Advertisement

ಮರೆಯಾದ ಆಹಾರ ಪದ್ಧತಿಗೆ ಮರುಜೀವ: ಶ್ರದ್ಧಾ ಅಮಿತ್‌

11:41 AM May 27, 2019 | keerthan |

ಬೆಳ್ತಂಗಡಿ: ಪಾಶ್ಚಾತ್ಯ ಆಹಾರಗಳಿಗೆ ಮಾರುಹೊಗಿ ಭಾರತೀಯ ಆಹಾರ ಸಂಸ್ಕೃತಿಯನ್ನು ಜನ ತಿರಸ್ಕಾರ ಭಾವದಿಂದ ಕಾಣುತ್ತಿರುವುದು ವಿಷಾದ‌ ನೀಯ. ಈ ನಿಟ್ಟಿನಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಮರೆಯಾದ ನಮ್ಮ ಪಾರಂಪರಿಕ ಆಹಾರ ಪದ್ಧತಿಗೆ ಮರು ಜೀವ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಟ್ರಸ್ಟಿ ಶ್ರದ್ಧಾ ಅಮಿತ್‌ ಹೇಳಿದರು.

Advertisement

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಬೆಳ್ತಂಗಡಿ ವತಿಯಿಂದ ಲಾೖಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಆವರಣದಲ್ಲಿ ರವಿವಾರ ಸಿರಿಧಾನ್ಯ ಕೆಫೆ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಆಹಾರ ಕ್ರಮ ಅನುಸರಿಸಲು ಈಗಿನ ತಾಯಂದಿರು ಪೌಷ್ಟಿಕಾಂಶದ ಪಟ್ಟಿಯನ್ನೇ ಸಿದ್ಧಪಡಿ ಸಿರುತ್ತಾರೆ. ಆದರೂ ಸಣ್ಣ ವಯಸ್ಸಲ್ಲೇ ಆರೋಗ್ಯ ಹದ ಗೆಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಮೂಲ ಕಾರಣ ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯ ಬಗೆಗಿನ ನಿರ್ಲಕ್ಷ. ಭಾರತೀಯರ ಮೂಲ ಆಹಾರ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕೆಲಸ ನಮ್ಮೆಲ್ಲರಿಂದಾಗಬೇಕು. ಹಬ್ಬ ಹರಿದಿನಗಳಲ್ಲಿ ಬಳಸುವ ಆಹಾರ ಅನುಸರಣೆಯೊಂದಿಗೆ ಮರುಬಳಕೆಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋ ದ್ಯೋಗ ಸಂಸ್ಥೆ ಆಡಳಿತ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಮಾತನಾಡಿ, ಜಿಲ್ಲೆಯಲ್ಲಿ ಸಿರಿಧಾನ್ಯಗಳ ಪರಿಚಯವಿರುವುದರಿಂದ ಸಿರಿ ಧಾನ್ಯ ಕೆಫೆ ಪ್ರಾರಂಭಿಸಲಾಗಿದೆ. ಅತ್ಯಂತ ಪೌಷ್ಟಿಕತೆ ಕೂಡಿ ರುವುದರಿಂದ ಆರೋಗ್ಯ ವೃದ್ಧಿಗೆ ಸಹಕಾರಿ. ಈಗಾಗಲೇ ಧರ್ಮಸ್ಥಳ ಸಂಸ್ಥೆ 2 ಕೋಟಿ ರೂ.ಗೂ ಹೆಚ್ಚು ಸಿರಿಧಾನ್ಯ ಸಂಸ್ಕರಣೆ, ಲ್ಯಾಬೋರೆಟರಿ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದೆೆ. ಸಿರಿಧಾನ್ಯ ಬಳಕೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಿರಿಧಾನ್ಯ ಆಹಾರ ತಜ್ಞೆ ಡಾ| ಶಕುಂತಲಾ ಸವದತ್ತಿ/ಮಾಸೂರು ಹಾಗೂ ಸಾವಯವ ಕೃಷಿಕ ಭದ್ರಾವತಿಯ ಈಶ್ವರನ್‌ ಪಿ. ತೀರ್ಥ ಅವರು ಸಿರಿ ಧಾನ್ಯ ಬಳಕೆಯ ಲಾಭ ಹಾಗೂ ಪ್ರಯೋಜನ ಕುರಿತು ಮಾಹಿತಿ ನೀಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌, ಕಾರ್ಯದರ್ಶಿ ಬಿ. ಯಶೋವರ್ಮ, ಸೋನಿಯಾ ವರ್ಮ, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕ ಬೂದಪ್ಪ ಗೌಡ, ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ಮಮತಾ ರಾವ್‌, ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ವಸಂತ ಸಾಲ್ಯಾನ್‌, ಹಿರಿಯ ಮಾರುಕಟ್ಟೆ ಪ್ರಬಂಧಕ ಸುಧಾಕರ್‌, ಯೋಜನಾಧಿಕಾರಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು. ಸಿರಿ ಸಂಸ್ಥೆ ನಿರ್ದೇಶಕಿ ಮನೋರಮಾ ಭಟ್‌ ಸ್ವಾಗತಿಸಿದರು. ಸಿರಿ ಸಂಸ್ಥೆ ಯೋಜನಾಧಿಕಾರಿ ರೋಹಿತಾಕ್ಷ ವಂದಿಸಿದರು. ರಾಮ್‌ ಕುಮಾರ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next