Advertisement

ನಟನಾ ಶ್ರೀಮಂತಿಕೆಗೆ ಸಾಕ್ಷಿಯಾದ ಸತ್ಯನಾಪುರದ ಸಿರಿ 

06:00 AM Dec 21, 2018 | Team Udayavani |

ಅಮೋಘ ಕಲಾವಿದರು ಹಿರಿಯಡಕ ಅವರು ಎಂಜಿಎಂ ಕಾಲೇಜಿನಲ್ಲಿ ಡಿ. 11ರಂದು ಪ್ರದರ್ಶಿಸಿದ ಎನ್‌.ಪಿ. ರಾವ್‌ ಅವರ ಕಾದಂಬರಿ ಆಧಾರಿತ ಸತ್ಯನಾಪುರದ ಸಿರಿ ಕಥೆಯ ಏಕವ್ಯಕ್ತಿ ಪ್ರದರ್ಶನ ಕೆಲವು ಕಾರಣಗಳಿಂದ ಮನಸ್ಪರ್ಶಿಯಾಯಿತು. ಪ್ರಬುದ್ಧ ಮತ್ತು ಪ್ರತಿ ಭಾನ್ವಿತ ನಟಿ ಪೂರ್ಣಿಮಾ ಸುರೇಶ್‌ ಸುಮಾರು ಒಂದೂವರೆ ತಾಸಿಗೂ ಹೆಚ್ಚು ಕಾಲ ಸಿರಿಯ ಕತೆಯಲ್ಲಿ ವಿವಿಧ ಪಾತ್ರಗಳಲ್ಲಿ ಮಿಂಚಿ ದರು. ಹಿನ್ನೆಲೆಯಲ್ಲಿ ಶಬರಿ ಮತ್ತು ನಿವೇದಿತಾ ಅವರ ಹಾಡುಗಾರಿಕೆ, ಪಾಡªನ ಮುಂತಾದವು ತುಳು ಸಾಂಸ್ಕೃತಿಕ ಲೋಕ ದತ್ತ ಕೊಂಡೊಯ್ದಿತು. 

Advertisement

ಕೃಷ್ಣ ಮೂರ್ತಿ ಕವತ್ತಾರು ನಿರ್ದೇಶನದಲ್ಲಿ ಪೂರ್ಣಿಮಾ ಸುರೇಶ್‌ ಬಿಳಿ ವಸ್ತ್ರಧಾರಿಯಾಗಿ ಸಿರಿಯ ವೇಷದಲ್ಲಿ ಕೆಲವು ಪಾತ್ರಗಳನ್ನು ನಿಭಾಯಿಸಿ ಶಹಬ್ಟಾಸ್‌ ಎನಿಸಿಕೊಂಡರು. ಅವರ ಚುರುಕಿನ ನಡೆ, ಪ್ರಬುದ್ಧ ನಟನೆ, ಒಂದು ಪಾತ್ರದಿಂದ ಮತ್ತೂಂದು ಪಾತ್ರಕ್ಕೆ ಬದ ಲಾಗುವ ಅಭಿನಯ ಪ್ರೌಢಿಮೆ ಮುಂತಾದವುಗಳೆಲ್ಲ ನಿಬ್ಬೆರಗಾಗಿಸಿತು. ಅದಕ್ಕೆ ಪೂರಕವಾದ ರಂಗ ಸಜ್ಜಿಕೆ, ಬೆಳಕು ಇಡೀ ಕಾರ್ಯ ಕ್ರಮಕ್ಕೆ ಹೊಸ ಮೆರುಗು ನೀಡಿತು. 

ರಂಗವನ್ನು ಸರಳವಾಗಿ ಸಿದ್ಧಪಡಿಸಲಾಗಿತ್ತಾದರೂ ಅದು ಕಥೆಗೆ ಪೂರಕವಾಗಿಯೇ ಇತ್ತು. ಅಜ್ಜನ ದೇಹದ ಅಂತ್ಯ ಸಂಸ್ಕಾರ ಮಾಡುವ ಸಂದರ್ಭದ ಬೆಳಕಿನ ದೃಶ್ಯ ವಂತೂ ಬೆರಗುಗೊಳಿಸಿತು. ಸಿರಿಯ ಕ್ರೋಧ, ಗಂಡನ ಜತೆಗಿನ ಪ್ರೀತಿ, ಆಕ್ರೋಶ, ಅಸ ಹಾಯ ಕತೆ ಎಲ್ಲವೂ ಪೂರ್ಣಿಮಾ ಅವರಿಂದ ಮನೋಜ್ಞವಾಗಿ ಹೊರಹೊಮ್ಮಿತು. ಪುರುಷ ಪಾತ್ರದ ಸಂದರ್ಭ ಒಂದಿಷ್ಟು ಗಾಂಭೀ ರ್ಯದ ಕೊರತೆ ಕಂಡು ಬಂದಿದೆಯಾದರೂ ಅದೊಂದು ಲೋಪವಾಗಿ ಪರಿವರ್ತಿತವಾಗಿಲ್ಲ. ಹಿನ್ನೆಲೆಯಲ್ಲಿ ಗಾಯನ, ಇತರ ಸಂಗೀ ತ ವಾದ್ಯಗಳು ಪೂರಕವಾಗಿತ್ತು. 

