ಶಿರಸಿ : ಜಾತ್ರೆ ಎಂದರೆ ಮಕ್ಕಳು ಕೈ ತಪ್ಪುವುದು, ವಸ್ತುಕಳೆದುಕೊಳ್ಳುವುದು ಸಹಜ. ಆದರೆ ಆ ಸಂದರ್ಭದಲ್ಲಿ ಕಳೆದುಕೊಂಡವರ ದಿಗಿಲು ಮಾತ್ರ ಹೇಳತೀರದು. ಇಂಥ ನೊಂದವರ ನೆರವಿಗೆ ಇಲ್ಲಿನ ಜಾತ್ರಾ ಪೊಲೀಸರು ಹಗಲು ಇರುಳೆನ್ನದೆ ಹೆಗಲು ಕೊಡುತ್ತಿದ್ದಾರೆ.
ಕಳೆದು ಹೋದ ಮಕ್ಕಳಿಗೆ ಪಾಲಕರನ್ನು ಹುಡುಕಿಕೊಡವುದು, ಹಣ ಸಹಿತ ಬ್ಯಾಗ್ ಕಳೆದವರಿಗೆ ಮರಳಿ ನೀಡುವಲ್ಲಿ ಜಾತ್ರಾ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಮಾಡುತ್ತಿದ್ದು, ಸಾರ್ವಜನಿಕರ ಶ್ಲಾಘನೆ, ಮೆಚ್ಚುಗೆಗೆ ಕಾರಣವಾಗಿದೆ.
ಅಂದಹಾಗೆ ಈ ಪೊಲೀಸರು ಜಾತ್ರಾ ಒತ್ತಡ ನಿವಾರಣೆ, ಕಳ್ಳರನ್ನು ಕಂಡರೆ ಹಿಡಿದು ಕಂಬಿ ಎಣಿಸುವಂತೆ ಮಾಡುವುದು, ವೃದ್ದರಿಗೆ, ವಿಕಲಚೇತರಿಗೆ ನೆರವಾಗುವುದು ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಹೆಲ್ಪ್ ಲೈನ್ ಕೆಲಸ ಮಾಡುತ್ತಿರುವುದು ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.
ಇದನ್ನೂ ಓದಿ : ಶಿರಸಿ ಮಾರಿಕಾಂಬಾ ಜಾತ್ರೆ : ಗದ್ದುಗೆಯಲ್ಲಿ ವಿರಾಜಮಾನಳಾದ ದೇವಿ