Advertisement
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತ ಬ್ಯಾಂಕ್ ಉಳಿಸಿಕೊಳ್ಳಲು ಮುಖ್ಯವಾಹಿನಿಗೆ ಅಲ್ಪ ಸಂಖ್ಯಾತರು ಬಾರದಂತೆ ಮಾಡುವ ಜೊತೆಗೆ ಪ್ರತ್ಯೇಕತೆ ಭಾವನೆ ಬೆಳೆಸುತ್ತಿದೆ. ಕಾಂಗ್ರೆಸ್ ನ ಈ ಷಡ್ಯಂತ್ರಕ್ಕೆ ಅಲ್ಪ ಸಂಖ್ಯಾತರು ಬಲಿಯಾಗಬಾರದು. ಕಾಂಗ್ರೆಸ್ ರಾಜಕಾರಣ ದೇಶಕ್ಕೆ ಮಿತಿ ಮೀರಿ ಅಪಾಯವಾಗುವ ಸಾಧ್ಯವಿದೆ. ಹಿಂದುಗಳ ಬಗ್ಗೆ ಬೇರೆಯಾಗಿ, ಅಲ್ಪ ಸಂಖ್ಯಾತರ ಬಗ್ಗೆ ಮಾತನಾಡುವಾಗ ಇಡಿಯಾಗಿ ಮಾತನಾಡುತ್ತದೆ ಎಂದು ಆಕ್ಷೇಪಿಸಿದರು.
ಸರಕಾರವಿದೆ, ಆಡಳಿತ ಇಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ, ಸರಕಾರೀಕರಣಗೊಳಿಸಿದೆ ಎಂದು ಜರಿದರು. ಮುಡಾ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸ್ವಾರ್ಥಕ್ಕಾಗಿ ಅಧಿಕಾರ ಬಳಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಸರಿಯಾಗಿಲ್ಲ, ರಾಜ್ಯದ ಬೊಕ್ಕಸ ಬರಿದಾಗಿ ರಸ್ತೆಯ ಹೊಂಡ ತುಂಬಲೂ ಹಣವಿಲ್ಲದಂತೆ ಆಗಿದೆ. ಅತಿ ಮಳೆಗೆ ಎಲ್ಲೆಡೆ ಹಾನಿಯಾಗಿದ್ದರೂ ಒಂದು ರೂಪಾಯಿ ಪರಿಹಾರ ಇಲ್ಲ, ಅಭಿವೃದ್ಧಿ, ಮನೆ ಬಿದ್ದವರಿಗೂ ನೆರವಿಲ್ಲ ಎಂದು ಹೇಳಿದರು.
Related Articles
Advertisement