Advertisement

2025ಕ್ಕೆ ಭಾರತ ಸಂಸ್ಕೃತಿ ಉತ್ಸವ

04:35 PM Jun 26, 2019 | Naveen |

ಸಿರವಾರ: 2025ರಲ್ಲಿ ದೇಶದ 1000ಕ್ಕೂ ಹೆಚ್ಚು ಪ್ರಸಿದ್ಧ ವ್ಯಕ್ತಿಗಳ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಭಾರತ ಸಂಸ್ಕೃತಿ ಉತ್ಸವ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2025ರಲ್ಲಿ ಸೇಡಂನಲ್ಲಿ ನಡೆಯುವ ಭಾರತಿ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕೊತ್ತಲ ಶಿಕ್ಷಣ ಸಂಸ್ಥೆ ಆರಂಭವಾಗಿ 2025ಕ್ಕೆ 50 ವರ್ಷ ಕಳೆಯುತ್ತವೆ. ಅದರ ಸವಿನೆನಪಿಗಾಗಿ 9 ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಂಸ್ಥೆಯು ಸಾಮಾಜಿಕ ಬದಲಾವಣೆ ಹಾಗೂ ಹೈದ್ರಾಬಾದ್‌ ಕರ್ನಾಟಕದಲ್ಲಿ ಅಭಿವೃದ್ಧಿ ಬಗ್ಗೆ ದೇಶಕ್ಕೆ ತೋರಿಸುವ ಕಾರ್ಯಕ್ರಮವಾಗಿದೆ. ದೇಶದ ಪ್ರತಿಯೊಂದು ಸಮಸ್ಯೆಯನ್ನು ಸರ್ಕಾರದ ಮೇಲೆ ಹಾಕುವುದರಿಂದ ಏನೂ ಪ್ರಯೋಜನವಿಲ್ಲ, ಮನಸ್ಸು ಮಾಡಿದರೆ ಏನಾದರೂ ಸಾಧನೆ ಮಾಡಬಹುದು ಎಂಬುದನ್ನು ತಿಳಿಸುವುದಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಮ್ಮ ಹೈದರಾಬಾದ್‌-ಕರ್ನಾಟಕ ಪ್ರದೇಶವು ಕಲ್ಯಾಣ ಕರ್ನಾಟಕವಾಗಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿದೆ. ದೇಶದಲ್ಲಿ ಪ್ರಥಮ ಬಾರಿಗೆ 12 ಸಾವಿರ ಶೌಚಾಲಯಗಳನ್ನು ನಿರ್ಮಿಸಿ ಕ್ರಾಂತಿ ಮಾಡಲಾಗಿದೆ. ಹೈಕ ಭಾಗ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ತೆಗೆದು ಹಾಕುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಮನುಷ್ಯ ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಿಕೊಂಡು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ತಿಳಿಸುವುದಕ್ಕೆ ದೇಶದ 1000ಕ್ಕೂ ಹೆಚ್ಚು ಪ್ರಸಿದ್ದ ವ್ಯಕ್ತಿಗಳನ್ನು ಕರೆಸಿ ಸಮಾಜದ ಬದಲಾವಣೆಗೆ ನಾವೇನು ಮಾಡಬಹುದು ಎಂಬುವುದರ ಕುರಿತು ಚರ್ಚೆ ಮಾಡಲಾಗುತ್ತದೆ ಎಂದರು.

ನಿವೃತ್ತ ತಹಶೀಲ್ದಾರ್‌ ಎಂ.ರುದ್ರಗೌಡ, ಹನುಮರೆಡ್ಡಿ ಬಯ್ನಾಪುರ, ಸುಭಾಷ ಪಾಟೀಲ, ಜಿ.ಲೋಕರೆಡ್ಡಿ, ಎಸ್‌.ಆರ್‌.ಹಿರೇಮಠ, ಟಿ.ಬಸವರಾಜ, ಪ್ರಕಾಶ ಪಾಟೀಲ, ನರಸಿಂಹರಾವ್‌ ಕುಲಕರ್ಣಿ, ಬಾಬು ಸಿ. ಹಟ್ಟಿ, ಶಿವಶಂಕರಪ್ಪ ಆಲ್ಕೋಡ, ಶೇಖರಪ್ಪ ರಾಥೋಡ, ಫಕ್ರುದ್ದೀನ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next