ಸಿರವಾರ: ಸ್ಥಳೀಯ ಪಟ್ಟಣ ಪಂಚಾಯಿತಿ ಯಲ್ಲಿ ಕಳೆದ 10 ತಿಂಗಳಿನಿಂದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯಿಲ್ಲದೆ ಪಂಚಾಯಿತಿ ಅನಾಥವಾಗಿದ್ದು ಅಭಿವೃದ್ಧಿ ಕುಂಠಿತವಾಗುತ್ತಿದೆ.
Advertisement
ಸಿರವಾರ ಗ್ರಾಮ ಪಂಚಾಯತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ 2016 ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆದು, ಮೇ ತಿಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಆಡಳಿತ ಮಂಡಳಿ ರಚನೆಯಾಗಿತ್ತು, ನಂತರ ಸರ್ಕಾರದ ನಿಯಮದಂತೆ 30 ತಿಂಗಳ ಅವಧಿ ಮುಗಿದಿದೆ. ಎರಡನೇ ಅವಧಿಗೆ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಪಟ್ಟಣದ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಅಭಿವೃದ್ಧಿ ಮರೀಚಿಕೆಯಾಗಿದೆ.
Related Articles
Advertisement
ಕಳೆದ ವರ್ಷ ಎಲ್ಲ ವಾರ್ಡ್‌ಗಳಲ್ಲಿ ವಿದ್ಯುತ್ ಬಲ್ಪ್ ಹಾಕಲು ಅನುದಾನ ಇಡಲಾಗಿತ್ತು. ಆದರೆ ಇಲ್ಲಿಯವರೆಗೆ ಅವುಗಳನ್ನು ಹಾಕಿಲ್ಲ. ಹಬ್ಬ-ಹರಿದಿನಗಳಲ್ಲಿ ಬೆಳಕಿಲ್ಲದೆ ಸಾರ್ವಜನಿಕರು ಕತ್ತಲ್ಲಲ್ಲಿ ಓಡಾಡುವಂತಾಗಿದೆ. ಈ ಕುರಿತಂತೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.•ದೇವರಾಜ ಸುಂಕೇಶ್ವರಹಾಳ,
ಪಪಂ ಸದಸ್ಯ ವಿದ್ಯುತ್ ಬಲ್ಪ್ಗಳಿಗಾಗಿ ಹೊಸ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗಿದೆ. ಆದಷ್ಟು ಬೇಗ ಎಲ್ಲಾ ವಾರ್ಡ್‌ಗಳಲ್ಲಿ ಬೀದಿ ದೀಪ ಹಾಕಲಾಗುವುದು.
•ಸರೋಜಾ ಪಾಟೀಲ,
ಮುಖ್ಯಾಧಿಕಾರಿ, ಪಪಂ ಸಿರವಾರ