ಸೌರಭ್ ಕುಲಕರ್ಣಿ ನಿರ್ದೇಶನದ ಎಸ್.ಎಲ್.ವಿ, ಸಿರಿ ಲಂಬೋದರ ವಿವಾಹ ಚಿತ್ರ 25 ದಿನಗಳನ್ನು ಪೂರೈಸಿದ್ದು ಈ ಸಂದರ್ಭದಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಬಂದು ಸಂತಸವನ್ನು ಹಂಚಿಕೊಂಡಿತು.
ನಾಯಕ ಅಂಜನ್ ಭಾರದ್ವಾಜ್ ಮಾತನಾಡಿ, “25 ನೇ ದಿನ ತಲುಪಿದ್ದು ಸಂತೋಷದ ಸಂಗತಿ, ವಾರಕ್ಕೆ 12-13 ಚಿತ್ರಗಳು ತೆರೆಗೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಉಳಿಯುವಿಕೆ ಅನ್ನುವುದು ಮುಖ್ಯವಾಗುತ್ತದೆ. ಈ ಸಕಾರಾತ್ಮಕ ಬೆಳವಣಿಗೆಗಳು ನನಗೆ ಎರಡು ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮಾಡುವ ಅವಕಾಶ ಮಾಡಿಕೊಟ್ಟಿತ್ತು’ ಎಂದರು.
ನಾಯಕಿ ದಿಶಾ ರಮೇಶ್ ಮಾತನಾಡಿ, “ಸಾತ್ವಿಕ ಸಾರ್ಥಕತೆ ನಮ್ಮದು, ಹೊಸ ಹೆಜ್ಜೆಗೆ ಉತ್ತಮ ಪ್ರೋತ್ಸಾಹ ದೊರೆತಿದೆ. ನಮ್ಮ ಚಿತ್ರದ ಕ್ಲೈಮಾಕ್ಸ್ ಬಗ್ಗೆ ಜನ ಸಾಕಷ್ಟು ಉತ್ತಮ ಮಾತುಗಳನ್ನಾಡಿದ್ದಾರೆ. ಕ್ಲೈಮ್ಯಾಕ್ಸ್ ಯಾರೂ ಊಹಿಸಿರದ ರೀತಿ ಇತ್ತು ಎನ್ನುವ ಮಾತುಗಳು ಕೇಳಿ ಸಂತಸವಾಯಿತು’ ಎಂದರು.
ನಿರ್ದೇಶಕ ಸೌರಭ್ ಕುಲಕರ್ಣಿ ಮಾತನಾಡಿ, “ಸಿನಿಮಾ ನೋಡಿದವರು ಒಂದು ಸಂಪೂರ್ಣ ಕುಟುಂಬ ಕೂತು ನೋಡುವ ಚಿತ್ರ ಎಂದು ಎಲ್ಲರ ಬಾಯಲ್ಲಿ ಕೇಳಿದ್ದು ಸಂತೋಷವಾಯಿತು. ಇಂದಿನ ದಿನದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದು ಶೋಗೆ ಜನ ಬರದಿದ್ದರೂ ಅದನ್ನು ಮುಂದುವರೆಸುವುದಿಲ್ಲ. ಇಂತಹ ಕಾರ್ಪೋರೇಟ್ ಯುಗದಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ 25 ದಿನ ಪೂರೈಸಿದ್ದು ನಿಜಕ್ಕೂ ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಮತ್ತೆ ಬರುವ ಆಸೆ ಇದೆ’ ಎಂದರು.
Related Articles
ಚಿತ್ರದ ಕಲಾವಿದರು, ತಂತ್ರಜ್ಞರು ಚಿತ್ರದ ಗೆಲುವಿನ ಸಂತಸ ಹಂಚಿಕೊಂಡರು.