Advertisement

Belthangady ಸಿರಿ ಉತ್ಪನ್ನ ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ

11:33 PM Oct 08, 2023 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ತಯಾರಾಗುವ ಉತ್ಪನ್ನಗಳ ಹಿಂದೆ ಅನೇಕರ ಶ್ರಮವಿದೆ. ಸಾಮಾಜಿಕವಾಗಿ ಹಲವು ಕುಟುಂಬಗಳು ತಮ್ಮ ಬದುಕು ಕಟ್ಟಿಕೊಳ್ಳಲು ರೂಪಿಸಿದ ಕನಸಿನ ರೆಕ್ಕೆಯಾಗಿರುವ ಈ ಉತ್ಪನ್ನಗಳನ್ನು ಸಮಾಜಕ್ಕೆ ಪರಿಚಯಿಸಲಾಗಿದ್ದು, ಎಲ್ಲರೂ ಖರೀದಿಸುವ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಿ ಎಂದು ಸಿರಿ ಸಂಸ್ಥೆ ಉತ್ಪನ್ನಗಳ ರಾಯಭಾರಿಯಾಗಿರುವ ನಟ ರಮೇಶ್‌ ಅರವಿಂದ್‌ ಹೇಳಿದರು.

Advertisement

ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಧರ್ಮಸ್ಥಳ ಸಿರಿ ಸಂಸ್ಥೆಯಿಂದ ಮಾರುಕಟ್ಟೆಗೆ ಪರಿಚಯಿಸಿರುವ ನೂತನ ವಿವಿಧ ಉತ್ಪನ್ನ ಹಾಗೂ ಟಿ.ವಿ. ಮಾಧ್ಯಮಗಳ ಜಾಹೀರಾತುಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಿರಿ ಉತ್ಪನ್ನಗಳ ತಯಾರಿಯ ಹಿಂದಿರುವ ಗ್ರಾಮಾಭಿವೃದ್ಧಿಯ ಕಾಳಜಿ ಹಾಗೂ ಸಮಾಜ ಸೇವೆಯ ಉದ್ದೇಶ ಇಷ್ಟವಾಗಿ ಸಂಸ್ಥೆಯ ರಾಯಭಾರಿಯಾಗಲು ಒಪ್ಪಿಕೊಂಡೆ. ಗ್ರಾಮೀಣ ಭಾಗದಲ್ಲಿ ಮಹಿಳಾ ಸಶಕ್ತೀಕರಣ ಹಾಗೂ ಹಲವು ಉದ್ಯೋಗ ಸೃಷ್ಟಿಗೆ ಸಿರಿ ಸಂಸ್ಥೆ ನೆರವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಲ್‌.ಎಚ್‌. ಮಂಜುನಾಥ್‌ ಮಾತನಾಡಿ, ಗ್ರಾಮೀಣ ಪ್ರದೇಶ ದಲ್ಲಿರುವ ಮಹಿಳೆಯರಿಗೆ ಸ್ವ-ಉದ್ಯೋಗ ಮತ್ತು ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಸಿರಿ ಸಂಸ್ಥೆ ಅವಕಾಶ ಮಾಡಿಕೊಡುತ್ತಿದೆ. ಪ್ರಸ್ತುತ ಸಂಸ್ಥೆಯ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರವ್ಯಾಪಿ ವಿಸ್ತರಿಸಿಕೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

2004ರಲ್ಲಿ ಸಂಸ್ಥೆ ಆರಂಭ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನೊಂದಿಗೆ 2004ರಲ್ಲಿ ಆರಂಭವಾದ ಸಿರಿ ಸಂಸ್ಥೆಯ ಉತ್ಪನ್ನಗಳು ಸಿರಿ ಬ್ರ್ಯಾಂಡ್‌ನ‌ಲ್ಲಿ ಮಾರಾಟವಾಗುತ್ತಿವೆ. ಪ್ರಸ್ತುತ ರಾಜ್ಯದ 200ಕ್ಕೂ ಅಧಿಕ ಹಿಂದುಳಿದ ಗ್ರಾಮಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು, 3 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸಿದೆ ಎಂದು ಡಾ| ಮಂಜುನಾಥ್‌ ತಿಳಿಸಿದರು.

Advertisement

ಎಸ್‌ಕೆಡಿಆರ್‌ಡಿಪಿ ಸಿಒಒ ಅನಿಲ್‌ ಕುಮಾರ್‌, ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಆಲೂರ್‌ ಮುಖ್ಯ ಅತಿಥಿಗಳಾಗಿದ್ದ‌ರು.ಸಿರಿ ಗ್ರಾಮೋದ್ಯೋಗ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ಜನಾರ್ದನ ಪ್ರಸ್ತಾವನೆಗೈದು, ಸ್ವಾಗತಿಸಿದರು. ನಿರೂಪಕಿ ಅಪರ್ಣಾ ಕಾರ್ಯಕ್ರಮ ನಿರ್ವಹಿಸಿದರು.

ನೂತನ ಉತ್ಪನ್ನಗಳು
ಮಿಲೆಟ್‌ ಬಿಸಿಬೇಳೆ ಬಾತ್‌, ಮಿಲೆಟ್‌ ನ್ಯೂಟ್ರಿ ಅಟಾ ಪ್ಯಾಕೆಟ್‌, ಮಿಲೆಟ್‌ ಕಷಾಯ, ಡಯಾಬೆಟಿಕ್‌ ಹೆಲ್ತ್‌ ಡ್ರಿಂಕ್‌, ಮಿಲೆಟ್‌ ಖಡಕ್‌ ರೋಟಿ, ಮಿಲೆಟ್‌ ಮುರುಕು, ಸಿರಿ ಅಡಿಕ್ಟೆಡ್‌ ಶರ್ಟ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರು ಸಿರಿ ಸಂಸ್ಥೆಯ ನೆರವಿನೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಸಂಸ್ಥೆಯ ವಿವಿಧ ಉತ್ಪನ್ನಗಳು ರಾಷ್ಟ್ರ ಮಟ್ಟದಲ್ಲಿ ದೊರಕುವಂತೆ ಮಾಡುವ ಗುರಿ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಲಿವೆ.
– ಕೆ.ಎನ್‌. ಜನಾರ್ದನ, ವ್ಯವಸ್ಥಾಪಕ ನಿರ್ದೇಶಕ, ಸಿರಿ ಗ್ರಾಮೋದ್ಯೋಗ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next