ಶಿರಸಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಶ್ರೀ ಮಾರಿಕಾಂಬೆ ಹಾಗೂ ಅವಳ ಜಾತ್ರೆ. ಇದು ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯು ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಯನ್ನು ಕೂಡ ಮೂಡಿಗೇರಿಸಿಕೊಂಡಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ವಿದೇಶಗಳಿಂದಲೂ, ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಬಂದು ದೇವಿಯ ಆಶೀರ್ವಾದ ಪಡೆದುಕೊಳ್ಳುತ್ತಾರೆ.
ಮಾರಿಕಾಂಬೆ ದೇವಾಲಯವನ್ನು ಮಾರಿಗುಡಿ, ಅಮ್ನೋರ ಗುಡಿ ಎಂದಲೂ ಕರೆಯಲಾಗುತ್ತದೆ.
ಈ ದೇವಾಲಯವು 1688 ರಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗಿದೆ. ಈಕೆ ಕರ್ನಾಟಕದ ಎಲ್ಲಾ ಮಾರಿಯಮ್ಮಗಳ ಹಿರಿಯಕ್ಕ ಎಂಬ ಮಾತಿದೆ.
ಬಹಳ ಹಿಂದೆ ಒಬ್ಬ ಬ್ರಾಹ್ಮಣನಿದ್ದ. ಮಹಾ ಪಂಡಿತನು ಆಗಿದ್ದ. ಈತನಿಗೆ ಒಬ್ಬಳು ಸುಂದರವಾದ ಮಗಳಿದ್ದಳು. ಒಮ್ಮೆ ಒಬ್ಬ ಕೆಳವರ್ಗದ ಯುವಕ ವೇದ ಕಲಿಯುವ ಆಸೆಯಿಂದ ಈಕೆಯು ತಂದೆಯ ಬಳಿ ತಾನು ಬ್ರಾಹ್ಮಣ ಅಂತ ಸುಳ್ಳು ಹೇಳಿ ಶಿಷ್ಯನಾಗಿ ವೇದ ಕಲಿಯುತ್ತಾನೆ. ನಂತರ ಯುವಕ ಯುವತಿಯ ನಡುವೆ ಪ್ರೀತಿ ಹುಟ್ಟುತ್ತದೆ. ನಂತರ ಬ್ರಾಹ್ಮಣ ಇವರಿಬ್ಬರೂ ಮದುವೆ ಮಾಡಿಸಿ ಮನೆ ಅಳಿಯನನ್ನಾಗಿ ಮಾಡಿಕೊಳ್ಳುತ್ತಾನೆ. ಮಕ್ಕಳು ಜನಿಸಿದ ಮೇಲೆ ಮಕ್ಕಳನ್ನು ಹೊರಗಡೆ ಕರೆದೊಯ್ದು ತಾನು ಕೂಡ ಮಾಂಸವನ್ನು ತಿಂದು,ಅವರಿಗೂ ಮಾಂಸವನ್ನು ಪರಿಚಯಿಸುತ್ತಾನೆ. ಒಂದು ದಿನ ಈ ವಿಷಯ ಆಕೆಗೆ ತಿಳಿದು ರುದ್ರಾವತಾರ ತಾಳುತ್ತಾಳೆ. ಅವಳಿಂದ ತಪ್ಪಿಸಿಕೊಳ್ಳಲು ಆತ ಕುರಿ, ಕೋಳಿ, ಕೋಣಗಳ ರೂಪ ತಾಳಿ ದರೂ ಆಕೆ ಎಲ್ಲವನ್ನೂ ಸಂಹರಿಸಿ ಗಂಡನನ್ನು ಕೊಂದು ಮನೆಗೆ ಬೆಂಕಿ ಹಚ್ಚಿ ಕಾಣೆಯಾಗುತ್ತಾಳೆ. ನಂತರ ಕೊನೆಯಲ್ಲಿ ದೈವತ್ವವನ್ನು ಪಡೆಯುತ್ತಾಳೆ ಎಂದು ಪುರಾತನ ಕಥೆಯಲ್ಲಿದೆ. ಆದರೆ ಇದನ್ನು ಹಲವು ಚಿಂತಕರು ಒಪ್ಪುವುದಿಲ್ಲ. ಈ ಕಥೆಯನ್ನು ಮೇಲ್ವರ್ಗದವರು ಸೃಷ್ಟಿ ಮಾಡಿದ್ದಾರೆ ಎಂದು ನಂಬಿದ್ದಾರೆ.