ನಟಿಯ ಕೈಯಲ್ಲಿದ್ದ ಒಂದು ಉದ್ದದ ಶಾಲು ಬೇರೆ ಬೇರೆ ಪಾತ್ರಗಳಲ್ಲಿ ಬೇರೆ ಬೇರೆ ರೂಪ ಪಡೆದು ಕೊಂಡದ್ದು ಖುಷಿ ಕೊಟ್ಟಿತು. ಮಗುವಾಗಿ, ಶಲ್ಯವಾಗಿ, ಗರ್ಭಿಣಿ ಪಾತ್ರಕ್ಕೆ ಬೇಕಾಗಿ….ಹೀಗೆ . ಆರಂಭದಲ್ಲಿ ಒಂದೈದು ನಿಮಿಷ ತೆಳು ಪರದೆಯ ಹಿಂದೆ ಕೇವಲ ನೆರ ಳಿನಲ್ಲಿಯೇ ನಟನೆಯನ್ನು ತೋರಿಸಿರುವುದು ಅದ್ಭುತವಾಗಿತ್ತು. ಈ ಕಲ್ಪನೆಗೆ ಶಹಬ್ಟಾಸ್‌ ಎನ್ನಲೇಬೇಕಾಗಿದೆ. ಸಿರಿ ಪ್ರದರ್ಶನದ ಪೂರ್ವದಲ್ಲಿ ನಡೆದಿದ್ದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಮತ್ತು ಹಿರಿಯ ಸಾಹಿತಿ ಉದ್ಯಾವರ ಮಾಧವಾಚಾರ್ಯ ಅವರು ಪೂರ್ಣಿಮಾ ಬಗ್ಗೆ ತುಂಬು ವಿಶ್ವಾಸದ ನುಡಿಗಳನ್ನಾ ಡಿದ್ದು ಅರ್ಹವಾಗಿಯೇ ಇತ್ತು ಎಂಬುದು ಸಿರಿಯ ಪ್ರದರ್ಶನ ವನ್ನು ಕಂಡಾಗ ಸ್ಪಷ್ಟವಾಯಿತು.ಇಲ್ಲಿ ಅಭಿನೇತ್ರಿಯೇ ಕಥೆಯನ್ನು ನಿರೂ ಪಿ ಸುತ್ತಾ ನಟಿ ಸಿದ್ದು, ಇದರಲ್ಲಿ ಸ್ವಲ್ಪ ಬದಲಾವಣೆ ಅಗತ್ಯ ಎಂದು ಅನಿಸಿದೆ. ಕಥೆಯನ್ನು ಹಿನ್ನೆಲೆಯಿಂದ ಹೇಳಿ ಅಭಿನೇತ್ರಿಯನ್ನು ಕೇವಲ ನಟನೆಗೆ ಮಾತ್ರ ಬಳಸಿಕೊಂಡಿದ್ದರೆ ಅದರಿಂದ ಪ್ರೇಕ್ಷಕರಿಗೆ ಕಲಾಸ್ವಾದಕ್ಕೆ ಹೆಚ್ಚು ಉತ್ತಮ ಅವಕಾಶ ಸಿಗುತ್ತಿತ್ತು ಎಂದು ಅನಿಸಿದೆ. ನಟಿ ಸುತ್ತಾ ಕತೆಯನ್ನು ವಿವರಿಸಿದ ಕಾರಣ ಎಲ್ಲೋ ಸಣ್ಣದೊಂದು ರಸ ಭಂಗದ ಅನುಭವವಾಯಿತು. ಸಂಭಾಷಣೆ ಯನ್ನು ಇನ್ನಷ್ಟು ಉತ್ತಮವಾಗಿ ಮಾಡಬಹುದಿತ್ತು. ಅದರಿಂದ ಕೆಲವು ಬಾಲಿಶತನ ಗೋಚರಿಸಿದೆ. ಶಬ್ದ ಬಳಕೆ ಬಗ್ಗೆ ಸಂಭಾಷಣೆ ಬರೆ ದವರು ವಿಶೇಷ ಗಮನ ಹರಿಸಿದಂತೆ ಕಂಡು ಬಂದಿಲ್ಲ. ನಟನೆಗೆ ಪೂರಕವಾಗಿ ಸಂಭಾಷಣೆ ಇರಲಿಲ್ಲ. ಜತೆಗೆ ಪಾಡನದ ಹಿನ್ನೆಲೆ ಇದ್ದ ಕಾರಣವೋ, ಸಿರಿ ಎಂದರೆ ತುಳು ಎಂಬ ಕಾರಣಕ್ಕೋ ಏನೋ – ಸಂಭಾಷಣೆ ತುಳುವಿನಲ್ಲೇ ಇದ್ದರೆ ಚೆನ್ನಾಗಿತ್ತು ಎಂದೆನಿಸಿತು. ಕಥೆ ಯಲ್ಲಿ ಬರುವ ಕೆಲವು ಶಬ್ದಗಳು ತುಳುವಿನ  ಸಂಭಾಷಣೆಗೆ ಹೆಚ್ಚು ಸೂಕ್ತವಾಗಿತ್ತು ಎಂಬುದು ಕೂಡ ಈ ಅನಿಸಿಕೆಗೆ ಪೂರಕವಾಗಿದೆ. 

ಅಮೋಘದ ಪೂರ್ಣಿಮಾ ಸುರೇಶ್‌ ಪ್ರಸ್ತುತಿ
ರಂಗವನ್ನು ಸರಳವಾಗಿ ಸಿದ್ಧಪಡಿಸಲಾಗಿತ್ತಾದರೂ ಅದು ಕಥೆಗೆ ಪೂರಕವಾಗಿಯೇ ಇತ್ತು. ಅಜ್ಜನ ದೇಹದ ಅಂತ್ಯ ಸಂಸ್ಕಾರ ಮಾಡುವ ಸಂದರ್ಭದ ಬೆಳಕಿನ ದೃಶ್ಯ ವಂತೂ ಬೆರಗುಗೊಳಿಸಿತು. ಸಿರಿಯ ಕ್ರೋಧ, ಗಂಡನ ಜತೆಗಿನ ಪ್ರೀತಿ, ಆಕ್ರೋಶ, ಅಸ ಹಾಯ ಕತೆ ಎಲ್ಲವೂ  ಮನೋಜ್ಞವಾಗಿ  ಹೊರಹೊಮ್ಮಿತು. 

Advertisement

– ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next