ಶಿರಸಿ: ದಕ್ಷಿಣ ಭಾರತದ ಪ್ರಸಿದ್ದ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಒಂಬತ್ತು ದಿನಗಳ ಕಾಲ ನಡೆಯಲಿದ್ದು, ಮಾರ್ಚ 19ರಿಂದ 27ರ ತನಕ ದೇವಿ ಜಾತ್ರೆಯ ಸಡಗರದ ಅಂಗವಾಗಿ ಮಂಗಳವಾರ ರಾತ್ರಿ 11.39ರ ವೇಳೆಗೆ ನವ ವಧುವಾಗಿ ಸಿಂಗಾರಗೊಂಡ ಅಮ್ಮನ ಕಲ್ಯಾಣ ಪ್ರತಿಷ್ಠೆ ಕಾರ್ಯಗಳು ನಡೆದವು.
ಸರ್ವಾಲಂಕಾರ ಭೂಷಿತಳಾಗಿ, ಹೊಸ ರೇಷ್ಮೆ ಶೀರೆ ತೊಟ್ಟ ತಾಯಿಯ ತವರು ಮನೆಯವರು ಎಂದೇ ಗುರುತಿಸಲಾದ ನಾಡಿಗ ಮನೆತನದ ವಿಜಯ ನಾಡಿಗರು ಕಲ್ಯಾಣ ಮಹೋತ್ಸವ ನಡೆಸಿದರು.
ಮಾ.20ಕ್ಕೆ ಬೆಳಿಗ್ಗೆ ದೇವಿಯು ರಥೋತ್ಸವ, ಶೋಭಾ ಯಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಬುಧವಾರ ಬೆಳಿಗ್ಗೆ 7.27ರಿಂದ 7.39ರೊಳಗೆ ದೇವಸ್ಥಾನದ ಸಭಾಂಗಣದಿಂದ ದೇವಿ ಹೊರಗೆ ಬಂದು ರಥ ಏರಳಿದ್ದಾಳೆ. 8.59ರ ನಂತರ ಭಕ್ತರ ಜಯಘೋಷಗಳ ಮಧ್ಯೆ ರಥೋತ್ಸವ ಆರಂಭವಾಗಲಿದೆ.
ಬಿಡಕಿಬಯಲಿನ ಜಾತ್ರಾ ಗದ್ದುಗೆಯ ಮೇಲೆ ಪ್ರತಿಷ್ಠಾಪನೆ ಮ.12.57ರಿಂದ 1.10ರೊಳಗೆ ಆಗಲಿದ್ದಾಳೆ. 21ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವಾ ಸ್ವೀಕಾರ ಅಂದು ಬೆಳಿಗ್ಗೆ 5 ರಿಂದ ಆರಂಭವಾಗಲಿದೆ. 27ರಂದು ಬೆಳಿಗ್ಗೆ 10:15ಕ್ಕೆ ಜಾತ್ರಾ ಸೇವಾ ಮುಗಿಯಲಿದೆ. ಅಂದು 10:41ಕ್ಕೆ ಗದ್ದುಗೆಯಿಂದ ಅಮ್ಮ ಏಳಲಿದ್ದಾರೆ.
ಏ.9ರಂದು ಬೆಳಿಗ್ಗೆ 7:51ರಿಂದ 8.03 ಯುಗಾದಿಗೆ ದೇವಾಲಯದಲ್ಲಿ ದೇವಿ ಪುನರ್ ಪ್ರತಿಷ್ಠೆ ಆಗಲಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಓದು, ಕೌಶಲ ಅಗತ್ಯ