Advertisement
ಡೊಂಬಿವಲಿ ಪಶ್ಚಿಮದ ಠಾಕೂರ್ ಸಭಾಗೃಹದಲ್ಲಿ ಫೆ. 13ರಂದು ನಡೆದ ಸಿರಿನಾಡ ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ 20ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವೆಲ್ಲರು ಒಗ್ಗಟ್ಟಿನಿಂದ ಸಂಸ್ಥೆಯನ್ನುಮುನ್ನಡೆಸಿ ಸಂಘಟನಾತ್ಮಕವಾಗಿ ಬೆಳೆಸೋಣ ಎಂದು ಕರೆ ನೀಡಿದರು.
Related Articles
Advertisement
ವಸಂತ ಸುವರ್ಣ, ಪ್ರಫುಲ್ಲಾ ಶೆಟ್ಟಿ, ಸುಮಂಗಳಾ ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ಕೆ. ಕೆ. ಸಾಲ್ಯಾನ್ ಗೌರವ ಸ್ವೀಕರಿಸಿದವರ ಹೆಸರು ವಾಚಿಸಿದರು. ಅಭಿನಯ ಮಂಟಪದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಮತ್ತು ಸ್ಥಳೀಯ ನಗರ ಸೇವಕಿ ಸಂಗೀತಾ ಮುಖೇಶ್ ಪಾಟೀಲ್, ಸಮಾಜ ಸೇವಕ ಕೃಷ್ಣ ಪಾಟೀಲ್ ಅವರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸದಸ್ಯರಿಂದ ನೃತ್ಯ ವೈವಿಧ್ಯ ಹಾಗೂ ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ, ರಾಜೇಶ್ ಆಚಾರ್ಯ ಪರ್ಕಳ ರಚಿಸಿದ “ಏರ್ ತಾಂಕುವೇರ್’ ನಾಟಕ ಪ್ರದರ್ಶನಗೊಂಡಿತು.
ಮುಖ್ಯ ಅತಿಥಿ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌರವ ಅತಿಥಿಗಳಾಗಿ ಕುಶಲ್ ಭಂಡಾರಿ, ದಿವಾಕರ ಶೆಟ್ಟಿ ಇಂದ್ರಾಳಿ, ರಾಜೀವ ಭಂಡಾರಿ, ಅಜೆಕಾರು ಜಯ ಶೆಟ್ಟಿ, ವಸಂತ ಸುವರ್ಣ, ವಿಟ್ಠಲ್ ಅಮೀನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಜೆ. ಶೆಟ್ಟಿ, ಸಂಸ್ಥೆಯ ಪದಾಧಿಕಾರಿಗಳಾದ ಕೆ. ಕೆ. ಸಾಲ್ಯಾನ್, ವಿನೋದ್ ಕರ್ಕೇರ ಉಪಸ್ಥಿತರಿದ್ದರು.
ವಿನೋದ್ ಕರ್ಕೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ವಸಂತ ಸುವರ್ಣ ಅವರು ಸಭಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಏಕತೆ ಸಾರುತ್ತಿರುವ ಸಂಸ್ಥೆ :
ಮಹಿಳೆಯರೇ ತುಂಬಿರುವ ಈ ಸಭಾಗೃಹದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮದಂತೆ ಭಾಸವಾಗುತ್ತಿದೆ. ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರ ಉಪಸ್ಥಿತಿ ಪ್ರಶಂಸನೀಯ. ಯುವಕರು ಸಮಾಜ ಸೇವೆಯಲ್ಲಿ ತೊಡಗಬೇಕು. ಸಂಘ-ಸಂಸ್ಥೆಗಳು ನೀಡುವ ವೇದಿಕೆಯನ್ನು ಸದುಪಯೋಗಪಡಿಸಿದರೆ ನಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಸಿಕ್ಕಂತಾಗುತ್ತದೆ. ಜಾತಿ, ಮತ ಭೇದವಿಲ್ಲದೆ ವಿವಿಧತೆಯಲ್ಲಿ ಏಕತೆ ಸಾರುತ್ತಿರುವ ಏಕೈಕ ಸಂಸ್ಥೆ ಎನ್ನಲು ಅಭಿಮಾನವಾಗುತ್ತಿದೆ. ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಸೌಲಭ್ಯಗಳನ್ನು ಎಲ್ಲರು ಪಡೆದುಕೊಳ್ಳಬೇಕು. -ರತ್ನಾಕರ ಶೆಟ್ಟಿ ಮುಂಡ್ಕೂರು ಕಾರ್ಯಾಧ್ಯಕ್ಷರು, ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ
ಸಂಕಷ್ಟಗಳಿಗೆ ಸ್ಪಂದನೆ :
ನಾವು ಸಮಾಜದಲ್ಲಿ ಸೂಜಿಯಾಗಿ ಬದುಕಬೇಕೇ ಹೊರತು ಕತ್ತರಿಯಾಗಬಾರದು. ಕತ್ತರಿ ತುಂಡು ಮಾಡಿದರೆ, ಸೂಜಿ ಜೋಡಿಸುತ್ತದೆ. ಹಾಗೆಯೇ ಸಿರಿನಾಡ ವೆಲ್ಫೇರ್ ಅಸೋಸಿಯೇಶನ್ ಒಗ್ಗಟ್ಟಿನಿಂದ ಬದುಕು ಕಟ್ಟಿಸುತ್ತಿದೆ. ಜಾತಿ, ಮತ ಎಂಬ ಎಲ್ಲೆಯನ್ನು ಮೀರಿ ಸಂಘಟಿತರಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನಿಜವಾದ ಮಾನವೀಯತೆ. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಉಳಿಸಿ-ಬೆಳೆಸಿ ನಮ್ಮ ದೇಶ, ಧರ್ಮವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮಹಿಳಾ ವಿಭಾಗದ ಹುಮ್ಮಸ್ಸಿನ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಸಂಸ್ಥೆ ಇನ್ನಷ್ಟು ಸಮಾಜ ಸೇವೆಗಳ ಮೂಲಕ ಬೆಳೆಯಲಿ.-ಕುಶಲ್ ಭಂಡಾರಿ, ಮಾಜಿ ಅಧ್ಯಕ್ಷರು, ಥಾಣೆ ಬಂಟ್ಸ್ ಅಸೋಸಿಯೇಶನ್
ಸಂಘಟಿತರಾಗಿ ಮುನ್ನಡೆಸೋಣ : ಜನ್ಮಭೂಮಿ ತೊರೆದು ಕರ್ಮಭೂಮಿಗೆ ಆಗಮಿಸಿ ಉದರ ಪೋಷಣೆಯೊಂದಿಗೆ ಸಿಕ್ಕಿದ ವಿರಾಮ ಕಾಲದಲ್ಲಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸ್ಥಾಪನೆಗೊಂಡ ಸಿರಿನಾಡ ವೆಲ್ಫೇರ್ ಅಸೋಸಿಯೇಶನ್ ಇಂದು 20ನೇ ಸಂಭ್ರಮದಲ್ಲಿರುವುದು ಹೆಮ್ಮೆಯ ವಿಷಯ. ಕೊರೊನಾ ಸಂದರ್ಭ ಆರ್ಥಿಕವಾಗಿ ಹಿಂದುಳಿದ ಜನರಿಗೆ ಆಹಾರದ ಕಿಟ್ ವಿತರಿಸಿ ಜನಮೆಚ್ಚುಗೆ ಪಡೆದ ಈ ಸಂಸ್ಥೆಯ ಸೇವೆಗಳು ಮಾದರಿ. ನಾವು ಸಂಘ ಜೀವಿಯಾಗಿ ಬದುಕಬೇಕು. ನಾವು ಗಳಿಸಿದ ಸ್ವಲ್ಪ ಭಾಗವನ್ನು ಸಮಾಜಕ್ಕಾಗಿ ವಿನಿಯೋಗಿಸಿದರೆ ದೇವರ ಸೇವೆ ಮಾಡಿದಂತಾಗುತ್ತದೆ. ಜಾತಿ,ಮತ ಭೇದವನ್ನು ಮರೆತು ಸಂಘಟಿತರಾಗಿ ಸಂಸ್ಥೆಯನ್ನು ಮುನ್ನಡೆಸೋಣ.-ಇಂದ್ರಾಳಿ ದಿವಾಕರ ಶೆಟ್ಟಿ , ಸಲಹೆಗಾರರು, ಸಿರಿನಾಡ ವೆಲ್ಫೇಅಸೋಸಿಯೇಶನ್ ಡೊಂಬಿವಲಿ