Advertisement

ಶಿರಸಿ ಅಡಕೆ ಭೌಗೋಳಿಕ ಸನ್ನದ್ದಿಗೆ ಸೇರ್ಪಡೆ

12:30 AM Mar 08, 2019 | |

ಶಿರಸಿ: ಉತ್ತರ ಕನ್ನಡದ ಖ್ಯಾತ ಶಿರಸಿ ಅಡಕೆಗೆ ಈಗ ಭೌಗೋಳಿಕ ಸನ್ನದು ಎಂಬ ಗರಿಮೆ ದೊರೆತಿದೆ. ಶಿರಸಿ ಅಡಕೆಗೆ
“ಶಿರಸಿ ಸುಪಾರಿ’ ಎಂಬ ಭೌಗೋಳಿಕ ಸನ್ನದನ್ನು ಪಡೆಯುವಲ್ಲಿ ಇಲ್ಲಿನ ದಿ ತೋಟಗಾರ್ಸ್‌ ಕೋ-ಆಪರೇಟಿವ್‌ ಸೇಲ್‌
ಸೊಸೈಟಿ ಪ್ರಮುಖ ಪಾತ್ರವಹಿಸಿದೆ.

Advertisement

ಗುಣಮಟ್ಟದ ಉತ್ಪನ್ನಗ ಳನ್ನು ಗುರುತಿಸುವ ಸಲುವಾಗಿ ಭೌಗೋಳಿಕ ಸನ್ನದ್ದು ಎಂಬ ಹೊಸ ವ್ಯವಸ್ಥೆಯನ್ನು 2003ರಲ್ಲಿ ಜಾರಿಗೆ ತರಲಾಯಿತು. ಇದುವರೆಗೆ ಭಾರತದಲ್ಲಿ 325 ಉತ್ಪನ್ನಗಳು ನೋಂದಣಿಯಾ ಗಿದ್ದು ಅದರಲ್ಲಿ ಕರ್ನಾಟಕದ 39 ಉತ್ಪನ್ನಗಳು ಭೌಗೋಳಿಕ ಸನ್ನದ್ದಿನಲ್ಲಿ ನೋಂದಣಿಯಾಗಿದೆ. ಇದೀಗ ಉತ್ತರ ಕನ್ನಡದ ಅಡಿಕೆ ಶಿರಸಿ ಸುಪಾರಿ ಎಂದು ಭೌಗೋಳಿಕ ಸನ್ನದ್ದು ಪಡೆದಿದೆ.

ಈ ಮೊದಲು ಭೌಗೋಳಿಕ ಸನ್ನದ್ದಿಗೆ ಸೇರ್ಪಡೆಯಾಗಿರುವ ಉತ್ಪನ್ನಗಳ ಜೊತೆಗೆ ಅಡಕೆಯೂ ಸೇರಿದೆ. ಜಾಗತಿಕ
ಪೈಪೋಟಿಯಿಂದ ಜಗತ್ತಿನಲ್ಲಿ ಎಲ್ಲಾ ದೇಶಗಳು ಎಲ್ಲಾ ತರಹದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಿದೆ. ಆದರೆ ಈ ಉತ್ಪನ್ನಗಳು ಮೂಲ ಉಗಮಸ್ಥಾನದ ಗುಣಮಟ್ಟ ಹೊಂದಿರುವುದಿಲ್ಲ. ಈ ಇದರಲ್ಲಿ ನೋಂದಣಿಯಾದ ಉತ್ಪನ್ನಗಳು ಯಾವ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಹಾಗೂ ಅದರ ಗುಣಮಟ್ಟ ಹೇಗಿರುತ್ತದೆ ಎಂದು ನಮೂದಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next