Advertisement
ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ನಡೆದ ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿ ಇದರ 16ನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಂಸ್ಥೆಯು ತುಳು-ಕನ್ನಡಿಗರು ಹಾಗೂ ನಾಡು- ನುಡಿಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದು, ನಾವೆಲ್ಲರು ಒಂದಾಗಿ ಒಗ್ಗಟ್ಟು, ಒಮ್ಮತದಿಂದ ಸಂಸ್ಥೆಯನ್ನು ಇನ್ನಷ್ಟು ಬೆಳೆಸೋಣ ಎಂದರು.
Related Articles
Advertisement
ಇನ್ನೋರ್ವ ಗೌರವ ಅತಿಥಿಯಾಗಿ ಪಾಲ್ಗೊಂಡ ಹೈಕೋರ್ಟ್‌ನ ನ್ಯಾಯವಾದಿ ಶೇಖರ್ ಎಸ್. ಭಂಡಾರಿ ಇವರು ಮಾತನಾಡಿ, ಜಾತಿ, ಮತ, ಬೇಧವಿಲ್ಲದೆ ಒಂದೇ ವೇದಿಕೆಯಡಿ ಸಂಘಟಿತರಾಗಿ ಸಮಾಜ ಸೇವೆಗೈಯ್ಯುವುದು ಪ್ರಶಂಸನೀಯ. ನಾಡು-ನುಡಿ, ಆಚಾರ-ವಿಚಾರಗಳನ್ನು ಅರಿತು ಸಮಾಜಪರ ಕಾರ್ಯಗಳನ್ನು ಮುನ್ನಡೆಸುವ ಕಾರ್ಯ ಸಂಸ್ಥೆಯಿಂದಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಇದರ ನಿಕಟಪೂರ್ವ ಅಧ್ಯಕ್ಷ ವಿಠಲ್ ಎ. ಶೆಟ್ಟಿ ಮತ್ತು ವಿಮಲಾ ವಿ. ಶೆಟ್ಟಿ ದಂಪತಿಯನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ವಿಠಲ್ ಶೆಟ್ಟಿ ಅವರು, ಕಳೆದ 16 ವರ್ಷದ ಮೊದಲು ಈ ಸಂಸ್ಥೆಯನ್ನು ಉದ್ಘಾಟಿಸಿರುವ ಸಂದರ್ಭದಲ್ಲಿ ಬೆರಳೆಣಿಕೆಯ ಸದಸ್ಯರಿದ್ದರು. ಇಂದು ಅಸಂಖ್ಯಾತ ಸದಸ್ಯರಿದ್ದು ಹೆಮ್ಮರವಾಗಿ ಸಂಸ್ಥೆಯು ಬೆಳೆದು ನಿಂತಿದೆ. ಸಂಘವು ನಿಂತ ನೀರಾಗದೆ ಹರಿಯುವ ನಂದಿಯಂತೆ ಹರಿಯುತ್ತಿದ್ದು, ಉತ್ತಮ ಸಮಾಜಪರ ಕಾರ್ಯಗಳನ್ನು ನಡೆಸಿ ಗಮನ ಸೆಳೆಯುತ್ತಿದೆ. ಮಕ್ಕಳಿಗೆ ನಾಡು-ನುಡಿ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ತಿಳಿಯಪಡಿಸುವ ಜವಾಬ್ದಾರಿ ಸಂಸ್ಥೆಯ ಮೇಲಿದೆ ಎಂದರು.
ಸುಶಿಲ್ ಪುತ್ರನ್ ಪ್ರಾರ್ಥನೆಗೈದರು. ಸಂಸ್ಥೆಯ ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ವಸಂತ +ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ಸಂಸ್ಥೆಯ ಪದಾಧಿಕಾರಿಗಳು ಅತಿಥಿ-ಗಣ್ಯರನ್ನು ಗೌರವಿಸಿದರು.
