Advertisement
ಶಿರಸಿ ಕ್ಷೇತ್ರದಲ್ಲಿ ಮೂವರೂ ಸಂಭಾವಿತ ಅಭ್ಯರ್ಥಿಗಳೇ ಆಗಿದ್ದರು. ಕಾಗೇರಿ ಬಿಜೆಪಿಯಿಂದ, ಭೀಮಣ್ಣ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಶಶಿಭೂಷಣ ಹೆಗಡೆ ಅವರ ನಡುವೆ ತ್ರಿಕೋನ ಸ್ಪರ್ಧೆ ಎಂದೇ ಹೇಳಲಾಗಿತ್ತು. ಆದರೆ, ಮತದಾರರು ಚಿತ್ರಣ ಬದಲಾಯಿಸಿದ್ದಾರೆ. ಈ ಅವಧಿಯಲ್ಲಿ ಕೆಲಸ ಆಗಿಲ್ಲ ಎಂಬ ಅಸಮಾಧಾನಗಳು ಇದ್ದ ಹುಲೇಕಲ್ ಜಿಪಂ ಕ್ಷೇತ್ರದಲ್ಲೂ ಕಾಗೇರಿ ಅವರ ಗೆಲುವಿಗೆ ಲೀಡ್ ನೀಡಿದೆ. ಅಲ್ಲಿಂದ ಶುರುವಾದ ಮತ ಬೇಟೆ ಇಡೀ ಕ್ಷೇತ್ರದ 264 ಮತಗಟ್ಟಗಳಲ್ಲೂ ಮುನ್ನಡೆಗೆ ನೆರವಾಗಿದೆ. ಸಿದ್ದಾಪುರ ತಾಲೂಕಿನಲ್ಲೂ ಕಾಗೇರಿ ಲೀಡ್ ಹೆಚ್ಚಿಸಲು ಕಾರಣವಾಗಿದೆ.
Related Articles
Advertisement
ಕೆಲವರು ಮೊಬೈಲ್ ಬಳಸಿ ಟಿವಿಗಳ ಲೈವ್ ಶೋ ನೋಡಿದರೆ ಇನ್ನು ಕೆಲವರಿಗೆ ಬಿಜೆಪಿಯವರು ಕುಮಟಾ ಮೀಡಿಯಾ ಸೆಂಟರ್‌ನ ಡಿಸ್‌ಪ್ಲೇ ತೆಗೆದು ಕಳಿಸಿದ್ದು ಕುತೂಹಲ ತಣಿಸಲು ಕಾರಣವಾಯಿತು. ಉದಯವಾಣಿ ಸಹಿತ ಹಲವು ವೆಬ್‌ಸೈಟ್‌ಗಳೂ ಸಮರ್ಪಕ ಮಾಹಿತಿ ನೀಡಿದವು. ಕೆಲವು ಮನೆಗಳಲ್ಲಿದ್ದ ಇನ್ವರ್ಟರ್ ಪವರ್ ಬಳಸಿ ಗ್ರಾಮಸ್ಥರು ಟಿವಿ ನೋಡಿದರು.
ಕಾರ್ಯಕರ್ತರ ದಂಡು: ಇಲ್ಲಿನ ರಾಘವೇಂದ್ರ ಮಠದ ಬಳಿ ಇರುವ ಶಾಸಕ ವಿಶ್ವೇಶ್ವರ ಹೆಗಡೆ ಕಚೇರಿಯಲ್ಲಿ ಕಾರ್ಯಕರ್ತರು ಒಟ್ಟಾಗಿ ಕುಳಿತು ಟಿವಿ ವೀಕ್ಷಿಸಿದರು. ಮೋದಿಗೆ, ಕಾಗೇರಿಗೆ ಜೈ ಎಂದರೆ, ಬಿಜೆಪಿ ಹವಾ ಎಬ್ಬಿಸಿದ ಪ್ರಧಾನಿಗೆ ನಮೋ ಎಂದರು. ಸಹಕಾರಿ ಶಾಂತಾರಾಮ ಹೆಗಡೆ ಅವರ ಕಚೇರಿ ಆವಾರದಲ್ಲೂ ಮತದಾರರು, ಪ್ರಮುಖರು ಟಿವಿ ನೋಡಿದರು.
