Advertisement
ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆಯನ್ನು ಯಾರು ಸಂಭ್ರಮಿಸುತ್ತಿದ್ದರೋ, ಕೊಲೆ ಬೆದರಿಕೆ ಯಾರು ಹಾಕುತ್ತಿದ್ದರೋ, ಗೌರಿ ಹತ್ಯೆಯ ಕುರಿತು ಸಾರ್ವಜನಿಕರಲ್ಲಿ ಸಂದೇಹ-ಗೊಂದಲ ಮೂಡಿಸುತ್ತಿರುವವರು, ದಿಕ್ಕು ತಪ್ಪಿಸುತ್ತಿರುವವರೇ ಗೌರಿಯನ್ನು ಕೊಂದಿದ್ದಾರೆ ಎಂದು ಆರೋಪಿಸಿದರು.
ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಆಧಾರ ರಹಿತವಾಗಿವೆ. ಹತ್ಯೆ ಬಗ್ಗೆ ತನಿಖೆ ನಡೆಸುವ ಅಧಿಕಾರಿಗಳು ಸಂಘ ಪರಿವಾರದ ಮುಖಂಡರ ವಿಚಾರಣೆ ನಡೆಸಿದರೆ ಆರೋಪಿಗಳ ಸುಳಿವು ಸಿಗುತ್ತದೆ. ತನಿಖೆಯ ಮೊದಲ ಆದ್ಯತೆ ನಕ್ಸಲ್ ಮಾರ್ಗ ಅಲ್ಲ. ಆರ್‌ಎಸ್‌ಎಸ್, ಸಂಘಪರಿವಾರದ ಕಚೇರಿಯಿಂದಲೇ ತನಿಖೆ ಆರಂಭಿಸಿದರೆ ದುಷ್ಕರ್ಮಿಗಳು ಪತ್ತೆಯಾಗುತ್ತಾರೆ. ಕೇಂದ್ರ ಸರ್ಕಾರ(ಸಚಿವ ರವಿಶಂಕರ್ ಪ್ರಸಾದ್)ದಿಂದಲೇ ನಕ್ಸಲ್ ಮೇಲಿನ ಆರೋಪ ಶುರುವಾಗಿದೆ. ಇದೇ ಮುಂದುವರಿದರೆ, ಅನಗತ್ಯ ಆರೋಪ ಮಾಡುತ್ತಿರುವ ಮಾಧ್ಯಮಗಳು, ಸಂಘಟನೆಗಳು, ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
Related Articles
Advertisement
ನಕ್ಸಲೀಯರ ಬಗ್ಗೆಯೂ ತನಿಖೆ ನಡೆಸಿತನಿಖಾಧಿಕಾರಿಗಳು ಯಾವ ಪಿಸ್ತೂಲ್‌ನಿಂದ ಗುಂಡು ಬಂದಿದೆ ಎಂದು ಪತ್ತೆ ಮಾಡುತ್ತಿದ್ದಾರೆ. ಆದರೆ, ಅದರ ಹಿಂದಿನ ಕೈ ಯಾವುದು. ಅವರ ಸಿದ್ಧಾಂತಗಳು ಏನೆಂದು ಪತ್ತೆ ಹಚ್ಚಬೇಕು. ಅವರ ಹಿಂದಿನ ಶಕ್ತಿಗಳು ಯಾವುದು. ಈ ಅಂಶವನ್ನು ಸರ್ಕಾರ ಬಹಿರಂಗ ಪಡಿಸಬೇಕು. ಆದರೆ, ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆಯಿಂದಾಗಿ ಆ ಕಾರ್ಯ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಕಳೆದ 12 ತಿಂಗಳಲ್ಲಿ ಪ್ರಕಟವಾಗಿರುವ ವರಿದಿಗಳನ್ನಾಧರಿಸಿ ತನಿಖೆ ಮುಂದುವರೆಸಬೇಕು. ತನಿಖಾಧಿಕಾರಿಗಳ ಮೇಲೆ ಯಾವುದೇ ರೀತಿ ಒತ್ತಡ ಹೇರಬಾರದು. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಬೇಕು. ಸೈದ್ಧಾಂತಿಕ ವಿಚಾರಗಳನ್ನು ಮುಂದಾಗಿಸಿ ತನಿಖೆ ನಡೆಸಿ, ಬಲವಾದ ಸಾûಾ$Âಧಾರವಿದ್ದರೆ ನಕ್ಸಲೀಯರ ಕುರಿತೂ ತನಿಖೆ ನಡೆಯಲಿ. ಆದರೆ, ಸಂಪೂರ್ಣವಾಗಿ ತನಿಖೆ ನಡೆಸದೆ ಅನಗತ್ಯ ಆರೋಪ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದರು. ವಿಕ್ರಂಗೌಡ ಅಮಾಯಕ
ಹತ್ಯೆ ಪ್ರಕರಣದಲ್ಲಿ ಆದಿವಾಸಿಗಳ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿರುವ ವಿಕ್ರಂ ಗೌಡನ ಹೆಸರು ಕೇಳಿ ಬಂದಿರುವುದು ಖಂಡನೀಯ. ಪ್ರಕರಣದಲ್ಲಿ ಅವರ ಕೈವಾಡ ಇಲ್ಲ. ನಕ್ಸಲರು ಇದುವರೆಗೂ ಯಾವುದೇ ಪತ್ರಕರ್ತರನ್ನು ಹತ್ಯೆ ಮಾಡಿರುವ ಉದಾಹರಣೆ ಇಲ್ಲ. ಕೆಲ ಸಂದರ್ಭಗಳಲ್ಲಿ ಕೆಲವರ ಮುಂಗೋಪದಿಂದ ಹತ್ಯೆ ನಡೆದಿರುತ್ತದೆ. ಅಂತಹ ಸಂದರ್ಭದಲ್ಲಿ ನಕ್ಸಲರು ಕ್ಷಮಾಪಣೆ ಕೇಳುತ್ತಾರೆ. ಆದರೆ, ಗೌರಿ ಲಂಕೇಶ್ ಹತ್ಯೆಯ ನಂತರ ಈ ರೀತಿ ಯಾವುದೇ ಘಟನೆಗಳು ನಡೆದಿಲ್ಲ ಎಂದು ಹೇಳಿದರು. ನಮಗೂ ಬೆದರಿಕೆಯಿದೆ
ನಮಗೂ ಬೆದರಿಕೆ ಕರೆಗಳು ಬರುತ್ತಿವೆ. ನಿಮಗೂ ನಿಮ್ಮ ನಾಯಕರಿಗೂ ಸಾವು ಗ್ಯಾರಂಟಿ ಎಂದು ಕೇರಳ ಸೇರಿದಂತೆ ಕೆಲವು ಕಡೆಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಆದರೆ, ನಾವು ಯಾವುದೇ ಬೆದರಿಕೆಗೂ ಬಗ್ಗುವುದಿಲ್ಲ ಎಂದು ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಹೇಳಿದರು.