Advertisement

ಸಿರವಾರ: ವಿಜೃಂಭಣೆಯ ಹಾಲುಗಂಬ ಉತ್ಸವ

04:03 PM Dec 29, 2019 | Naveen |

ಸಿರವಾರ: ಪಟ್ಟಣದಲ್ಲಿ ಎಳ್ಳ ಅಮಾವಾಸ್ಯೆಯ ಕರಿ ದಿನದಂದು ಪಟ್ಟಣದ ಆಂಜನೇಯ ದೇವಸ್ಥಾನದ ಹಾಲುಗಂಬ ಉತ್ಸವ ವಿಜೃಂಭಣೆಯಿಂದ ನಡೆಯಿತು.

Advertisement

ಹಾಲುಗಂಬಕ್ಕೆ ಲೋಳೆರಸ, ಜಾಜಿ ಲೇಪನ ಮಾಡಲಾಗಿರುತ್ತದೆ. ನಾಯಕ ಸಮಾಜಕ್ಕೆ ಸೇರಿದವರು ಹಾಲುಗಂಬ ಏರುವ ಪದ್ದತಿಯಿದೆ. ನಾಯಕ ಸಮಾಜದವರು ಕಂಬವನ್ನು ಏರುವಾಗ ಅವರು ಜಾರುವಂತಾಗಲು ಗಂಗಾಮತಸ್ಥ ಸಮಾಜದವರು ಕೆಳಗಡೆಯಿಂದ ನೀರು ಎರಚುತ್ತಿದ್ದರೆ, ಬಡಿಗೇರ ಸಮಾಜದವರು ಮೇಲಿನಿಂದ ಹಾಲು, ಮೊಸರನ್ನು ಕಂಬಕ್ಕೆ ಎರೆಯುತ್ತಾರೆ. ಕಡೆಗೆ ಕಂಬ ಹತ್ತಿದವರಿಗೆ ದೇವಸ್ಥಾನದಿಂದ ಬಹುಮಾನ ನೀಡಿ ಆಶೀರ್ವದಿಸಲಾಗುತ್ತದೆ.

ಕಳೆದ 14 ವರ್ಷಗಳಿಂದ ಸತತವಾಗಿ ಹುಲಿಗೆಪ್ಪ ಪೂಜಾರಿ ಎಂಬುವವರು ಪ್ರಥಮ ಸ್ಥಾನ ಪಡೆಯುತ್ತಿರುವುದು ವಿಶೇಷ. ಇವರಿಗೆ 11 ತೊಲೆ ಬೆಳ್ಳಿ, ದ್ವಿತೀಯ ಸ್ಥಾನ ಪಡೆದ ಉಲ್ಲಾಸ ಎಂಬುವವರಿಗೆ 5 ತೊಲೆ ಬೆಳ್ಳಿ ನೀಡಿ ಗೌರವಿಸಲಾಯಿತು. ಹಾಲುಗಂಬ ಉತ್ಸವ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದರು. ದೇವಸ್ಥಾನ ಆವರಣ ಸುತ್ತಲಿನ ಕಟ್ಟಡಗಳ ಮೇಲೆ ನಿಂತು ಹಾಲುಗಂಬ ಉತ್ಸವ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next