Advertisement
ಮನೆಯ ಮಹಡಿಯ ಮೇಲೆ ಹಾಗೂ ಕೆಳಗಡೆ ಒಂದು ರೂಮಿನಲ್ಲಿ ಮನೆಯ ಜನರು ಮಲಗಿದ್ದರೂ, ಯಾರೂ ಇರದ ಕೋಣೆಯಿಂದ ಚೋರರು ಸದ್ದಾಗದಂತೆ ಕಿಟಕಿ ಬಾಗಿಲು ಮುರಿದು ಒಳಗೆ ಬಂದು ವರಮಹಾಲಕ್ಷ್ಮೀ ಪೂಜೆಗೆ ಇಟ್ಟಿದ್ದ ಆಭರಣ ಕದ್ದೊಯ್ದಿದ್ದಾರೆ.
ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಲ್ಲ ವಿಭಾಗದಿಂದಲೂ ಸೂಕ್ಷ್ಮ ತನಿಖೆ ಆರಂಭಿಸಿದ್ದಾರೆ. ಕಾರವಾರದಿಂದ ಶ್ವಾನ ದಳ, ಬೆರಳಚ್ಚು ತಜ್ಞರೂ ಕೂಡ ಆಗಮಿಸಿ ತನಿಖೆ ಚುರುಕಿಗೆ ಸಹಕಾರ ನೀಡಿದ್ದಾರೆ.ಉತ್ತರ ಕನ್ನಡ ಜಿಲ್ಲಾ ಸೋಕೋ ಅಧಿಕಾರಿ ವಿನುತಾ ಅವರು ಬಂದು ಪರಿಶೀಲಿಸಿದ್ದಾರೆ. ಹುಬ್ಬಳ್ಳಿಯಿಂದ ಪೋರೆನ್ಸಿಕ್ ತಂಡದ ಅಧಿಕಾರಿ ಡಾಕ್ಟರ್ ಮಾಂತೇಶ್ ರವರಿಂದಲೂ ಘಟನೆ ಸ್ಥಳವನ್ನು ಪರಿಶೀಲಿಸಲಾಗುತ್ತಿದೆ.
Related Articles
ಶಿರಸಿ ಡಿಎಸ್ಪಿ ರವರಾದ ಕೆ.ಎಲ್.ಗಣೇಶ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಸಿಪಿಐ ರಾಮಚಂದ್ರ ನಾಯಕ, ಗ್ರಾಮೀಣ ಠಾಣೆಯ ಇನಸ್ಪೆಕ್ಟರ್ ಸೀತಾರಾಮ್ ಪಿ, ಪಿಎಸ್ಐ ರತ್ನ ಕೆ, ಮಾಲಿನಿ ಹಾಂಸಬಾವಿ, ನಗರ ಠಾಣೆಯ ರಾಜಕುಮಾರ್ ಮಹಾಂತೇಶ್, ಪ್ರತಾಪ್, ದಯಾ ಜೋಗಳೇಕರ್, ಶಿರಸಿ ತಾಲೂಕಿನ ನುರಿತ ಅಪರಾಧ ಸಿಬ್ಬಂದಿಗಳಾದ ಮಹಾಂತೇಶ, ಅಶೋಕ, ಚಂದ್ರಪ್ಪ ಶಿವರಾಜ್, ಪ್ರಶಾಂತ್, ಸದ್ದಾಂ, ಗಣಪತಿ, ಎಲ್ಲಪ್ಪ ಇತರೆ ಅಧಿಕಾರಿ ಸಿಬ್ಬಂದಿಗಳು ಮನೆ ಕಳ್ಳತನದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶಿರಸಿ ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದು, ಶೀಘ್ರ ಪತ್ತೆ ಮಾಡುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
Advertisement