Advertisement
ಮಳೆಗಾಲದ ಚಳಿ ವಾತಾವರಣಕ್ಕೆ ಮನೆಯಿಂದ ಹೊರಕ್ಕೆ ಕಾಲಿಡದ ಹಿತೈಷಿಗಳನ್ನ ಒಟ್ಟುಗೂಡಿಸಿ ಬಸ್ಸು ಹತ್ತಿದ್ದು ಮಾರಿಕಾಂಬಾ ಸನ್ನಿಧಿಗೆ.. ಪ್ರವಾಸದ ಮುಖ್ಯ ಉದ್ದೇಶ ಮಾರಿಕಾಂಬಾ ದರ್ಶನದೊಂದಿಗೆ ಜೋಗದ ವೈಯ್ನಾರವನ್ನು ಕಣ್ತುಂಬಿಕೊಳ್ಳುವುದಾಗಿತ್ತು. ನಮ್ಮ ತಂಡವೂ ಶಿರಸಿ ಮೂಕಾಂಬಿಕಾ ದೇವಸ್ಥಾನ ಕಣ್ತುಂಬಿಕೊಳ್ಳಲು ಹೊರಟಿತು.
Related Articles
ಶಿರಸಿಯ ಮಾರಿಕಾಂಬೆ ಜಾತ್ರೆ ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುತ್ತದೆ. ಶಿರಸಿ ಮಾರಿಕಾಂಬಾ ಜಾತ್ರೆ ಅಥವಾ ಶಿರಸಿ ಮಾರಿಜಾತ್ರೆ ಅಥವಾ ಶಿರಸಿ ಮಾರೆಮ್ಮನವರ ಜಾತ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ನಡೆಯುತ್ತದೆ. ಮುನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬರುತ್ತಿರುವ 9 ದಿನಗಳ ಈ ಜಾತ್ರೆಯನ್ನು ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
Advertisement
ಈ ಜಾತ್ರೆಗೆ ದೇಶದ ಮೂಲೆ-ಮೂಲೆ ಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಜಾನಪದ ಕಲೆಗಳ ಪ್ರದರ್ಶನಗಳು, ರಸ್ತೆಯ ಬದಿಗಳಲ್ಲಿ ಬಗೆ ಬಗೆಯ ಅಂಗಡಿ ಮುಗ್ಗಟ್ಟುಗಳು, ಝಗ-ಝಗಿಸುವ ದೀಪದ ಅಲಂಕಾರಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತವೆ. ಮೊದಲು ಜಾತ್ರೆಯ ಸಂದರ್ಭ ದಲ್ಲಿ ಕೋಣನ ಬಲಿಕೊಡುವ ಪದ್ಧತಿಯು ಜಾರಿಯಲ್ಲಿತ್ತು.
ಇಷ್ಟೆಲ್ಲಾ ಸಂಪೂರ್ಣ ಹಿನ್ನೆ°ಲೆ ಬುರುಡೆಯಲ್ಲಿ ಅಚ್ಚಾಗುತ್ತಿದ್ದಂತೆಯೇ ಜೋಗದ ಭೋರ್ಗರೆವ ಜಲ ರಸಧಾರೆ ಮುದದಿಂದ ಸ್ವಾಗತಿಸುತ್ತಿತ್ತು.. ಮಳೆಯ ಆರಂಭದ ಹಂತದಿಂದಾಗಿ ಜೋಗ ತುಂಬಿ ಹರಿಯುತ್ತಿದ್ದುರಿಂದ ಕೆಳಗಡೆಯ ಯಾಣಕ್ಕೆ ಪ್ರಯಾಣ ಅಸಾಧ್ಯವಾಗಿತ್ತು. ಆದರೂ ಮೇಲಿನ ಹಂತದಲ್ಲೇ ಮನೋ ರಂಜಿಸಿ, ಜೋಗವನ್ನ ಕಣ್ತುಂಬಿ ಕೊಂಡೆವು.
ಗಾಂಧೀಜಿಯಿಂದ ಅಹಿಂಸಾ ಪಾಠ1933ರ ವೇಳೆ ಮಹಾತ್ಮಾ ಗಾಂಧಿ ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿರುವ ಉÉಲೇಖಯಿದೆ. ಅನಂತರ ಗಾಂಧೀಜಿಯವರ ಅನುಯಾಯಿಗಳು ಜನಸಾಮಾನ್ಯರಿಗೆ ಅಹಿಂಸಾ ತತ್ತÌಗಳನ್ನು ಬೋಧಿಸಿ ಅವರ ಮೂಢನಂಬಿಕೆಗಳನ್ನು ತೊಡೆದು ಹಾಕಿ ಹಿಂಸಾತ್ಮಕವಾದ ಈ ಪ್ರಾಣಿಬಲಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಈಗ ಜಾತ್ರೆಯ ಸಂದರ್ಭದಲ್ಲಿ ಕೋಣನ ಬಲಿಕೊಡುವ ಪದ್ಧತಿಯನ್ನು ನಿಷೇಧಿಸಲಾಗಿದೆ. ಶ್ರೀ ಮಾರಿಕಾಂಬಾ ದೇವಿಯ ದೇವಾಲಯದ ಸುತ್ತಲು ಗೋಡೆಗಳ ಮೇಲೆ ಹಿಂದಿನ ಕಾಲದ ಸುಂದರ ವರ್ಣಚಿತ್ರಗಳು, ರಾಮಾಯಣ ಮಹಾಭಾರತದ ಘಟನೆಗಳನ್ನು ವರ್ಣಿಸುವ ಚಿತ್ರಗಳು, ಶಿರಸಿಯ ಜಾತ್ರೆ, ಜಾತ್ರೆಯ ಸೊಬಗು ಪ್ರತಿಯೊಬ್ಬರ ಮನಸಿನಲ್ಲಿಯೂ ಅಚ್ಚಳಿಯದೇ ಉಳಿಯುವಂತದ್ದಾಗಿದೆ. ಒಟ್ಟಿನಲ್ಲಿ ಇಲ್ಲಿನ ಸೊಬಗು ಸೌಂದರ್ಯ ವರ್ಣಿಸಲು ಅಸಾಧ್ಯವಾದುದು. ರೂಟ್ ಮ್ಯಾಪ್
1 ಮಂಗಳೂರಿನಿಂದ ಉಡುಪಿ- ಕುಂದಾಪುರ ಮಾರ್ಗವಾಗಿ 260 ಕಿ.ಮೀ. ದೂರದಲ್ಲಿ ಶಿರಸಿಯಿದೆ.
2 ರಾ.ಹೆ. ಆಗಿರುವುದರಿಂದ ಎಲ್ಲ ಸೌಲಭ್ಯಗಳು ದೊರೆಯುತ್ತವೆ.
3 ಶ್ರೀ ಕ್ಷೇತ್ರ ಶಿರಸಿ ಮೂಕಾಂಬಿಕಾ ದೇವ ಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಸಿಗುತ್ತದೆ.
4 ಜೋಗಫಾಲ್ಸ್, ಯಾಣ ಇವು ಹತ್ತಿರದ ಸ್ಥಳಗಳು. - ಗಣೇಶ್ ಪವಾರ್, ಮಂಗಳೂರು