Advertisement

Sirsi ಜಿಲ್ಲೆ ಹೋರಾಟ ಮತ್ತೆ ಮುನ್ನಲೆಗೆ: ಅನಂತಮೂರ್ತಿ ನೇತೃತ್ವ

12:23 PM Oct 16, 2024 | Team Udayavani |

ಶಿರಸಿ: ಘಟ್ಟದ ಮೇಲಿನ ಮೆಡಿಕಲ್ ಕಾಲೇಜು ಆರಂಭಿಸಲು ಪ್ರತ್ಯೇಕ ಜಿಲ್ಲೆ ಅನಿವಾರ್ಯವಾಗಿದೆ. ಈ ಕಾರಣದಿಂದ ಹೋರಾಟ ಆರಂಭಿಸುವುದಾಗಿ  ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.

Advertisement

ಅ.16ರ ಬುಧವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 30 ವರ್ಷದಿಂದ ಶಿರಸಿ ಜಿಲ್ಲೆ ಬೇಡಿಕೆ ಇದೆ. ಡಾ. ವಿ.ಎಸ್.ಸೋಂದೆ ಅವರ ಪತ್ರಗಳ‌ ಮೂಲಕ ಆರಂಭಿಸಿದ ಚಳುವಳಿ ನ್ಯಾಯವಾದಿ ಎನ್.ಎಸ್.ಹೆಗಡೆ ಮಾಳೆನಳ್ಳಿ ಅವರ ನಂತರ 10-15 ವರ್ಷಗಳಿಂದ ಉಪೇಂದ್ರ ಪೈ ಹಾಗೂ ಅವರ ಸಂಗಡಿಗರು ಹೋರಾಟ ಮಾಡಿದರು. ಈಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗುತ್ತಿದೆ. ಇದಕ್ಕಿಂತ ಅಧಿಕವಾಗಿ ಶಿರಸಿಗೆ ಮೆಡಿಕಲ್ ಕಾಲೇಜು ಆಗಲು ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನಿಯಮದಿಂದ ಸರಳವಾಗಿ ಬರಲಿದೆ. ಕಳೆದ 2 ವರ್ಷಗಳಿಂದ ನಡೆಸುತ್ತಿದ್ದ ಮೆಡಿಕಲ್ ‌ಕಾಲೇಜು ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸುಲಭವಾಗಿ ಬರಲಿದೆ ಎಂದರು.

ಕಳೆದ ಚುನಾವಣೆ ಬಳಿಕ ಮಳೆ ಹೆಚ್ಚಾಗಿದ್ದು, ಗುಡ್ಡ‌ಕುಸಿತವಾಯಿತು. ಆಗ ಮಾತನಾಡುವುದು ಸರಿಯಲ್ಲ ಎಂದು ಹೇಳಿಲ್ಲ. ಆದರೆ, ಸರಕಾರದ ಉನ್ನತ ಅಧಿಕಾರಿಗಳು ಪ್ರತ್ಯೇಕ ಜಿಲ್ಲೆ‌ ಮಾಡಿದರೆ ಮೆಡಿಕಲ್ ಆಸ್ಪತ್ರೆ ತನ್ನಿಂದ ತಾನೇ ಬರುತ್ತದೆ ಎಂದಿದ್ದಾರೆ ಎಂದು ಹೇಳಿದರು.

ಮುಂದುವರೆದು ಮಾತನಾಡಿ, ಈಗ  ಶಿರಸಿಗೆ ಪ್ರತ್ಯೇಕ ಜಿಲ್ಲೆಯ ಅವಕಾಶ ಇದೆ. ಬೆಳಗಾವಿ ಜಿಲ್ಲೆ ಕೂಡ ಚಿಕ್ಕೋಡಿ ಆಗುತ್ತಿದೆ. ಶಿರಸಿ‌ ಜಿಲ್ಲೆ ಆಗಲಿ, ಮೆಡಿಕಲ್ ಕಾಲೇಜು ಬರಲಿ ಎಂಬುದಷ್ಟೇ ನಮ್ಮ ಉದ್ದೇಶ. ಇಲ್ಲಿ ರಾಜಕೀಯ ಇಲ್ಲ. ಘಟ್ಟದ ಮೇಲಿ‌ನ ಜನರ, ಜನ ಪ್ರತಿನಿಧಿ ಭೇಟಿ ಮಾಡುತ್ತಿದ್ದೇವೆ. ಈಗಾಗಲೇ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ‌ ನಾಯ್ಕ ಅವರನ್ನು ಭೇಟಿ ಮಾಡಿದ್ದೇವೆ. ಜನಾಭಿಪ್ರಾಯ‌ ಬಂದ ಬಳಿಕ ನೋಡಬಹುದು ಎಂದಿದ್ದಾರೆ ಎಂದರು.

ಈ ವೇಳೆ ಎಂ.ಎಂ.ಭಟ್ಟ ಕಾರೆಕೊಪ್ಪ, ವಿ.ಎಂ.ಭಟ್ಟ, ಗಣಪತಿ ನಾಯ್ಕ, ಸಿ.ಎಸ್.ಗೌಡ ಸಿದ್ದಾಪುರ, ಶಿವಾನಂದ ದೇಶಳ್ಳಿ, ದೀಪಕ್ ಕಾನಡೆ, ಸಂತೋಷ ನಾಯ್ಕ, ಶೋಭಾ ನಾಯ್ಕ, ಚಿದಾನಂದ ಹರಿಜನ, ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next