ಏನಾದೀತು?: ಕಾಗೇರಿ ಗೆಲುವಿಗೆ ಡಬಲ್ ಧಮಾಕ ಆಗಬಹುದೇ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಹಿನ್ನೆಲೆಯಲ್ಲಿ ಏನಾಗಬಹುದು ಎಂಬ ಗೊಂದಲ ಉಂಟಾಯಿತು. ಬಿಜೆಪಿ ನೇತೃತ್ವದ ಸರಕಾರ ಆದರೆ ಮಾತ್ರ ಶಿರಸಿಗೆ ಮಂತ್ರಿ ಸ್ಥಾನ ಬಹುತೇಕ ಖಚಿತವಿತ್ತು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜೊತೆ ರಾಜ್ಯ ಸರಕಾರದಲ್ಲಿ ಕೂಡ ಹಿರಿಯ ಸಚಿವರಾಗಿ ಕಾಗೇರಿ ಅ ಧಿಕಾರ ಸ್ವೀಕರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ರಾಜ್ಯ, ರಾಷ್ಟ್ರ ರಾಜಕಾರಣದ ಚರ್ಚೆ ಆರಂಭಿಸಿದರು. ಕಾಂಗ್ರೆಸ್ ಜೆಡಿಎಸ್ ಅಧಿಕಾರ ಹಂಚಿಕೊಂಡರೆ ಕಾಗೇರಿಗೆ ಮಂತ್ರಿಸ್ಥಾನ ದೂರವಾಗಲಿದೆ ಎಂದೂ ಚರ್ಚೆಯಲ್ಲಿ ಮಾತನಾಡಿಕೊಂಡರು.
ಮತ ಮಾಹಿತಿ
ಕೆಲವರು ಮೊಬೈಲ್ ಬಳಸಿ ಟಿವಿಗಳ ಲೈವ್ ಶೋ ನೋಡಿದರೆ ಇನ್ನು ಕೆಲವರಿಗೆ ಬಿಜೆಪಿಯವರು ಕುಮಟಾ ಮೀಡಿಯಾ ಸೆಂಟರ್‌ನ ಡಿಸ್‌ಪ್ಲೇ ತೆಗೆದು ಕಳಿಸಿದ್ದು ಕುತೂಹಲ ತಣಿಸಲು ಕಾರಣವಾಯಿತು. ಉದಯವಾಣಿ ಸಹಿತ ಹಲವು ವೆಬ್‌ಸೈಟ್‌ಗಳೂ ಸಮರ್ಪಕ ಮಾಹಿತಿ ನೀಡಿದವು. ಕೆಲವು ಮನೆಗಳಲ್ಲಿದ್ದ ಇನ್ವರ್ಟರ್ ಪವರ್ ಬಳಸಿ ಗ್ರಾಮಸ್ಥರು ಟಿವಿ ನೋಡಿದರು
ಗೆಲುವಿಗೆ ಕಾರಣವೇನು?
ಪ್ರಧಾನಿ ನರೇಂದ್ರ ಮೋದಿ ಅಲೆಕಾಗೇರಿ ಸಚಿವರಾಗಿದ್ದಾಗ ಮಾಡಿದ ಶೈಕ್ಷಣಿಕ ಅಭಿವೃದ್ಧಿ
ಪ್ರಖರ ಹಿಂದುತ್ವ
ಆರ್‌ಎಸ್‌ಎಸ್ ಕಾರ್ಯಕರ್ತರ
ಪ್ರಯತ್ನ
ಪೇಜ್ ಪ್ರಮುಖ ನಡೆ ವಕೌìಟ್ ಸೋಲಿಗೆ ಕಾರಣವೇನು?
ವಿಳಂಬವಾಗಿ ಅಭ್ಯರ್ಥಿ ಘೋಷಣೆ
ಜಿಲ್ಲಾಧ್ಯಕ್ಷರೂ ಅಭ್ಯರ್ಥಿ, ನಿರ್ವಹಣಾ ಒತ್ತಡ ಹೆಚ್ಚಳ
ಜೆಡಿಎಸ್ ಕಾಂಗ್ರೆಸ್‌ಗೆ ಒಡೆದ ಬಂಗಾರಪ್ಪ ಅಭಿಮಾನಿಗಳ ಮತ
ಸಮೀಕರಣಗೊಳ್ಳದ ನಾಮಧಾರಿ ಮತಗಳು
ಕೊನೇ ದಿನಗಳಲ್ಲಿ ವೇಗ ಪಡೆಯದ ಹುರುಪು