ಕಾರ್ಯದರ್ಶಿ ದಾಮೋದರ ಸುವರ್ಣ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ನಾಟಕ ಕಲಾವಿದರನ್ನು ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಕಲಿಕಾ ತರಗತಿಯ ಶಿಕ್ಷಕರನ್ನು ಗೌರವಿಸಲಾಯಿತು. ಶೈಕ್ಷಣಿಕ ನಿಧಿಗಾಗಿ ಸಂಗ್ರಹಿಸಿದ ಲಕ್ಕಿಡಿಪ್ ಡ್ರಾ ಗೊಳಿಸಲಾಯಿತು. ಅಧಿಕ ನಿಧಿ ಸಂಗ್ರಹಿಸಿದ ಸದಸ್ಯರನ್ನು ಗಣ್ಯರು ಅಭಿನಂದಿಸಿದರು. ಸ್ಥಳೀಯ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳನ್ನು ಗೌರವಿಸಲಾಯಿತು.
ಅತಿಥಿಗಳಾಗಿ ಜೈ ಸಿಂಗ್ ಪಾಟೀಲ್, ಸಮಾಜ ಸೇವಕ, ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯ ನಗರ ಸೇವಕ ವಿನೋದ್ ಕಾಲನ್, ಅನಿತಾ ಭಂಡಾರಿ, ವಿಮಲಾ ವಿ. ಶೆಟ್ಟಿ, ಸಲಹೆಗಾರರಾದ ರಾಜೀವ ಭಂಡಾರಿ, ರಮೇಶ್ ಕುಕ್ಯಾನ್, ಸಂಸ್ಥೆಯ ಕೋಶಾಧಿಕಾರಿ ಸದಾಶಿವ ಸಾಲ್ಯಾನ್, ಮಹಿಳಾಧ್ಯಕ್ಷೆ ಉದಯಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್ ಕರ್ಕೇರ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ಸದಸ್ಯ ಬಾಂಧವರಿಂದ, ಮಕ್ಕಳಿಂದ ವಿವಿಧ ವಿನೋದಾವಳಿ ಹಾಗೂ ಧನಂಜಯ ಮೂಳೂರು ರಚಿಸಿರುವ ನಿಶ್ಚಯ ಆಂಡ್ ತುಳು ನಾಟಕವು ಸಂಸ್ಥೆಯ ಸದಸ್ಯರಿಂದ ಪ್ರದರ್ಶನಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಜೆಕಾರು ಜಯ ಶೆಟ್ಟಿ ಅವರು ನಿರ್ವಹಿಸಿದರು. ವಸಂತ ಸುವರ್ಣ ಅವರು ಸಭಾ ಕಾರ್ಯಕ್ರಮ ನಿರ್ವಹಿಸಿದರು.
ಸಂಸ್ಥೆಯು ಮಹಿಳಾ ವಿಭಾಗವನ್ನು ಸ್ಥಾಪಿಸಿ ಮಹಿಳೆಯರಿಗೆ ಯೋಗ್ಯಸ್ಥಾನಮಾನವನ್ನು ನೀಡಿ ಗೌರವಿಸಿರುವುದು ಪ್ರಶಂಸನೀಯ. ಸ್ತಿÅàಶಕ್ತಿ ಎಲ್ಲಿ ಅಡಕವಾಗಿರುತ್ತದೆಯೋ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಸ್ತಿÅàಯರನ್ನು ಗೌರವಿಸುವ ಮನೋಭಾವನೆಯನ್ನು ಮುಂದುವರಿಸಿ ಶೈಕ್ಷಣಿಕ ಕಾರ್ಯಗಳಿಗೆ ಒತ್ತು ನೀಡಿ ಬಡ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಲು ಸಂಸ್ಥೆಯು ಪ್ರಯತ್ನಿಸಬೇಕು – ಲತಾ ಜೆ. ಶೆಟ್ಟಿ (ನಿಕಟಪೂರ್ವ ಕಾರ್ಯಾಧ್ಯಕ್ಷೆ : ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗ). ಇಂದಿನ ಸಮಾರಂಭದಲ್ಲಿ ಮಹಿಳೆಯರನ್ನು ಗೌರವಿಸಿರುವುದು ಶ್ಲಾಘನೀಯವಾಗಿದೆ. ಮಹಿಳೆಯರು ಕೇವಲ ಅಡುಗೆಮನೆಗೆ ಮಾತ್ರ ಸೀಮಿತವಾಗಿರದೆ, ಸಮಾಜಪರ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಾಂಸಾರಿಕ ಕಷ್ಟ-ಸುಖಗಳಲ್ಲಿ ಸ್ಪಂದಿಸುವುದರೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲೂ ತಮ್ಮ ವಿದ್ವತ್ತನ್ನು ತೋರ್ಪಡಿಸಬೇಕು. ಈ ನಿಟ್ಟಿನಲ್ಲಿ ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್‌ನ ಮಹಿಳಾ ವಿಭಾಗದ ಕಾರ್ಯ ಅಭಿನಂದನೀಯ
– ವಿನುತಾ ಶೆಟ್ಟಿ (ಕಾರ್ಯಾಧ್ಯಕ್ಷೆ : ಮಹಿಳಾ ವಿಭಾಗ ಮುಲುಂಡ್ ಬಂಟ್ಸ್). ಪಕ್ಷ ಬೇಧ ಮರೆತು ಒಳ್ಳೆಯ ಸಂಸ್ಥೆ ಎಂಬ ಹೆಸರು ಗಳಿಸಿ ಹೆಗ್ಗಳಿಕೆಯಿಂದ ಮುನ್ನಡೆಯುತ್ತಿರುವ ಈ ಸಂಸ್ಥೆಯ ಕಾರ್ಯವೈಖರಿ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ಸಮರ್ಪಣ ಭಾವನೆ ನಮ್ಮಲ್ಲಿರಬೇಕು. ಜನಸೇವೆ ಈಶ್ವರನ ಸೇವೆ ಎಂದರಿತು ಸಮಾಜ ಸೇವೆಯಲ್ಲಿ ತೊಡಗಿದಾಗ ಮನಷ್ಯಶಾಂತಿ ಲಭಿಸುತ್ತದೆ
– ಜಯಲಕ್ಷ್ಮೀ ಹರೀಶ್ ಶೆಟ್ಟಿ
(ಗಾಯತ್ರಿ ಪರಿವಾರ). ಸಾಧನೆಯ ಪಥದತ್ತ ಸಾಗುತ್ತಿರುವ ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಯಶಸ್ವಿ ಕಾರ್ಯಕ್ರಮಗಳನ್ನು ನಿರ್ವಹಿಸಲು ಸದಸ್ಯರ ಸಹಕಾರವೇ ಮುಖ್ಯ ಕಾರಣವಾಗಿದೆ. ಈ ಒಗ್ಗಟ್ಟನ್ನು ಮುಂದುವರಿಸಿಕೊಂಡು ಸಂಘವನ್ನು ಪ್ರಗತಿಪಥದತ್ತ ಕೊಂಡೊಯ್ಯಬೇಕು
– ಸಂಜೀವ ಶೆಟ್ಟಿ ಎಕ್ಕಾರು
(ಉದ್ಯಮಿ, ಸಮಾಜ ಸೇವಕ), ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಸಂಸ್ಥೆಯನ್ನು ಹತ್ತಿರದಿಂದ ಬಲ್ಲವನಾಗಿದ್ದು, ಸಂಘವು ನಡೆಸುವ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನನ್ನಿಂದಾದಷ್ಟು ಅಳಿಯ ಸೇವೆಯನ್ನು ಮಾಡುತ್ತಿದ್ದೇನೆ. ಮುಂದೆಯೂ ಸಹಕರಿಸಲು ಸದಾ ಸಿದ್ಧನಿದ್ದೇನೆ
-ರಾಜೇಶ್ ಕೋಟ್ಯಾನ್
(ಗೌರವ ಪ್ರಧಾನ ಕಾರ್ಯದರ್ಶಿ : ಯಕ್ಷಕಲಾ ಸಂಸ್ಥೆ ಜಗದಂಬಾ ಮಂದಿರ ಡೊಂಬಿವಲಿ).