Advertisement
ಜು.1 ರಂದು ಡೊಂಬಿವಲಿಯ ವೈಭವ ಮಂಗಳ ಕಾರ್ಯಾಲಯದಲ್ಲಿ ನಡೆದ ಸಿರಿನಾಡ ವೆಲ್ಫೆàರ್ ಅಸೋ ಸಿಯೇಶನ್ ಡೊಂಬಿವಲಿ ಇದರ ವಾರ್ಷಿಕ ಶೈಕ್ಷಣಿಕ ಸಹಾಯ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ ಧನ ಸಹಾಯದಂತೆ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಿಧವೆಯರಿಗೆ ವಿಧವಾ ವೇತನ ನೀಡಲು ಪ್ರಯತ್ನಿಸಲಾಗುವುದು ಎಂದರು.
Related Articles
Advertisement
ವೇದಿಕೆಯಲ್ಲಿ ಉಪಸ್ಥಿತರಿದ್ದ ವೈಭವ ಮಂಗಳ ಕಾರ್ಯಾಲಯದ ಮಾಲಕ ಕೈಲಾಸ್ ಠಾಕೂರ್ ಇವರು ಮಾತನಾಡಿ, ಸಂಸ್ಥೆಯ ಕಾರ್ಯ ವೈಖರಿಯನ್ನು ಕಂಡು ಪ್ರೇರಿತನಾಗಿ ಸಂಘವು ನಡೆಸುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಹಕರಿಸುತ್ತಿದ್ದೇನೆ ಎಂದು ನುಡಿದು, ಉತ್ತಮ ಅಂಕ ಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಶೋಭಾ ಟಿ. ಪೂಜಾರಿ, ದಿವ್ಯಾ ಶೆಟ್ಟಿ, ಶಕುಂತಲಾ ಸಾಲ್ಯಾನ್ ಪ್ರಾರ್ಥ ನೆಗೈದರು. ಸಂಘದ ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಸಂತ ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ಸಂಸ್ಥೆಯ ಪದಾಧಿಕಾರಿಗಳು ಮತ್ತು ಅತಿಥಿ-ಗಣ್ಯರು ಆರ್ಥಿಕವಾಗಿ ಹಿಂದು
ಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ವಿತರಿಸಿದರು. ಸಂಘದ ಸದಸ್ಯ ಬಾಂಧ ವರ ಮಕ್ಕಳನ್ನು ಪ್ರತಿಭಾಪುರಸ್ಕಾರ ಇತ್ತು ಅಭಿನಂದಿಸಲಾಯಿತು. ಕನ್ನಡ ಕಲಿಕಾ ತರಗತಿಯ ಅಂತಿಮ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಪಾರಿತೋಷಕ ನೀಡಿ ಗೌರವಿಸಲಾಯಿತು. ಕನ್ನಡ ಕಲಿಕಾ ಶಿಕ್ಷಕಿಯರನ್ನು ಗೌರವಿಸಲಾಯಿತು. ಡೊಂಬಿವಲಿ ಮಂಜುನಾಥ ವಿದ್ಯಾಲಯದ ಕನ್ನಡ ವಿಭಾಗದ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅನಾರೋಗ್ಯ ಪೀಡಿತ ಮಹಿಳೆಗೆ ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು. ಸಮಾಜ ಸೇವಕ ಜೈಸಿಂಗ್ ಪಾಟೀಲ್, ಉದ್ಯಮಿ ಸುರೇಶ್ ಶೆಟ್ಟಿ, ಸಲಹೆಗಾರರಾದ ರಾಜೀವ ಭಂಡಾರಿ, ಸಂಘದ ಕೋಶಾಧಿಕಾರಿ ಸದಾಶಿವ ಸಾಲ್ಯಾನ್, ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ, ಜತೆ ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್ ಕರ್ಕೇರ ಇವರು ಉಪಸ್ಥಿತರಿದ್ದರು. ಸುಮಾರು 450 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಳೆದ 17 ವರ್ಷಗಳಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಉತ್ತಮ ಸಂಸ್ಥೆ ಎಂಬ ಹೆಸರನ್ನು ಗಳಿಸಿರುವ ಈ ಸಂಸ್ಥೆಯ ಆಡಳಿತ ಸಮಿತಿಯ ಕಾರ್ಯವೈಖರಿ ಅಭಿನಂದನೀಯ. ಈ ಸಂಸ್ಥೆಯು ಪ್ರತಿ ವರ್ಷವೂ ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಮುಂದಿನ ವರ್ಷದಲ್ಲಿ ಆರ್ಥಿಕವಾಗಿ ಹಿಂದುಳಿದ ವಿಧವೆಯವರಿಗೆ ವಿಧವಾ ವೇತನವನ್ನು ನೀಡಲು ಮುಂದಾಗಿರುವುದು ಇತರರಿಗೆ ಮಾದರಿಯಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು. ಮಕ್ಕಳಿಗೆ ಸಮಾಜದ ಆಗುಹೋಗುಗಳ ಬಗ್ಗೆ ಅರಿವು ಮೂಡಿಸಿದಾಗ ಅವರಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಸಂಘದ ವತಿಯಿಂದ ನಡೆಯುವ ಕನ್ನಡ ಕಲಿಕಾ ವರ್ಗದ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು.
-ಇಂದ್ರಾಳಿ ದಿವಾಕರ ಶೆಟ್ಟಿ, ಸಲಹೆಗಾರರು
ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿ ಮಧ್ಯಮ ವರ್ಗದರಿಂದ ಕೂಡಿದ ತುಳು-ಕನ್ನಡಿಗರು ಡೊಂಬಿವಲಿ ಪರಿಸರದಲ್ಲಿ ಅಧಿಕ ಸಂಖ್ಯೆಯಲ್ಲಿದ್ದು, ಸಮಾಜಪರ ಕಾರ್ಯಕ್ರಮಗಳನ್ನು ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಆಯೋಜಿಸಿಕೊಂಡು ಅವರಿಗೆ ಸಹಕರಿಸುತ್ತಿದೆ. ಈ ಸಂಸ್ಥೆಯ ಪ್ರಗತಿಪಥದತ್ತ ಸಾಗಲು ಸಂಸ್ಥೆಯ ಆಡಳಿಯ ಸಮಿತಿಯ ಪರಿಶ್ರಮ ಮರೆಯುವಂತಿಲ್ಲ. ಈ ಸಂಸ್ಥೆಯಿಂದು ಸಹಾಯವನ್ನು ಪಡೆದ ವಿದ್ಯಾರ್ಥಿಗಳು ಋಣ ತೀರಿಸುವ ಕಾಯಕದಲ್ಲಿ ತೊಡಗಬೇಕು. ಸಂಸ್ಥೆಯಿಂದ ಇನ್ನಷ್ಟು ಸಮಾಜಪರ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಲಿ.
-ಸುಬ್ಬಯ್ಯ ಶೆಟ್ಟಿ, ಉಪ ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