Advertisement

ಸಿರಿಗೆರೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಲಾಕ್‌ಡೌನ್‌

10:00 AM May 22, 2021 | Team Udayavani |

ಸಿರಿಗೆರೆ: ಗ್ರಾಪಂಗೆ ಸೇರುವ ಜಮ್ಮೇನಹಳ್ಳಿ, ಸಿದ್ದಾಪುರ, ಹಳೇರಂಗಾಪುರ, ಸೀಗೇಹಳ್ಳಿ, ಹೊಸ ರಂಗಾಪುರ ಗ್ರಾಮಗಳಲ್ಲಿ ವಾರದ ಐದು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಮಾಡುವಂತಹ ಕಠಿಣ ಕ್ರಮವನ್ನು ಸಿರಿಗೆರೆ ಗ್ರಾಪಂ ಆಡಳಿತ ವರ್ಗಕೈಗೊಂಡಿದೆ. ಈ ಕುರಿತು ನಡೆದ ತುರ್ತು ಸಭೆಯಲ್ಲಿಸುತ್ತಲಿನ ಹಳ್ಳಿಗಳಲ್ಲಿ ಕೊರೊನಾ ಸೋಂಕುವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದ್ದು, ಗ್ರಾಮಸ್ಥರು ಲಾಕ್‌ಡೌನ್‌ ನಿಬಂಧನೆ ಪಾಲಿಸಬೇಕೆಂದು ಕೋರಲಾಗಿದೆ.

Advertisement

ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ಡಾ.ರೂಪಾ, ಗ್ರಾಪಂ ಅಧ್ಯಕ್ಷ ಕೆ.ಬಿ. ಮೋಹನ್‌, ಸದಸ್ಯರಾದ ಸಿದ್ದೇಶ್‌, ನಾಗರಾಜ್‌, ನಿರ್ಮಲ, ವೀರಣ್ಣ, ಕಂದಾಯ ಇಲಾಖೆಯ ರಮೇಶ್‌, ಪೊಲೀಸ್‌ ಇಲಾಖೆಯಮಲ್ಲಿಕಾರ್ಜುನ್‌, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದ ಸಭೆಯಲ್ಲಿ ಈ ತೀರ್ಮಾನ ಪ್ರಕಟಿಸಲಾಯಿತು.

ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ಸರ್ಕಾರಿ ಕಚೇರಿಗಳು, ಆಸ್ಪತ್ರೆ ಹಾಗೂ ಮೆಡಿಕಲ್‌ ಶಾಪ್‌ಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ. ಹೋಟೆಲ್‌ಗ‌ಳ ಪಾರ್ಸಲ್‌ ಸೇವೆ ಈ ಎರಡು ದಿನ ಇರುತ್ತದೆ. ಉಳಿದಂತೆ ಬುಧವಾರದಿಂದ ಭಾನುವಾರದ ತನಕ ಯಾವುದೇ ಅಂಗಡಿಗಳು ತೆರೆಯಲು ಅವಕಾಶವಿರುವುದಿಲ್ಲ ಎಂದು ಪಿಡಿಒ ಲೋಕೇಶ್‌ ತಿಳಿಸಿದರು.

ಹಳ್ಳಿಗಳಲ್ಲಿ ಕಾರ್ಯಪಡೆ ರಚನೆ: ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕೊರೊನಾ ನಿಬಂಧನೆಗಳನ್ನುಕಟ್ಟುನಿಟ್ಟಾಗಿ ಜಾರಿಗೆ ತರಲು ಹಾಗೂ ಜನರಿಗೆ ಸೂಕ್ತ ಮಾರ್ಗದರ್ಶನ ಮಾಡಲು ಅನುಕೂಲವಾಗುವಂತೆ ಗ್ರಾಮಮಟ್ಟದ ಕಾರ್ಯಪಡೆ ರಚಿಸಲಾಗಿದೆ.

ಸಿರಿಗೆರೆಯಲ್ಲಿ ಕೋವಿಡ್‌ ಆಸ್ಪತ್ರೆ: ಸಿರಿಗೆರೆ 10 ಬೆಡ್‌ಗಳ ಕೋವಿಡ್‌ ಆಸ್ಪತ್ರೆ ಆರಂಭಿಸುವ ಕೆಲಸ ನಡೆಯುತ್ತಿದ್ದು, ಅದು ಮಂಗಳವಾರದ ಹೊತ್ತಿಗೆ ಕೆಲಸ ಆರಂಭಿಸಲಿದೆ. ಆಸ್ಪತ್ರೆಯಲ್ಲಿ ಸೋಂಕಿತರ ಅನುಕೂಲಕ್ಕೆ ಆಕ್ಸಿಜನ್‌ ವ್ಯವಸ್ಥೆಯೂ ಇರುತ್ತದೆ. ರೋಗಿಗಳಿಗೆ ಅಗತ್ಯವಾದ ಬಿಸಿನೀರಿನ ಸೌಲಭ್ಯಕ್ಕೆ ಬಾಯಲರ್‌ ಒದಗಿಸಲು ಕೋರಲಾಗಿದೆ.

Advertisement

ಸಿರಿಗೆರೆ ಭಾಗದಲ್ಲಿ ಹಲವು ಸೋಂಕಿತರ ವರದಿಗಳು ಬರುತ್ತಿವೆ. ಅವರು ಜಾಗ್ರತೆ ವಹಿಸಿ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಆರೈಕೆ ಪಡೆದುಕೊಳ್ಳಬೇಕು. ಮನೆಯಲ್ಲಿಯೇ ಸೌಲಭ್ಯ ಇದ್ದಲ್ಲಿ ವೈದ್ಯರ ಮಾರ್ಗದರ್ಶನ ಪಡೆದುಕೊಂಡು ಐಸೋಲೇಟ್‌ ಆಗಬಹುದು. ಸೋಂಕಿತರು ಬಿಸಿನೀರು ಕುಡಿಯುವುದಲ್ಲದೆ ಶುದ್ಧ ಆಹಾರ ಸೇವಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕು ಎಂದು ಪಿಡಿಒ ಲೋಕೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next