Advertisement

ಬಸ್‌ ಸೌಕರ್ಯ ಇಲ್ಲದೇ ಪರದಾಟ

05:36 PM Jul 08, 2019 | Naveen |

ಸಿರವಾರ: ಸಮೀಪದ ಕಡದಿನ್ನಿ ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ, ಬಸ್‌ ಸೌಕರ್ಯ, ಶುದ್ಧ ನೀರು, ಶೌಚಾಲಯ, ಸೇರಿ ಮೂಲ ಸೌಕರ್ಯ ಕೊರತೆ ಇದೆ.

Advertisement

ಚಾಗಬಾವಿ ಗ್ರಾಪಂ ವ್ಯಾಪ್ತಿಯ ಈ ಗ್ರಾಮದಲ್ಲಿ 1500 ಜನಸಂಖ್ಯೆ ಇದ್ದು, ಐವರು ಗ್ರಾಪಂ ಸದಸ್ಯರಿದ್ದಾರೆ.

ಬಸ್‌ ವ್ಯವಸ್ಥೆ: 1500 ಜನಸಂಖ್ಯೆ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಗ್ರಾಮಕ್ಕೆ ಬಸ್‌ ಸೌಕರ್ಯವಿಲ್ಲ. ಕಳೆದ 6 ವರ್ಷಗಳ ಹಿಂದೆ ಗ್ರಾಮಕ್ಕೆ ಬಸ್‌ ಬಿಡಲಾಗಿತ್ತು. ರಸ್ತೆ ಸರಿ ಇಲ್ಲದ್ದರಿಂದ ಬಸ್‌ ಬಂದ್‌ ಮಾಡಲಾಗಿದೆ. ಈಗ ರಸ್ತೆ ಸರಿ ಇದ್ದರೂ ಬಸ್‌ ವ್ಯವಸ್ಥೆ ಇಲ್ಲ. ಹೀಗಾಗಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿರವಾರ ಇಲ್ಲವೇ ಸಮೀಪದ ಪಟ್ಟಣ ಪ್ರದೇಶಗಳಿಗೆ ಶಾಲೆ-ಕಾಲೇಜಿಗೆ ತೆರಳಲು ಖಾಸಗಿ ವಾಹನ ಅವಲಂಬಿಸುವಂತಾಗಿದೆ.

ಚರಂಡಿ ಸಮಸ್ಯೆ: ಗ್ರಾಮದಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೆ ಮÙ ನೀರು, ಮನೆ ಬಳಕೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ರಸ್ತೆಗಳು ಕೆಸರುಗದ್ದೆಯಂತಾಗಿವೆ. ಸೊಳ್ಳೆಗಳ ಹಾವಳಿ ಹೆಚ್ಚಿ ಸಾಂಕ್ರಾಮಿಕ ರೋಗಗಳ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.

ಶೌಚಾಲಯ ಸಮಸ್ಯೆ: ಗ್ರಾಮದಲ್ಲಿ ಮಹಿಳೆಯರಿಗೆ, ಪುರುಷರಿಗೆ ಸಾರ್ವಜನಿಕ ಶೌಚಾಲಯವಿಲ್ಲದ್ದರಿಂದ ಹೊಲ, ಬಯಲು ಪ್ರದೇಶದಲ್ಲಿ ಬಹಿರ್ದೆಸಗೆಗೆ ಹೋಗಬೇಕಿದೆ. ಕೆಲ ಮನೆಗಳವರು ಮಾತ್ರ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.

Advertisement

ಜೋತು ಬಿದ್ದ ತಂತಿಗಳು: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಮೋನಪ್ಪ ದೇವಸ್ಥಾನದವರೆಗೆ ವಿದ್ಯುತ್‌ ತಂತಿಗಳು ಮನೆಗಳಿಗೆ ಹೊಂದಿಕೊಂಡು ಮಾಳಿಗೆಗಳ ಮೇಲೆಯೇ ಜೋತುಬಿದ್ದಿವೆ. ಮನೆಗಳ ಮೇಲೆ ಹತ್ತಿದಾಗ ತಾಗಿದರೆ ಜೀವಕ್ಕೆ ಅಪಾಯವಾಗುವ ಸಂಭವವಿದೆ. ಹಲವು ಬಾರಿ ಜೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೂ ಇವುಗಳನ್ನು ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮದಲ್ಲಿನ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next