ಈ ದೇವಸ್ಥಾನದ ಇತಿಹಾಸ ವೆನೆಂದರೆ ದೇವಿಯ ವಿಗ್ರಹವು ಹಾನಗಲ್ ನಿಂದ ಶಿರಸಿಗೆ ಬಂದಿತೆಂದು ಪುರಾಣ ಕಥೆ ಹೇಳುತ್ತದೆ.ಮೊದಲು ಹಾನಗಲ್ ನಲ್ಲಿ ಜಾತ್ರೆ ನಡೆಯುತ್ತಿತ್ತು. ಒಂದು ಸಲ ಜಾತ್ರಾ ಮಹೋತ್ಸವ ದ ಬಳಿಕ ದೇವಿಯ ವಿಗ್ರಹ ಹಾಗೂ ಆಕೆಯ ಚಿನ್ನಾಭರಣ ಗಳನ್ನು ಪೆಟ್ಟಿಗೆ ಯಲ್ಲಿ ಹಾಕಿಟ್ಟಿದ್ದರಂತೆ, ಅದನ್ನು ನೋಡಿದ ಕಳ್ಳರು ದೇವಿಯ ಆಭರಣನೆತ್ತಿಕೊಂಡು ವಿಗ್ರಹವಿದ್ದ ಪೆಟ್ಟಿಗೆಯನ್ನು ಶಿರಸಿ ಯ ಕೆರೆಯಲ್ಲಿ ಹಾಕಿದರಂತೆ. ಒಂದು ರಾತ್ರಿ ದೇವಿ ಭಕ್ತನೊಬ್ಬನ ಕನಸಿನಲ್ಲಿ ಬಂದು “ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ.
ನನ್ನನ್ನು ಮೇಲೆತ್ತು ಎಂದು ಹೇಳುತ್ತಾಳೆ. ಅದರಂತೆ ಪೆಟ್ಟಿಗೆ ಯನ್ನು ತೆಗೆದು ದೇವಿಯನ್ನು ವೈಶಾಖ ಶುದ್ಧ ಅಷ್ಠಮಿಯ ಮಂಗಳವಾರ ದಂದು ಪ್ರತಿಷ್ಠಾಪನೆ ಮಾಡುತ್ತಾರೆ. ಅದುವೇ ಶ್ರೀ ಮಾರಿಕಾಂಬೆ ದೇವಾಲಯ. ನಂತರ ದೇವಿಯ ವಿಗ್ರಹ ಸಿಕ್ಕ ಕೆರೆಯನ್ನು ದೇವಿಕೆರೆ ಎಂದು ನಾಮಕರಣ ಮಾಡಲಾಯಿತು. ಹೀಗೆ ಇದು ಹಲವು ವಿಶೇಷತೆ ಯಿಂದ ಕೂಡಿದೆ. ಈ ಕಥೆಗಳನ್ನಾ ಓದಿದ ಮೇಲೆ ನಿಮಗೂ ಜಾತ್ರೆಗೆ ಬರಬೇಕು ದೇವಿಯ ಆಶೀರ್ವಾದ ಪಡಿಬೇಕು ಅಂತ ಆಸೆಯಾಗ್ತಾ… ಇರಬೇಕು ಅಲ್ವಾ..?? ಮತ್ತೆ ಯಾಕೆ ತಡಾ….??
-ಕಾವ್ಯಾ ಹೆಗಡೆ
ಎಂ.ಇ.ಎಸ್, ಶಿರಸಿ