Advertisement
ಜು.15ರ ಸೋಮವಾರ ರಾತ್ರಿ ಕುಸಿದ ಗುಡ್ಡ ತೆರವಿಗೆ ಜು.16ರ ಮಂಗಳವಾರದಿಂದ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಲಾಗುತ್ತಿತ್ತು. ಸಾಗರ ಮಾಲಾ ಯೋಜನೆಯಲ್ಲಿ ಗುತ್ತಿಗೆ ಪಡೆದ ಆರ್.ಎಸ್.ಎನ್.ಎಸ್. ಕಂಪನಿ ಹಾಗೂ ತಾಲೂಕು ಆಡಳಿತ ಮರ ಹಾಗೂ ಮಣ್ಣಿನ ತೆರವು ಮಾಡುತ್ತಿತ್ತು. ಇದೀಗ ಜು.20ರ ಶನಿವಾರ ಸಂಜೆಯೊಳಗೆ ತೆರವು ಕಾರ್ಯಾಚರಣೆ ಮುಗಿಸಿ ನಾಳೆಯಿಂದ (ಶನಿವಾರ) ಸಂಚಾರಕ್ಕೆ ಬಳಸಬಹುದೆಂಬ ಲೆಕ್ಕಾಚಾರ ಕೂಡ ಈಗ ತಲೆಕೆಳಗಾಗಿದೆ.
ಅಂಕೋಲಾ, ಕಾರವಾರ, ಗೋವಾಗಳಿಗೆ ಸಂಚರಿಸುವವರು ಯಲ್ಲಾಪುರ ಮಾರ್ಗವಾಗಿ ಸಂಚರಿಸಬೇಕು, ಗೋಕರ್ಣ ಕುಮಟಾಕ್ಕೆ ಯಾಣ ಮಾರ್ಗವಾಗಿ ಸಂಚರಿಸಬೇಕು, ಹಾಗೆಯೇ ಹೊನ್ನಾವರ ಕುಮಟಾ, ಮಂಗಳೂರು ಭಾಗಗಳಿಗೆ ಸಂಚರಿಸುವವರು ಸಿದ್ದಾಪುರ ಬಡಾಳ ಘಟ್ಟದ ಮೂಲಕ ಸಂಚರಿಸಲು ಸೂಚಿಸಲಾಗಿದೆ ಎಂದು ಶಿರಸಿ ತಹಶೀಲ್ದಾರ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.