಕ ಕ್ರೀಡೆಗೆ ಚಾಲನೆ‌ ನೀಡಿದರು. ಆರಂಭದ ವೇಳೆ ಸರ್ವೀಸ್ ಮಾಡಿದರು.

ಈ ವೇಳೆ ಬಿಇಓ ನಾಗರಾಜ ನಾಯ್ಕ, ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪೌರಾಯುಕ್ತ ಕಾಂತರಾಜ, ತಹಸೀಲ್ದಾರ ಶ್ರೀಧರ ಮುಂದಲಮನಿ, ಚಂದನದ ಎಲ್.ಎಂ.ಹೆಗಡೆ, ವಿದ್ಯಾ ನಾಯ್ಕ, ಎಸ್.ಆರ್.ಹೆಗಡೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next